Sahitya Sangamesh N Javadi is a versatile personality.
ಬಸವಕಲ್ಯಾಣ: ರೈತ ಕುಟುಂಬದ ಕುಡಿ, ಸೃಜನಶೀಲ ಬರಹಗಾರ, ವೈಜ್ಞಾನಿಕ ವಿಚಾರಗಳನ್ನು ನೇರವಾಗಿ ಪ್ರತಿಪಾದಿಸುವ ಎದೆಗಾರಿಕೆಯ ಅಂಕಣಕಾರ,
ಬಹುಮುಖ ವ್ಯಕ್ತಿತ್ವದ ಸಾಹಿತಿ ಸಂಗಮೇಶ ಎನ್ ಜವಾದಿ ಎಂದು ಹಿರಿಯ ಸಾಹಿತಿ ಡಾ. ಸೋಮನಾಥ ಯಾಳವಾರ ನುಡಿದರು.
ನಗರದ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಬಸವಕಲ್ಯಾಣ ರವರು ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಲ್ಲಿ ಹಮ್ಮಿಕೊಂಡ ಶರಣ ವಿಜಯೋತ್ಸವ ನಾಡಹಬ್ಬ, ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಗಮೇಶ ಎನ್ ಜವಾದಿ ಯವರ ಮೂರನೇ ಕೃತಿ ‘ನಾ ಕಂಡ ಸಂಸ್ಕೃತಿ ಚಿಂತಕರು’ ಎನ್ನುವ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು ಸಂಸ್ಕೃತಿ, ಶಿಸ್ತು, ಸಭ್ಯತೆ, ದಯೆ, ಸಹೋದರತ್ವ, ಸಹಬಾಳ್ವೆ, ಸಮಾನತೆ, ಅನುಕಂಪ, ಜೀವನ ನಿಷ್ಠೆ, ಮಾನವ ಸಂಬಂಧ, ನಾಡು – ನುಡಿ, ಭಾವೈಕ್ಯತೆ – ಸೌಹಾರ್ದತೆ, ದೇಶಾಭಿಮಾನ ಮೂಡಿಸುವ ಪರಿಮಳಯುಕ್ತ ಪುಷ್ಪಗಳಿಂದ ಪೋಣಿಸಿರುವ ಕೃತಿಯೇ ‘ನಾ ಕಂಡ ಸಂಸ್ಕೃತಿ ಚಿಂತಕರು’ ಕೃತಿಯಾಗಿದೆ. ಈ ಅದ್ಭುತ ಕೃತಿ 12 ನೇ ಶತಮಾನದ ಬಸವಾದಿ ಶರಣರಾದಿಯಾಗಿ ಇಂದಿನ ಧೀಮಂತ ವ್ಯಕ್ತಿತ್ವ ನಿಸ್ವಾರ್ಥ ಸೇವೆ, ಅನನ್ಯ ಸಾಧನೆ ಮಾಡಿರುವ ಸಾಧಕರನ್ನು ನಾಡಿಗೆ ಪರಿಚಯಿಸಿದ್ದಾರೆ. ಇಂತಹ ಅಮೂಲ್ಯವಾದ ಮಾಲೆ ಕನ್ನಡ ಕುವರರ ಶ್ರೀಕಂಠಕ್ಕೆ ತೊಡಗೆಯಾಗಿ ನೀಡಿದ ಸಂಗಮೇಶ ಎನ್ ಜವಾದಿ ಯವರ ಸಾಹಿತ್ಯ ಸೇವೆ
ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಮೈಲಿಗಲ್ಲು. ಇವರ ಸಾಹಿತ್ಯ ಸೇವೆ ಅಜರಾಮರವಾದದ್ದು, ಅಷ್ಟೇ ಜನಪರ ಶ್ರೇಷ್ಠ ಕೃತಿಯಾಗಿ ಮೂಡಿ ಬಂದಿದೆ.ಇದಕ್ಕೆ ಜವಾದಿಯವರು ಅಭಿನಂದನಾರ್ಹರು.ಇನ್ನು ಇವರಿಂದ ಹೆಚ್ಚು ಹೆಚ್ಚು
ಕೃತಿಗಳು ಹೊರಬರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿಯ ಶರಣ ವಿರೇಶ ಜಿ ಪಾಟೀಲ ರವರು ವಿಶೇಷ ಉಪನ್ಯಾಸ ನೀಡಿದರು.
ಪೂಜ್ಯ ಗಂಗಾಂಬಿಕೆ ಅಕ್ಕನವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶರಣ ರೇವಣಪ್ಪ ರಾಯವಾಡೆ ವಹಿಸಿಕೊಂಡಿದ್ದರು.
ಸಮಾರಂಭದಲ್ಲಿ ಶರಣ ಜೈರಾಜ್ ಖಂಡ್ರೆ,ಶರಣ ವಿ ಬಿ ಹಿರೇಗೌಡರು, ಶರಣ ಶಿವಲಿಂಗಯ್ಯಾ ಸ್ವಾಮಿ, ಶರಣ ಕಾಶಪ್ಪ ಸಕ್ಕರಬಾವಿ,ಶರಣ ಭೀಮಾಶಂಕರ ಕುರಕೋಟೆ,ಶರಣ ದೇವಿಂದ್ರಪ್ಪಾ ಗುಣತೂರೆ,ಶರಣ ವಿರೇಶ ಕುಂಬಾರ,ಶರಣ ಶಿವಬಸಪ್ಪ ಚನ್ನಮಲ್ಲೆ,ಶರಣ ಸಿದ್ರಾಮ ಬಿರಾದಾರ,ಶರಣ ಸಂಗಮೇಶ ಎನ್ ಜವಾದಿ, ಶರಣ ಭೀಮಶೆಟ್ಟಿ ವಡ್ಡನಕೇರಾ,ಶರಣ ಆಕಾಶ ಖಂಡಾಳೆ,ಶರಣ ಬಸವಕುಮಾರ ಕವಟೆ,ಶರಣ ಸುನಿಲ್ ಹೊಳಕುಂದೆ,ಶರಣ ಶಿವಕುಮಾರ ಕುದುರೆ,ಶರಣ ಸಂತೋಷ ಮಡಿವಾಳ,ಶರಣೆ ಸುನೀತಾ ಮಾಹಾಲಿಂಗ, ಶರಣೆ ಸುವರ್ಣಾ ಶಾಶೆಟ್ಟಿ, ಶರಣೆ ಮಾಹಾನಂದ ಮಾಶಾಳಕರ,ಶರಣ ರೇವಣಸಿದ್ಧೇಶ್ವರ,ಶರಣೆ ಜ್ಯೋತಿ,ಶರಣ ಸಂಜುಕುಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.