Revenue Adalat program was successfully held in Tholasikere of Mahadeshwar Betta Gram Panchayat.

ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ಕ್ಷೇತ್ರ ವ್ಯಾಪ್ತಿಯಲ್ಲಿ ಸಾಮನ್ಯ ಜನರಿಗೆ ರಾಜ್ಯ ಸರ್ಕಾರದ ಯೋಜನೆಯನ್ನು ತಿಳಿ ಹೇಳಿ ನೈಜ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸರ್ಕಾರದ ಸವಲತ್ತುಗಳನ್ನು ನೀಡುವುದೆ ಇಂತಹ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದು ತಹಶಿಲ್ದಾರಾದ ಎಂ ಗುರುಪ್ರಸಾದ್ ತಿಳಿಸಿದರು .
ತಾಲ್ಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ತೊಳಸಿಕೆರೆ ಗ್ರಾಮದಲ್ಲಿ ನಡೆದ ಪಿಂಚಣಿ ಅದಾಲತ್ ಮತ್ತು ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ
ಒಟ್ಟು 18 ಅರ್ಜಿಗಳು ಸಲ್ಲಿಕೆಯಾದವು ಅವುಗಳ ಪೈಕಿ
12 ಪೌತಿ ,1 O yA P, 2 DWP,
3 ತಿದ್ದುಪಡಿ ಅರ್ಜಿಗಳು ಸ್ವೀಕೃತಿಯಾಗಿವೆ ಎಂದು ಗ್ರಾಮ ಆಡಳಿತ ಅಧಿಕಾರಿ ವಿನೋದ್ ತಿಳಿಸಿದರು . ಇದೇ ಸಮಯದಲ್ಲಿ ಗ್ರಾಮಸ್ಥರು
ರಸ್ತೆ,ಕುಡಿಯುವ ನೀರು ವಿದ್ಯುತ್ ಸಮಸ್ಯೆ ಕುರಿತು ಅರ್ಜಿ ಸಲ್ಲಿಸಿದರು ಹಾಗೂ ಸ್ಥಳದಲ್ಲೇ ಎರಡು ಆದೇಶ ಪ್ರತಿಗಳನ್ನು ಅಧಿಕಾರಿಗಳು ನೀಡಿದರು. ಇದೇ ಸಂದರ್ಭದಲ್ಲಿ ,ಉಪ ತಹಶಿಲ್ದಾರರಾದ ಸುರೇಖ ,ಆರ್ ಐ ಶಿವಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು..