Purushottama Homa due to leap month,

ಗಂಗಾವತಿ ನಗರದ ಶ್ರೀ ಯೋಗೀಶ್ವರ ಯಜ್ಞವಲ್ಕ ಮಂದಿರದಲ್ಲಿ ರವಿವಾರದ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಪುರುಷೋತ್ತಮ ಯಾಗ ಸಂಪನ್ನಗೊಂಡಿದೆ, ವೇದಮೂರ್ತಿ ಪ್ರದೀಪ್ಆಚಾರ್ ನೇತೃತ್ವದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ ಅಷ್ಟೋತ್ತರ ಪಾರಾಯಣ ಸೇರಿದಂತೆ ಶ್ರೀ ಪುರುಷೋತ್ತಮ ಹೋಮದ ದಾರ್ಮಿಕ ವಿಧಿ ವಿಧಾನಗಳನ್ನು ಮಹಾಗಣಪತಿ ಪೂಜೆಯೊಂದಿಗೆ ಪ್ರಾರ್ಥಿಸಲಾಯಿತು, ತಿರಮುಲ್ ರಾವ್ ಆಲಂಪಲ್ಲಿ ದಂಪತಿಗಳು ಪುರುಷೋತ್ತಮ ಬಹುಮತ ಸಂಕಲ್ಪವನ್ನು ನೆರವೇರಿಸಿದ ರು, ಹೋಮದ ಪೂರ್ಣಾವಧಿ ಬಳಿಕ ಧರ್ಮಸಭೆ ನಡೆಸಲಾಯಿತು ಈ ಸಂದರ್ಭದಲ್ಲಿ ಕಲ್ಬುರ್ಗಿ ಹಾಗೂ ಧಾರವಾಡ ಹೈಕೋರ್ಟ್ ಅಡ್ವಕೇಟ್ ಜನರಲ್ ಮಲ್ಲಾರಿ ರಾವ್, ಕಿಶನ್ ರಾವ್ ಹಾಗೂ ಪಿಎಸ್ಐ ಕಾಮಣ್ಣ ಅವರನ್ನು ಸಮಿತಿಯವರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಮುರುಳಿದ ರ , ರಾಘವೇಂದ್ರ ಲೆಕ್ಕಿಹಾಳ ಮೇಗೂರು ರಾಘವೇಂದ್ರ ಗೋಪಿನಾಥ್ ದಿನ್ನಿ ಗುರುರಾಜ್ ನರಸಿಂಹಮೂರ್ತಿ ಆಲಂಪಲ್ಲಿ ಇತರರು ಪಾಲ್ಗೊಂಡಿದ್ದರು ಬಳಿಕ ಮಹಾಮಂಗಳಾರತಿಯೊಂದಿಗೆ ಧರ್ಮಸಭೆ ಸಂಪನ್ನಗೊಂಡಿತು
Kalyanasiri Kannada News Live 24×7 | News Karnataka
