Kannada thesis for Hanumanta Heruri Doctoral degree principal.
ಗಂಗಾವತಿ:ತಾಲೂಕಿನ ಹೇರೂರು ಗ್ರಾಮದ ಹನುಮಂತ ಹೇರೂರು ಇವರು ಮಧ್ಯಕಾಲೀನ ಅಯ್ದ ಕನ್ನಡ ಕಾವ್ಯಗಳು:ಭಾಷಿಕ ಅಧ್ಯಾಯ ಎಂಬ ಪ್ರಬಂಧ ಮಂಡಿಸಿದ್ದಕ್ಕೆ ಹಂಪಿಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಕನ್ನಡ ವಿಶ್ವವಿದ್ಯಾಲಯ
ಹಂಪಿ, ವಿದ್ಯಾರಣ್ಯ, ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಇತ್ತೀಚಿಗೆ ಜರುಗಿದ
ಮೌಖಿಕ ಪರೀಕ್ಷೆಯಲ್ಲಿ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ
ಭಾಷಾ ನಿಕಾಯದ ಡೀನ ಡಾ. ಎಫ್.ಟಿ ಹಳ್ಳಿಕೇರಿ, ಆಂತರಿಕ ವಿಷಯ ತಜ್ಞ ಡಾ. ಚನ್ನವೀರಪ್ಪ, ಮೌಲ್ಯಮಾಪಕ ಡಾ. ರಾಜಪ್ಪ ದಳವಾಯಿ, ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥ ಡಾ. ಪಿ. ಮಹಾದೇವಯ್ಯ, ಪ್ರಾಧ್ಯಾಪಕರಾದ ಡಾ. ಡಿ. ಪಾಂಡುರಂಗ ಬಾಬು, ಡಾ. ಅಶೋಕಕುಮಾರ ರಂಜೇರೆ ಅವರ ಉಪಸ್ಥಿತರಿದ್ದರು.
ಪರಿಚಯ:ಹನುಮಂತ ಹೇರೂರು ಅವರು ಸಹಾಯಕ ಪ್ರಾಧ್ಯಾಪಕರಾದ ಡಾ. ಅರವಿಂದ ಕೆ ಪೂಜಾರ ಅವರ ಮಾರ್ಗದರ್ಶನದಲ್ಲಿ “ಮಧ್ಯಕಾಲೀನ ಆಯ್ದ ಕನ್ನಡ ಕಾವ್ಯಗಳು: ಭಾಷಿಕ ಅಧ್ಯಯನ” ಎಂಬ ವಿಷಯ ಕುರಿತು ಪಿಎಚ್.ಡಿ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹೇರೂರು ಗ್ರಾಮದ ಬಡ ಕುಟುಂಬದ ಹನುಮಂತ ಹೇರೂರು ಅವರು ಸಂಶೋಧನಾ ವಿಷಯದ ಜೊತೆ ಜೊತೆಗೆ ಸೃಜನಶೀಲ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಇವರ ಸಾಹಿತ್ಯ ಕೃತಿಗಳಾದ “ಹದ್ದುಗಳ ನೆರಳಲ್ಲಿ” ಎಂಬ ಕಥಾಸಂಕಲನ ಹಾಗೆ “ವಿವಿಧ ಆಯಾಮಗಳಲ್ಲಿ ಭಾಷಿಕ ಚಿಂತನೆ” ಎಂಬ ವಿಮರ್ಶ ಲೇಖನಗಳ ಕೃತಿಯನ್ನು ಪ್ರಕಟಿಸಿದ್ದಾರೆ.