Protest by AITU, C Taluk Committee demanding confiscation of municipal properties
ಗಂಗಾವತಿ 14, ಕೋಟ್ಯಾಂತರ ರೂಪಾಯಿ ಮೌಲ್ಯದ ನಗರ ಸಭೆಗೆ ಸಂಬಂಧಿಸಿದ ಆಸ್ತಿಗಳನ್ನು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ವಶಪಡಿಸಿಕೊಂಡಿದ್ದು ಅವುಗಳನ್ನು ಕೆಲವು ಗೊಳಿಸುವುದರ ಮೂಲಕ ನಗರ ಸಭೆ, ಕಂದಾಯ ಇಲಾಖೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಮುಂದಾಗಬೇಕೆಂದು, ಒತ್ತಾಯಿಸಿ ಎ ಐ ಟಿ ಯುಸಿ ತಾಲೂಕ ಸಮಿತಿಯ ನೇತೃತ್ವದಲ್ಲಿ ಗುರುವಾರದಂದು ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು, ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಅಧ್ಯಕ್ಷ ಹುಲುಗಪ್ಪ ಮಾತನಾಡಿ ನಗರಸಭೆಯ ವ್ಯಾಪ್ತಿಯ ಸರ್ವೇ ನಂಬರ್ 202, ಪಹ ಣಿ ಯಲ್ಲಿರುವಂತೆ ನಗರ ಸಭೆಯ ಆಸ್ತಿಯಾಗಿದ್ದು ಇದರ ಬಗ್ಗೆ ಸಮರ್ಪಕವಾಗಿ ಪೌರಾಯುಕ್ತರು ಕೊಪ್ಪಳದ ಸಹಾಯಕ ಆಯುಕ್ತರಿಗೆ ಮಾಹಿತಿಯನ್ನು ನೀಡದೆ ದಾರಿ ತಪ್ಪಿಸುವ ಕೆಲಸ ಮಾಡುವುದರ ಜೊತೆಗೆ ಬಂಡವಾಳ ಶಾಹಿಗಳ ಪರ ನಿಂತಿರುವುದು ಸಮಿತಿ ತೀವ್ರವಾಗಿ ಖಂಡಿಸುತ್ತದೆ, ಈ ಹಿಂದಿನಿಂದಲೂ ಬಂದಂತಹ ಅಧಿಕಾರಿ ವರ್ಗದವರು ನಗರಸಭೆಯ ಆಸ್ತಿಗಳನ್ನು ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿ ಪಟ್ಟ ಭದ್ರ ಹಿತಾಸಕ್ತಿಗಳಿಗೆ ಮಣಿ ಹಾಕುತ್ತಿದ್ದಾರೆ, ಮೇಲಿನ ಸರ್ವೆ ನಂಬರ್ ಒಂದೇ ಅಲ್ಲ ಇಂತಹ ಹಲವಾರು ನಗರ ಸಭೆಯv ಆಸ್ತಿಯನ್ನು ತಮ್ಮ ಇಲಾಖೆಗೆ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವುದು, ದೊಡ್ಡ ದುರಂತವಾಗಿದೆ,, ನಗರದಲ್ಲಿ ಸಾಕಷ್ಟು ಕೂಲಿಕಾರರಿಗೆ ನಿವೇಶನ ಇಲ್ಲ ಸರ್ಕಾರದಿಂದ ಬರಬಹುದಾದ ಸೌಲಭ್ಯಗಳು ತಲುಪುತ್ತಿಲ್ಲ,ಇಂತಹ ಸಂದರ್ಭದಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿಗಳನ್ನು ಖೋ ಟ್ಟಿ ದಾಖಲೆ ಸೃಷ್ಟಿಸಿ, ಫ ರ ಬಾರೆ ಮಾಡುವ ಕೆಲಸ ನಿಲ್ಲಿಸಬೇಕು, ಅದು ಇನಾಂ ಭೂಮಿ ಆಗಿರಬಹುದು, ಕಂದಾಯ ವ್ಯಾಪ್ತಿ ಆಗಿರಬಹುದು, ನಗರ ಸಭೆ ಆಗಿರಬಹುದು, ಇವುಗಳನ್ನು ರಕ್ಷಣೆ ಮಾಡುವುದರ ಮೂಲಕ ಸಂಬಂಧಿಸಿದ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿ ಮನವಿ ಪತ್ರ ಸಲ್ಲಿಸಿದರು ಈ ಸಮಿತಿಯ ಜಿಲ್ಲಾ ಕಾರ್ಯದರ್ಶಿ ತಿಮ್ಮಣ್ಣ ಅಖಿಲ ಕರ್ನಾಟಕ ಕಿಸಾನ್ ರೈತ ಸಂಘದ ಲಕ್ಷ್ಮಣ್ ಅಕ್ಷರ ದಾಸೋಹ ಸಮಿತಿಯ ಜಿಲ್ಲಾ ಅಧ್ಯಕ್ಷ ಸುನಿತಾ, ಗಂಗಮ್ಮ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ನಾಗೇಶ್ ಭೀಮಣ್ಣ ಸೇರಿದಂತೆ ಅಪಾರ ಕಾರ್ಯಕರ್ತರು ಪಾಲ್ಗೊಂಡಿದ್ದರು