Kalyan Karnataka Festival Day: Minister unveils government’s achievements
ಕೊಪ್ಪಳ ಸೆಪ್ಟೆಂಬರ್ 17 (ಕರ್ನಾಟಕ ವಾರ್ತೆ): 76ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಸಮಾರಂಭವು ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 17ರಂದು ಅರ್ಥಪೂರ್ಣವಾಗಿ ನಡೆಯಿತು.
ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ರಾಷ್ಟç ಧ್ವಜಾರೋಹಣ ನೆರವೇರಿಸಿ ಬಳಿಕ ಜಿಲ್ಲೆಯ ಸಾರ್ವನಿಕರನ್ನುದ್ದೇಶಿಸಿ ಮಾತನಾಡುತ್ತ ರಾಜ್ಯ ಸರ್ಕಾರವು 100 ದಿನಗಳಲ್ಲಿ ಕೈಗೊಂಡ ಸಾಧನೆಗಳನ್ನು ತಿಳಿಸಿದರು.
ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಾದ ಶಕ್ತಿ ಯೋಜನೆಯು ಕಳೆದ ಜೂನ್ 11ರಂದು ಕೊಪ್ಪಳ ಜಿಲ್ಲೆಯಲ್ಲಿ ಸಹ ಅನುಷ್ಠಾನಕ್ಕೆ ಬಂದಿದ್ದು, ಜೂನ್ 06ರಿಂದ ಸೆಪ್ಟೆಂಬರ್ 10ರವರೆಗೆ ಒಟ್ಟು 168.05 ಲಕ್ಷ ಪ್ರಯಾಣಿಕರಲ್ಲಿ 91.22 ಲಕ್ಷ ಮಹಿಳೆಯರು ಪ್ರಯಾಣಿಸಿ ಶೇಖಡಾ 54.28ರಷ್ಟು ಮಹಿಳೆಯರು ಉಚಿತ ಬಸ್ ಸೌಲಭ್ಯ ಪಡೆದಿದ್ದಾರೆ. ಜೂನ್-2023ರ ಮಾಹೆಯಲ್ಲಿ 17.43 ಲಕ್ಷ ಮಹಿಳೆಯರು, ಜುಲೈ-2023ರ ಮಾಹೆಯಲ್ಲಿ 32.55 ಲಕ್ಷ ಮಹಿಳೆಯರು ಹಾಗೂ ಆಗಸ್ಟ್-2023ರ ಮಾಹೆಯಲ್ಲಿ 32.93 ಲಕ್ಷ ಮಹಿಳೆಯರು ಮತ್ತು ಸೆಪ್ಟೆಂಬರ್ 01 ರಿಂದ 10 ರವರೆಗೆ 8.31 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರವು “ಗೃಹಜ್ಯೋತಿ” ಯೋಜನೆಯನ್ನು ಕಳೆದ ಜುಲೈ 1 ರಿಂದ ಜಾರಿ ಮಾಡಲಾಗಿದೆ. ಆಗಸ್ಟ್ 28 ರವರೆಗೆ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ “ಗೃಹ ಜ್ಯೋತಿ” ಯೋಜನೆಯಲ್ಲಿ ಒಟ್ಟು 2,97,122 ಗ್ರಾಹಕರ ಪೈಕಿ 2,66,440 ಫಲಾನುಭವಿಗಳು ಅರ್ಜಿ ನೋಂದಾಯಿಸಿರುತ್ತಾರೆ ಎಂದರು.
ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ನಲ್ಲಿ ನಮೂದಿಸಿರುವಂತೆ ಕುಟುಂಬದ ಅರ್ಹ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂ.ಗಳ ಆರ್ಥಿಕ ಸೌಲಭ್ಯ ಗೃಹಲಕ್ಷಿö್ಮ ಯೋಜನೆಯಡಿ ನೀಡಲಾಗುತ್ತದೆ. ಈ ಗೃಹಲಕ್ಷಿö್ಮ ಯೋಜನೆಯಡಿ ನೋಂದಣಿಯಾದ ಅರ್ಹ ಫಲಾನುಭವಿಗಳಿಗೆ ಬಿಡುಗಡೆಯಾದ ಅನುದಾನ 55.77 ಕೋಟಿ ರೂ.ಗಳಲ್ಲಿ 1ನೇ ಹಂತದಲ್ಲಿ 96,775 ಅರ್ಹ ಫಲಾನುಭವಿಗಳಿಗೆ 19.35 ಕೋಟಿ ರೂ.ಗಳ ಧನಸಹಾಯ ಜಮಾ ಮಾಡಲಾಗಿದೆ. 2ನೇ ಹಂತದಲ್ಲಿ 1,27,246 ಅರ್ಹ ಫಲಾನುಭವಿಗಳಿಗೆ 25.44 ಕೋಟಿ ರೂ.ಗಳ ಜಮೆ ಪ್ರಕ್ರಿಯೆ ನಡೆಯುತ್ತಿದೆ. ಪ್ರಸ್ತುತ 44.80 ಕೋಟಿ ರೂ.ಗಳ ಸಹಾಯಧನ ಬಿಡುಗಡೆ ಮಾಡಲಾಗಿದ್ದು 10.97 ಕೋಟಿ ರೂ.ಗಳ ಅನುದಾನ ಉಳಿದಿದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಅಂತ್ಯೋದಯ 37,505 ಹಾಗೂ ಬಿಪಿಎಲ್ 2,91,162 ಸೇರಿ ಒಟ್ಟು 3,28,667 ಪಡಿತರ ಚೀಟಿಗಳಿದ್ದು ಅವುಗಳಲ್ಲಿನ ಒಟ್ಟು 11,76,490 ಸದಸ್ಯರಿಗೆ ಸರ್ಕಾರದ ಎನ್.ಎಫ್.ಎಸ್.ಎ ಕಾಯ್ದೆಯಂತೆ ಪ್ರತಿ ಸದಸ್ಯರಿಗೆ 3 ಕೆ.ಜಿ. ಅಕ್ಕಿ, 2 ಕೆ.ಜಿ ಜೋಳ ಸೇರಿ ಒಟ್ಟು 5 ಕೆ.ಜಿ ಆಹಾರಧಾನ್ಯವನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಂತೆ ಹೆಚ್ಚುವರಿಯಾಗಿ ನೀಡಬೇಕಾದ 5 ಕೆ.ಜಿ ಅಕ್ಕಿ ಬದಲಿಗೆ ಪ್ರತಿ ಕೆ.ಜಿ ಗೆ 34 ರೂ.ದಂತೆ ಪ್ರತಿ ಸದಸ್ಯರಿಗೆ 170 ರೂ.ದಂತೆ ನೇರ ನಗದು ವರ್ಗಾವಣೆ ಮೂಲಕ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಜುಲೈ-2023ರ ಮಾಹೆಯಲ್ಲಿ 2,61,996 ಪಡಿತರ ಕುಟುಂಬಗಳ ಮುಖ್ಯಸ್ಥರ ಖಾತೆಗೆ 16.05 ಕೋಟಿ ರೂ.ಹಣ ಜಮಾ ಮಾಡಲಾಗಿದೆ. ಆಗಷ್ಟ್-2023ರ ಮಾಹೆಯಲ್ಲಿ 2,72,398 ಪಡಿತರ ಕುಟುಂಬಗಳ ಮುಖ್ಯಸ್ಥರ ಖಾತೆಗೆ 16.67 ಕೋಟಿ ರೂ. ಹಣ ಜಮಾ ಮಾಡಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಪ್ರಗತಿಯನ್ನು ವಿವರಿಸಿದರು.
ವಿವಿಧ ಇಲಾಖೆಗಳ ಸಾಧನೆ: ಜಿಲ್ಲಾ ಪಂಚಾಯತ್‌ನಿAದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 2023-24ನೇ ಸಾಲಿಗೆ 82 ಲಕ್ಷ ಮಾನವ ದಿನಗಳ ಸೃಜನೆಯ ಗುರಿಯಿದ್ದು, ಸೆಪ್ಟಂಬರ್ 12ರವರೆಗೆ 73.51 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ.89.64ರಷ್ಟು ಪ್ರಗತಿ ಸಾಧಿಸಲಾಗಿದೆ. ಘನತ್ಯಾಜ್ಯ ವಿಲೇವಾರಿ ಘಟಕಗಳಡಿ ಜಿಲ್ಲೆಯ 153 ಗ್ರಾಮ ಪಂಚಾಯತಿಗಳ ಡಿಪಿಆರ್‌ಗಳನ್ನು ಮಂಜೂರು ಮಾಡಿ ಶೇ.100 ಗುರಿ ಸಾಧನೆ ಮಾಡಲಾಗಿದೆ.
ಈ ವರ್ಷ ಜಿಲ್ಲೆಯಲ್ಲಿ ವಾಡಿಕೆ ಮಳೆ 358 ಮಿ.ಮೀ ಇದ್ದು ವಾಸ್ತವವಾಗಿ 291 ಮೀ.ಮಿ. ಮಳೆಯಾಗಿದೆ. ಶೇ.19ರಷ್ಟು ಮಳೆ ಕಡಿಮೆ ಆಗಿದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಗುರಿ 3.08 ಲಕ್ಷ ಹೆಕ್ಟರ್ ಪೈಕಿ 2.93 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕೊಪ್ಪಳ ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆಯುತ್ತಿದೆ.
2023-24ನೇ ಸಾಲಿನಲ್ಲಿ 1 ರಿಂದ 10ನೇ ತರಗತಿಯವರೆಗೆ ಸರಕಾರಿ 1,93,820, ಅನುದಾನಿತ 19,457, ಅನುದಾನ ರಹಿತ 62,941 ಹಾಗೂ ಇತರೆ ಶಾಲೆಗಳಲ್ಲಿ 12,825 ಸೇರಿ ಜಿಲ್ಲೆಯಲ್ಲಿ ಒಟ್ಟು 2,89,043 ಮಕ್ಕಳ ದಾಖಲಾತಿಯಾಗಿದೆ. ಜ್ಞಾನ ಜ್ಯೋತಿ ಕಾರ್ಯಕ್ರಮದ ಮೂಲಕ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಚಿಗುರು ಪುಸ್ತಕ ವಿತರಿಸಿ ಉತ್ತೇಜನ ನೀಡಿದೆ ಮತ್ತು ಕಲಬುರಗಿ ವಿಭಾಗದಿಂದ ಕಲಿಕಾಸರೆ ಪುಸ್ತಕ ನೀಡಲಾಗಿದೆ. ಇದು ಫಲಿತಾಂಶ ಉತ್ತಮ ಪಡಿಸಲು ಸಹಕಾರಿಯಾಗಿದೆ. ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇಕಡಾವಾರು 90.27 ಇರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಾಧಿಸಿದ ಪ್ರಗತಿಯ ಬಗ್ಗೆ ಸಚಿವರು ಭಾಷಣದಲ್ಲಿ ವಿವರಿಸಿದರು.
ಸಮಾರಂಭದಲ್ಲಿ ಸಂಸದರು, ಶಾಸಕರು, ಅಧಿಕಾರಿಗಳು, ಗಣ್ಯರು, ಪತ್ರಕರ್ತರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇನ್ನೀತರರು ಇದ್ದರು.