KIA: Punctuality – Kempegowda International Airport is number one in the world

ಬೆಂಗಳೂರು: ವಿಮಾನಗಳ ಟೇಕ್ ಆಫ್ ಸಮಯ ಪಾಲನೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ವು ವಿಶ್ವದಲ್ಲೇ ನಂಬರ್ ಒನ್ ಸ್ಥಾನ ಪಡೆದಿದೆ. ಕಳೆದ ೩ ತಿಂಗಳುಗಳಿಂದ ಸತತವಾಗಿ ಈ ಹಿರಿಮೆಗೆ ಕೆಐಎ ಪಾತ್ರವಾಗಿದೆ.

ಪ್ರಯಾಣಿಕರಿಗೆ ಸೂಕ್ತ ಸಮಯದಲ್ಲಿ ವಿಮಾನ ಸೇವೆ ಒದಗಿಸುವ ನಿಟ್ಟಿನಲ್ಲಿ ಕೆಐಎ ಸದಾ ಶಿಸ್ತು ಪಾಲಿಸಿದೆ. ಏವಿಯೇಷನ್ ಅನಾಲಿಟಿಕ್ಸ್ ಸಂಸ್ಥೆ ಸಿರಿಯಮ್ ಪ್ರಕಟಿಸಿರುವ ವರದಿ ಪ್ರಕಾರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸಮಯ ಪಾಲನೆಯಲ್ಲಿ ಜುಲೈ ತಿಂಗಳಲ್ಲಿ ಶೇ.೮೭.೫೧ರಷ್ಟು, ಆಗಸ್ಟ್‌ನಲ್ಲಿ ಶೇ.೮೯.೬೬ರಷ್ಟು ಹಾಗೂ ಸೆಪ್ಟಂಬರ್‌ನಲ್ಲಿ ಶೇ.೮೮.೫೧ರಷ್ಟು ಗುರಿ ಸಾಧಿಸಿದೆ. ಕೆಐಎ ಹೊರತುಪಡಿಸಿ ಸಮಯ ಪಾಲನೆಯಲ್ಲಿ ವಿಶ್ವದ ಟಾಪ್ ಐದರ ಪಟ್ಟಿಯಲ್ಲಿ ದೇಶದ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾನ ಪಡೆದಿದೆ.