Celebrating Independence Day by drinking and having fun is an insult to gentlemen: Govindaraja Boodagumpa
ಕೊಪ್ಪಳ : ಬೂದಗುಂಪಾ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲಿ ನೂರಾರು ಜನರ ಸಮ್ಮುಖದಲ್ಲಿ ಮತ್ತು ನೂರಾರು ಮಕ್ಕಳ ಸಮ್ಮುಖದಲ್ಲಿ ಸ್ವಾತಂತ್ರೋತ್ಸವದ ದಿನವನ್ನು ಆಚರಿಸಲಾಯಿತು. ಗ್ರಾಮ ಪಂಚಾಯತ ಕಾರ್ಯಾಲಯದ ಧ್ವಜಾರೋಹಣವನ್ನು ಅಧ್ಯಕ್ಷರಾದ ಲಕ್ಷö್ಮವ್ವ ಸಂಗಟಿ ನೆರವೇರಿಸಿದರೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗೋವಿಂದರಾಜ ಬೂದಗುಂಪಾ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ಸ್ವಾತಂತ್ರö್ಯ ಎನ್ನುವುದು ಸುಮ್ಮನೆ ಬಂದಿಲ್ಲ. ಅನೇಕ ಜನರ ವೀರರ ರಕ್ತದ ಕೋಡಿ ಹರಿದಿದೆ. ಆ ರಕ್ತದ ಮಡುವಿನಲ್ಲಿ ನಾವು ಸ್ವಾತಂತ್ರೊ÷್ಯÃತ್ಸವವನ್ನು ಆಚರಣೆ ಮಾಡುತ್ತಿದ್ದೇವೆ. ಕುಡಿದು ಮೋಜು ಮಸ್ತಿ ಮಾಡಿ ಆಚರಣೆ ಮಾಡುವುದಲ್ಲ. ಅದರ ಬದಲಾಗಿ ಸ್ವಾತಂತ್ರೋತ್ಸವಕ್ಕಾಗಿ ಮಡಿದ ಮಹಾವೀರರ ನೆನಪು ಮಾಡಿಕೊಳ್ಳುವುದೇ ನಿಜವಾದ ಸ್ವಾತಂತ್ರೊ÷್ಯÃತ್ಸವದ ದಿನ ಎಂದು ಹೇಳಿದರು.
ಗೋವಿಂದರಾಜ ಬೂದಗುಂಪಾರವರು ಸ್ವಾತಂತ್ರ÷್ಯ ಅಮೃತ ಮಹೋತ್ಸವದ ಅಮೃತ ಸರೋವರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಗೊಂದಿ ಬೆಂಚಿ ಕೆರೆ ಅಭಿವೃದ್ಧಿಯ ಕನಸು ಕಂಡಿದ್ದ ಊರಿನ ಹಿರಿಯರಾದ ದಾಸಪ್ಪ ಕುದುರೆಮೋತಿ ಇವರಿಗೆ ಸನ್ಮಾನಿಸಿದರು ಕಾರ್ಯಕ್ರಮದಲ್ಲಿ ಮಾತನಾಡಿ ” ಅಭಿವೃದ್ಧಿ ಕೆಲಸ ಕೇವಲ ಸರ್ಕಾರ ಮಾಡಬೇಕು ಎಂದು ನಾವು ಕೈಕಟ್ಟಿ ಕುಳಿತರೆ ಅಭಿವೃದ್ಧಿ ಶೂನ್ಯ ಆದ್ದರಿಂದ ಕೇಂದ್ರ ಸರ್ಕಾರ ಅನೇಕ ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ ಈ ಹಿನ್ನೆಲೆಯಲ್ಲಿ ಜನರ ಪರಿಕಲ್ಪನೆಯನ್ನು ಬದಲಾಗುವಂತೆ ಮಾಡುತ್ತಿದೆ, ಸಾರ್ವಜನಿಕ ಕೆಲಸಗಳು ತಮ್ಮದೇ ಸ್ವಂತ ಕೆಲಸ ಅಂದುಕೊAಡು ಮಾಡುವಂತೆ ಇಂತಹ ಯೋಜನೆಗಳನ್ನು ಜನರ ಕೈಗೆ ನೀಡುತ್ತಿದೆ, ಆದ್ದರಿಂದ ಇಂದು ಬರಡುಭೂಮಿಯಾಗಿದ್ದ ಈ ಕೆರೆ ಇವತ್ತು ನೀರು ತುಂಬಿಕೊAಡು ಸಮೃದ್ಧವಾಗಿದೆ, ಇದು ಜನರಿಂದ ಮಾತ್ರ ಸಾಧ್ಯ ಎಲ್ಲವನ್ನು ಸರ್ಕಾರವೇ ಮಾಡಬೇಕೆನ್ನುವುದು ಮೂರ್ಖತನದ ಮಾತು ಇಂತಹ ಕೆಲಸಗಳಿಗೆ ಗ್ರಾಮ ಪಂಚಾಯಿತಿ ಸಾತ್ ನೀಡಿರುವುದು ಕೂಡ ಅಭಿವೃದ್ಧಿಯಾಗಲು ಮುಖ್ಯ ಕಾರಣ ಆದ್ದರಿಂದ ಬೂದುಗುಂಪ ಗ್ರಾಮ ಪಂಚಾಯಿತಿಗೆ ಅಭಿನಂದನೆ ತಿಳಿಸುತ್ತೇನೆ” ಅಂದರು,
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಾಲೂಕ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ÷್ಮಮ್ಮ ಸಂಗಟಿ ಮತ್ತು ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರು, ಮುಖ್ಯ ಶಿಕ್ಷಕರಾದ ರಾಮಣ್ಣ ಶಾವಿ ಮತ್ತು ಸಹ ಶಿಕ್ಷಕರು, ಊರಿನ ಮುಖಂಡರಾದ ಶಾಮಣ್ಣ ಈಳಿಗೆರ್, ಎ ವಿ ಗುರುರಾಜ್, ಆದಪ್ಪ ಕುಂಬಾರ್, ಪಕೀರಪ್ಪ ದೊಡ್ಡಮನಿ, ರಾಮಣ್ಣ ದೊಡ್ಡಮನಿ, ರವಿ ಪೆದ್ಲರ್, ಮಂಜು ದಾಸರ್ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಜೊತೆಗೆ ಸಾಕಷ್ಟು ಜನರು ಹಾಜರಿದ್ದರು.