Breaking News

ಪತ್ರಕರ್ತರು ನಿಷ್ಠೆಯಿಂದ ಸಮಾಜ ತಿದ್ದುವ ಕಾರ್ಯದಲ್ಲಿ ಮಗ್ನ:ಗೌವಸಿದ್ದಪ್ಪ

Journalists faithfully engaged in reforming society: Gauvasiddappa

ಜಾಹೀರಾತು

ಯಲಬುರ್ಗ.ಅ.29.:ಪತ್ರಕರ್ತರು ಮತ್ತು ಟಿವಿ ಮಾಧ್ಯಮ ಪ್ರತಿನಿಧಿಗಳು ತಮ್ಮ ಕಾಯಕದಲ್ಲಿ ನಿಷ್ಠೆಯಿಂದ ವರದಿ ಮಾಡುವ ಮೂಲಕ ಜನಪ್ರತಿನಿಧಿಗಳ ಭ್ರಷ್ಟ ಅಧಿಕಾರಿಗಳ ಎಚ್ಚರಿಸುವ ಮೂಲಕ ಸಮಾಜ ತಿದ್ದುವ ಕಾರ್ಯದಲ್ಲಿ ತೊಡಗುತ್ತಾರೆ ಎಂದು ಕೊಪ್ಪಳ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳಾದ ಗೌವಸಿದ್ದಪ್ಪ ಹೊಸಮನಿ ಹೇಳಿದರು.
ತಾಲೂಕಿನ ಹೊಸಳ್ಳಿ ಗ್ರಾಮ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಸೋಮವಾರ ಕರ್ನಾಟಕ ಪತ್ರಕರ್ತರ ಸಂಘ ತಾಲೂಕ ಘಟಕದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿಗೆ ನಿರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪತ್ರಕರ್ತರು, ಮಾಧ್ಯಮದವರ ಮೇಲೆ ಬಹು ದೊಡ್ಡ ಜವಾಬ್ದಾರಿ ಇದ್ದು ಎಂದಿಗೂ ತಮ್ಮ ನಿಷ್ಠೆಯನ್ನು ಮಿರಬಾರದು ಎಂಬ ಕಿವಿ ಮಾತು ಹೇಳಿದ ಅವರು ಕೇವಲ ಕಡಿಮೆ ಗೌರವಧನ ಪಡೆಯುವ ಪತ್ರಕರ್ತರು ತಮ್ಮ ಕಾರ್ಯದ ಜೊತೆ ಜನರ ಮಧ್ಯೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ ಆದರೆ ಅವರು ಆರ್ಥಿಕತೆ ಸಮಸ್ಯೆಯಿಂದ ಸಂಕಷ್ಟದ ಜೀವನ ಸಾಗಿಸುತ್ತಾ ಮಧ್ಯದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರೋತ್ಸಾಹಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಕಾರ್ಯ ಶ್ಲಾಘನಿಯ ಎಂದರು. ಹಿರಿಯ ಮುಖಂಡರಾದ ಬಸವಲಿಂಗಪ್ಪ ಭೂತೆ ಅವರು ಮಾತನಾಡಿ, ಪತ್ರಕರ್ತರು ತಮಗೆ ಸಂಬಳ ಇಲ್ಲದಿದ್ದರು ಕೂಡಾ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯ ಕುಂದುಕೊರೆತೆಗಳ ಮತ್ತು ವಿವಿಧ ಕಾರ್ಯಕ್ರಮಗಳ ಕುರಿತು ವರದಿ ಮಾಡುತ್ತಾರೆ ಯಾವುದೇ ಸಮಯದಲ್ಲಿ ನಡೆದ ಸತ್ಯ ಘಟನೆಗಳ ವರದಿ ಮಾಡುವಲ್ಲಿ ಹಿಂಜರಿಕೆ ಮಾಡುವದಿಲ್ಲ ಕಾರಣ ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದರು. ಬಳಿಕ ಕೊಪ್ಪಳ ಜಿಲ್ಲಾ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಶರಣಪ್ಪ ಗುಮಗೇರಾ ಮಾತನಾಡಿ ಕರ್ನಾಟಕ ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಪಡೆದ ಪತ್ರಕರ್ತರಿಗೆ ಅಪಘಾತ ಸಂಭವಿಸಿದಲ್ಲಿ ಸುಮಾರು 4ಲಕ್ಷ ರೂ. ಪರಿಹಾರ ನೀಡುವ ಕ್ರಮ ಕೈಗೊಳ್ಳಲಾಗಿದ್ದು ಸದಸ್ಯತ್ವ ಪಡೆಯದ ಪತ್ರಕರ್ತರು ಈ ಸೌಲಭ್ಯ ಪಡೆದುಕೊಳ್ಳುವಂತೆ ಹೇಳಿದ ಅವರು ಈ ಚನ್ನಮ್ಮ ವಸತಿ ಶಾಲೆ ಪ್ರಾಂಶುಪಾಲರ ಕಾರ್ಯವೈಖರಿಯಿಂದ ಅತ್ಯಂತ ಸುಂದರಮಯವಾಗಿ ಹಾಗೂ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಹೆಚ್ಚಿಸುವಲ್ಲಿ ಶ್ರಮಿಸುತ್ತಿದ್ದಾರೆ ಕಾರಣ ಈ ಹೊಸಳ್ಳಿ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮತ್ತು ಓಟ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿರುವ ಕಾರ್ಯ ಶ್ಲಾಘನಿಯ ಎಂದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪತ್ರಕರ್ತರ ಸಂಘದ ಯಲಬುರ್ಗಾ ತಾಲೂಕ ಅಧ್ಯಕ್ಷ ಖಾಜಾವಲಿ ಜರಕುಂಟಿ ಮಾತನಾಡಿ ಈ ಮಕ್ಕಳ ಪ್ರತಿಭಾ ಪುರಸ್ಕಾರ ಮಾಡುವ ಮೂಲಕ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಕಾರ್ಯಕ್ರಮಕ್ಕೆ ಜಿಲ್ಲಾ ವಾರ್ತಾಧಿಕಾರಿಗಳು ಬರುವಂತೆ ಕೇಳಿಕೊಂಡಾಗ ವಿಶ್ವಾಸನಿಯ ಮಾತುಗಳನ್ನಾಡಿದರು ಅದರಂತೆ ವಸತಿ ಶಾಲೆ ಪ್ರಾಂಶುಪಾಲ ವಿರೂಪಾಕ್ಷಪ್ಪ ಹನಮಶೆಟ್ಟಿ ಅವರು ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದರು ಒಟ್ಟಾರೆಯಾಗಿ ಈ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು ಎಂದರು. ಪ್ರಾಸ್ತವಿಕವಾಗಿ ಪತ್ರಕರ್ತರ ಸಂಘದ ಸಂಘಟನಾ ಕಾರ್ಯದರ್ಶಿ ಶ್ರೀಕಾಂತಗೌಡ ಪಾಟೀಲ್ ಮಾತನಾಡಿದರು. ತಾಳಕೇರಿ ಸರಕಾರಿ ಶಾಲೆಯ ಶಿಕ್ಷಕ ದೇವೇಂದ್ರಪ್ಪ ಜಿರ್ಲಿ ಪತ್ರಿಕೆಗಳ ಸ್ಥಿತಿ ಗತಿ ಕುರಿತು ಉಪನ್ಯಾಸ ನೀಡಿದರು. ಬಳಿಕ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ 10ನೇ ತರಗತಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ, ಕನ್ನಡ ಕೋಗಿಲೆ ಅರ್ಜುನ ಇಟಗಿ, ಮುಖಂಡರಾದ ಬಸವಲಿಂಗಪ್ಪ ಭೂತೆ, ಉಪನ್ಯಾಸಕ ದೇವೇಂದ್ರಪ್ಪ ಜಿರ್ಲಿ, ಬಸವರಾಜ ಮಾಳಿ, ಯಾನೂರಪ್ಪ ತಳವಾರ, ಪ್ರಾಂಶುಪಾಲ ವಿ.ಬಿ ಹನಮಶೆಟ್ಟಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಗುಮಗೇರಾ, ಮುಖ್ಯಾಧಿಕಾರಿ ನಾಗೇಶ್, ಸಂಗಪ್ಪ ಬಂಡಿ, ಪತ್ರಕರ್ತ ವೀರಣ್ಣ ತೋಟದ ಸೇರಿ ಇತರರಿಗೆ ಕರ್ನಾಟಕ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು. ಬಸವರಾಜ ಮುಂಡರಗಿ ಸೇರಿ ಇತರರು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಗುಮಗೇರಾ ಸಮ್ಮುಖದಲ್ಲಿ ಸಂಘಕ್ಕೆ ಸೇರ್ಪಡೆಯಾದರು. ಈ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಡಪದ, ಸದಸ್ಯರಾದ ಹುಸೇನ್ ಮೊತೆಖಾನ್, ಎಸ್ ಕೆ ದಾನಕೈ, ಚನ್ನಪ್ಪ ಇಟಗಿ, ಗುರುಬಸಯ್ಯ ಜಡಿಮಠ, ಆದಿ ಎನ್ ಕೆ ಎಸ್ ಸೇರಿ ಇತರರು ಉಪಸ್ಥಿತರಿದ್ದರು.

About Mallikarjun

Check Also

ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಿ,ಶಿರಸ್ತೇದಾರ ರವಿಕುಮಾರ್ ನಾಯಕವಾಡಿ ಸಲಹೆ

Include the name in the voter list, Chief Ravikumar suggested ಜಿಎಚ್ ಎನ್ ಕಾಲೇಜಿನಲ್ಲಿ ಮತದಾರ ಪಟ್ಟಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.