Breaking News

ರಾಯಚೂರಿನ ವೈದ್ಯರಾದ ಜಯಪ್ರಕಾಶಪಾಟೀಲ ಬೆಟ್ಟದೂರು ಅವರಿಗೆ ಪೂರ್ಣಪ್ರಮಾಣದ ಪೋಲೀಸ್ ರಕ್ಷಣೆ ಕೊಡಲು ಮನವಿ

Plea to provide full police protection to Raichur doctor Jayaprakash Patil Bettadur

ಜಾಹೀರಾತು


ಕೊಪ್ಪಳ:ರಾಯಚೂರಿನ ಖ್ಯಾತ ತಜ್ಞ ವೈದ್ಯರಾದ ಶ್ರೀ ಜಯಪ್ರಕಾಶ ಪಾಟೀಲ ಬೆಟ್ಟದೂರು ಅವರು
ದಿ:೩೧-೦೮-೨೦೨೩ ರಂದು ರಾಯಚೂರಿನಿಂದ ಮಾನ್ವಿಗೆ ತೆರಳುವಾಗ ಮಾರ್ಗ ಮದ್ಯೆ ೭ ಮೈಲಿ
ಕ್ಯಾಂಪ ಹತ್ತಿರದ ತಿರುವಿನಲ್ಲಿ ಅಪರಚಿತ ದುಷ್ಕರ್ಮಿಗಳು ಬೆಟ್ಟದೂರು ಅವರು
ಚಲಿಸುತ್ತಿದ್ದ ಕಾರಿನಡೆಗೆ ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಅವರು
ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆಲವು ದಿನಗಳ ಹಿಂದೆ ಇವರಿಗೆ ಅಪರಿಚಿತರು ದೂರವಾಣಿ ಮುಖಾಂತರ ಸಂಪರ್ಕಿಸಿ,
ಸುಮಾರು ೩೫ ಲಕ್ಷ ರೂಪಾಯಿ ಮೌಲ್ಯದ ಕೊಡುವಂತೆ ಒತ್ತಾಯಿಸಿದ್ದರಂತೆ ಹಾಗೂ ಜೀವ
ಬೆದರಿಕೆ ಹಾಕಿದ್ದರಂತೆ. ಆ ಕುರಿತು ವೈದ್ಯರು ರಾಯಚೂರು ಪೋಲೀಸರಿಗೆ ದೂರು
ಸಲ್ಲಿಸಿದ್ದಾರೆ. ಈಗ ಅವರ ಮೇಲೆ ಗುಂಡಿನ ದಾಳಿ ಮಾಡಿದವರನ್ನು ಪೋಲೀಸ್‌ರು
ಬಂಧಿಸಿದ್ದಾರೆ. ಈ ಘಟನೆಯನ್ನು ಸಂಪೂರ್ಣ ತನಿಖೆ ಒಳಪಡಿಸಿ, ಗುಂಡು ಹಾರಿಸಿದವರ ಹಿಂದಿನ
ಷಢ್ಯAತ್ರವನ್ನು ಬೇಧಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಲು ಹಾಗೂ ವೈದ್ಯರ
ಮೇಲೆ ನಡೆದ ಗುಂಡಿನ ದಾಳಿಯಿಂದಾಗಿ ಈ ಭಾಗದ ಪ್ರಗತಿಪರರು, ವೈದ್ಯರು,
ಸಾಹಿತಿಗಳು ಆತಂಕಕ್ಕೆ ಒಳಗಾಗಿದ್ದೇವೆ. ಕಾನೂನನ್ನು ಯಾರು ಕೂಡ
ಕೈಗೆತ್ತಿಕೊಳ್ಳಬಾರದೆಂದು ನಾವು ಆಶಿಸುತ್ತೇವೆ. ಕಳೆದ ಕೆಲವು ವರ್ಷಗಳಿಂದ
ಜನರ ಸಾಮಾಜಿಕ ಜೀವನದಲ್ಲಿ ದೇವರು, ಧರ್ಮದ ಹೆಸರಿನಲ್ಲಿ ನೈತಿಕ
ಪೋಲೀಸ್‌ಗಿರಿಯನ್ನು ನಡೆಸಿ, ಭಯದ ವಾತಾವರಣ ಸೃಷ್ಟಿಸಿದ ಹಿನ್ನಲೆಯಲ್ಲಿ
ಜನಸಾಮಾನ್ಯರು, ಧಾರ್ಮಿಕ ಅಲ್ಪಸಂಖ್ಯಾತರು, ಬುದ್ಧಿಜೀವಿಗಳು ಜೀವ ಭಯದಲ್ಲೆ
ಬದುಕು ಸಾಗಿಸುವಂತಾಗಿತ್ತು. ನಾವುಗಳೆಲ್ಲಾ ನಿಮ್ಮ ಸರಕಾರ ಪೂರ್ಣ ಪ್ರಮಾಣದಲ್ಲಿ
ಆರಿಸಿಬಂದು ಅಧಿಕಾರ ಸ್ವೀಕಾರ ಮಾಡಿದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದೇವೆ. ಆದರೆ ಈ
ಘಟನೆ ನಮ್ಮನ್ನು ಬೆಚ್ಚಿಬಿಳಿಸಿದೆ.
ಕಾರಣ ರಾಯಚೂರಿನ ವೈದ್ಯರಾದ ಶ್ರೀ ಜಯಪ್ರಕಾಶ ಪಾಟೀಲ ಬೆಟ್ಟದೂರು ಅವರಿಗೆ
ಪೂರ್ಣ ಪ್ರಮಾಣದಲ್ಲಿ ಪೋಲೀಸ್ ರಕ್ಷಣೆಯನ್ನು ಒದಗಿಸಬೇಕು. ಹಾಗೂ ಅವರು ಈ ಹಿಂದೆ
ನೀಡಿದ ದೂರನ್ನು ಗಂಭೀರವಾಗಿ ತನಿಖೆಗೆ ಒಳಪಡಿಸಿ, ಅವರ ಮೇಲೆ ಗುಂಡಿನ ದಾಳಿ
ಮಾಡಿದ ದಷ್ಕರ್ಮಿಗಳ ಹಿಂದಿದ್ದವರನ್ನೂ ಪತ್ತೆ ಮಾಡಿ ಅವರ ಮೇಲೆ ಸೂಕ್ತ
ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ.
ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು
ಕಳಿಸಲಾಯಿತು. ಈ ಸಂದರ್ಭದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಮುಖಂಡರಾದ

ಅಲ್ಲಮಪ್ರಭು ಬೆಟ್ಟದೂರು, ಪಿ.ಯು.ಸಿ.ಎಲ್ ಜಿಲ್ಲಾಧ್ಯಕ್ಷರಾದ ಮಹಾಂತೇಶ ಕೊತಬಾಳ,
ಕರ್ನಾಟಕ ರೈತ ಸಂಘದ (ಎಐಕೆಕೆಎಸ್) ರಾಜ್ಯಾಧ್ಯಕ್ಷರಾದ ಡಿ.ಎಚ್.ಪೂಜಾರ, ಎಐಟಿಯುಸಿ
ಜಿಲ್ಲಾಧ್ಯಕ್ಷರಾದ ಬಸವರಾಜ ಶೀಲವಂತರ, ಗಾಳೆಪ್ಪ ಮುಂಗೋಲಿ, ಸಿ.ಐ.ಟಿ.ಯು ನ ಬಾಳಪ್ಪ
ಹುಲಿಹೈದರ, ಬಸವರಾಜ ನರೇಗಲ್, ಶಿವಪ್ಪ ಹಡಪದ, ನಾಗಪ್ಪ ಮಾದಿನೂರು ಇತರರು
ಇದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.