A celebratory Independence Day celebration at FullGospel Church
ಕೊಪ್ಪಳ : ಕೊಪ್ಪಳ ನಗರದ ಗಣೇಶ ನಗರದಲ್ಲಿರುವ
ಫುಲ್‌ಗಾಸ್ಪೆಲ್ ಚರ್ಚ್ನಲ್ಲಿ ಇಂದು ೭೭ನೇ ಸ್ವಾತಂತ್ರ್ಯೋತ್ಸವ
ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.
೨೬ನೇ ವಾರ್ಡ್ನ ನಗರಸಭೆ ಸದಸ್ಯೆ ಶ್ರೀಮತಿ ದೇವಕ್ಕ ಕಂದಾರಿ
ಧ್ವಜಾರೋಹಣವನ್ನು ನೆರವೇರಿಸಿ, ಹಿರಿಯ ಸ್ವಾತಂತ್ರö್ಯ
ಹೋರಾಟಗಾರರ ತ್ಯಾಗ ಬಲಿದಾನಗಳ ಕುರಿತು ವಿಶ್ಲೇಷಿಸಿ, ಅವರು
ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ನಡೆಯಬೇಕು, ಅಂದಾಗ
ಮಾತ್ರ ಅವರು ಮಾಡಿದ ತ್ಯಾಗ ಬಲಿದಾನಗಳಿಗೆ ಅರ್ಥ ಬರುತ್ತದೆ
ಎಂದು ತಿಳಿಸಿದರು.
ಫುಲ್‌ಗಾಸ್ಪೆಚ್ ಚರ್ಚ್ ಅಫ್ ಕ್ರೆöÊಸ್ಟ್ ಹಿರಿಯ ಸಭಾಪಾಲಕರಾದ ಜೆ.ಪೀಟರ್
ಜೇಮ್ಸ್ ಮಾತನಾಡಿ, ಇಂದಿನ ಯುವಕರು ತಮ್ಮ ಜವಾಬ್ದಾರಿಗಳನ್ನು
ಅರಿತು, ಹಿರಿಯರ ಮಾರ್ಗದರ್ಶನಗಳಿಗೆ ಬೆಲೆ ಕೊಡುವುದು
ಅತ್ಯವಶ್ಯಕ. ಜನಸಮೂಹದೊಂದಿಗೆ ನಿಕಟ ಸಂಪರ್ಕವನ್ನು ಬೆಳೆಸಿ
ಸಮಾಜದ ಮತ್ತು ಇನ್ನಿತರರ ಬೆಳವಣಿಗೆಗೆ ಯುವ ಸಮೂಹ
ಮುಂದೆ ಬರಬೇಕು. ಅಂದಾಗ ನಾವು ಮಾನವರಾಗಿ ಹುಟ್ಟಿದ್ದಕ್ಕೆ
ಸಾರ್ಥಕ ಎಂದು ಹೇಳಿ, ಸ್ವತಂತ್ರೊö್ಯÃತ್ಸವದ ಅಂಗವಾಗಿ ಸರ್ವಜನರ
ಸುಖ ಶಾಂತಿ ಮತ್ತು ನೆಮ್ಮದಿಗಾಗಿ ವಿಶೇಷ ಪ್ರಾರ್ಥನೆಯನ್ನು
ನೆರವೇರಿಸಿದರು. ಇದೇ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿದ
ನಗರಸಭೆ ಸದಸ್ಯೆ ಶ್ರೀಮತಿ ದೇವಕ್ಕ ಕಂದಾರಿಯವರನ್ನು
ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಂಡರಗಿಯ ಫುಲ್ ಗಾಸ್ಫೆಲ್ ಚರ್ಚ್ನ
ಸಭಾಪಾಲಕರಾದ ಕರಿಬಸಪ್ಪ ಐರಾಣಿ ಸೇರಿದಂತೆ ನಗರದ ಹಿರಿಯರಾದ
ದುರ್ಗೇಶಪ್ಪ, ಶಿವಣ್ಣ, ಸಭೆಯ ಹಿರಿಯರಾದ ಗಿರಿಧರ ದನ್ನೂರು,
ನ್ಯಾಯವಾದಿ ಎ.ಬಿ.ರದ್ದಿವಾಡಗಿ ಸೇರಿದಂತೆ ಚರ್ಚ್ನ ವಿಶ್ವಾಸಿಗಳು
ಪಾಲ್ಗೊಂಡಿದ್ದರು.