Breaking News

ಕೊಪ್ಪಳದ ಜ್ಯೋತಿ ಗೊಂಡಬಾಳ ಸೇರಿ ೨೫ ಜನರಿಗೆ ಮಾತೃಭೂಮಿ ರಾಷ್ಟ್ರೀಯ ಪ್ರಶಸ್ತಿ

25 people including Jyoti Gondaba of Koppal have won Matrubhumi National Award


ಕೊಪ್ಪಳ: ಜಿಲ್ಲೆಯ ಮಹಿಳಾ ಸಂಘಟಕಿ, ಹೋರಾಟಗಾರ್ತಿ, ಸಾಮಾಜಿಕ ಚಿಂತಕಿ, ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಸೇರಿ ಬೆಂಗಳೂರಿನ ಪ್ರತಿಷ್ಠಿತ ಮಾತೃಭೂಮಿ ಯುವಕರ ಸಂಘದ ಬೆಳ್ಳಿ ಮಹೋತ್ಸವ ನಿಮಿತ್ಯ ೨೫ ಜನರಿಗೆ ಮಾತೃಭೂಮಿ ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಮಾಡಿದೆ.
ಈ ಕುರಿತು ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಎಸ್. ಬಾಲಾಜಿ ಅವರು ಪ್ರಕಟಣೆ ನೀಡಿ, ಇದೇ ಆಗಸ್ಟ್ ೧೨ ರಂದು ಬೆಂಗಳೂರಿನ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯವನಿಕ ಸಭಾಂಗಣದಲ್ಲಿ ಪ್ರಶಸ್ತಿ ನೀಡಲಿದ್ದು, ಅನೇಕ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸ್ವಾಮಿಗಳು ಅತಿಥಿಗಳಾಗಿ ಬರಲಿದ್ದು, ರಾಜ್ಯದ ವಿವಿಧ ಕ್ಷೇತ್ರದ ೨೫ ಜನ ಪ್ರಮುಖ ಸಾಧಕರಿಗೆ ಪ್ರಶಸ್ತಿ ವಿತರಿಸಲಿದ್ದು, ಯುವ ಸಮೂಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ ಎಂದು ತಿಳಿಸಿದ್ದಾರೆ.
ಸದಾ ಮಹಿಳಾ ಮತ್ತು ಮಕ್ಕಳ ಕಲ್ಯಾಣದಲ್ಲಿ ಮುಂಚೂಣಿಯಲ್ಲಿ ಇರುವ ಮಹಿಳಾ ಸ್ವಾಭಿಮಾನಿ ಸಂಚಲನ ಸಮಿತಿ ಹುಟ್ಟುಹಾಕಿ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ, ಹಕ್ಕಿಪಿಕ್ಕಿ ಸಮುದಾಯದ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ರಾಜ್ಯದ ಗಮನ ಸೆಳೆದ ಇವರು ಮಹಿಳಾ ದೌರ್ಜನ್ಯಗಳನ್ನು ಕಟುವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಅಂತಹ ಎಲ್ಲಾ ಹೋರಾಟಗಳಲ್ಲೂ ಮುಂದೆ ಇರುವ ಕರ್ನಾಟಕ ಸರಕಾರದ ರಾಜ್ಯ ಯುವ ಪ್ರಶಸ್ತಿ ಪಡೆದ ಜಿಲ್ಲೆಯ ಏಕೈಕ ಸಾಧಕಿಗೆ ಈಗ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಮಾಡಿದ ಉತ್ತಮ ಸಾಧನೆಯನ್ನು ಪರಿಗಣಿಸಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ.
ಡಾ. ಸತೀಶಕುಮಾರ ಎಸ್. ಹೊಸಮನಿ (ಗ್ರಂಥಾಲಯ), ಪ್ರಕಾಶ್ ಮೂರ್ತಿ ಎಂ. (ಕನ್ನಡ ಪರಿಚಾರಕ), ಡಾ. ಕೆ. ಎನ್ ವಿಜಯ್ ಕೊಪ್ಪ (ಕಾನೂನು), ಅರವಿಂದ ಮಂಜುನಾಥ್ (ಧಾರ್ಮಿಕ), ಮುನಿಕೃಷ್ಣ ಎನ್. ಪಿ. (ಸಮಾಜ ಸೇವೆ), ಸೂರಿ ಶ್ರೀನಿವಾಸ್ (ಕನ್ನಡ ಸೇವೆ), ವಿನಯ್ ಕನಕನಾಲ್ ಎ. (ಕಾನೂನು), ಗಾಯತ್ರಿ ರಡ್ಡಿ (ಶಿಕ್ಷಣ), ಬಾಲನಗೌಡ ಎಸ್. ಪಾಟೀಲ್ (ಜಾನಪದ), ಡಿ.ಎಮ್. ಸಾಹುಕಾರ್ (ಪತ್ರಿಕೋದ್ಯಮ), ಗಿರೀಶ್ ಲಕ್ಷ್ಮಿನಾರಾಯಣ (ಉದ್ಯಮ), ವಿಠಲ್ ಬಂಟನೂರು (ಕ್ರೀಡೆ), ರವೀಂದ್ರನಾಥ ಸಿರಿವರ (ರಂಗಭೂಮಿ), ಡಾ. ಅಶ್ವಿನಿ ನರಸಣ್ಣನವರ್ (ರಾಷ್ಟ್ರೀಯ ಸೇವಾ ಯೋಜನೆ), ನಾಗೇಶ್ವರ ರಾವ್ ವಿ. (ಕ್ರೀಡೆ), ಬಸವಲಿಂಗಪ್ಪ ನೀಲಕಂಠಪ್ಪ ಹೂಗಾರ (ಕಾನೂನು), ಭಾಗ್ಯ (ರಾಷ್ಟ್ರೀಯ ಸೇವಾ ಯೋಜನೆ), ಹರೀಶ್ ಪಿ. ವಿ. (ಶಿಕ್ಷಣ), ಮಹೇಶ್ ಎ. (ಕೃಷಿ), ಜ್ಯೋತಿ ಎಂ. ಗೊಂಡಬಾಳ (ಮಹಿಳಾ ಸಬಲೀಕರಣ), ಲೋಕೇಶ್ ನಾಯಕ್ (ರಾಷ್ಟ್ರೀಯ ಸೇವಾ ಯೋಜನೆ), ಕರಿಬಸವ ತಡಕಲ್ (ಚಲನಚಿತ್ರ), ಹರೀಶ್ ಗುಂಗೆ (ರಂಗಭೂಮಿ), ವೆಂಕಟೇಶ್ ಚೌದರಿ (ಉದ್ಯಮ), ಡಾ.ಚಂದ್ರ ಎಂ. (ಸಮಾಜ ಸೇವೆ) ರವರು ಪ್ರಶಸ್ತಿಗೆ ಆಯ್ಕೆಯಾಗಿದ್ದು ಅದ್ಧೂರಿ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುವದು ಎಂದು ಡಾ. ಎಸ್. ಬಾಲಾಜಿ ತಿಳಿಸಿದ್ದಾರೆ.

About Mallikarjun

Check Also

screenshot 2025 12 17 18 45 28 37 e307a3f9df9f380ebaf106e1dc980bb6.jpg

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ ಕುಮಾರ್

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.