Anjanadri Goodwill Award to Hanumanthappa Andagi
ಕೊಪ್ಪಳ : ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರಿಗೆ ಗಂಗಾವತಿಯ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಅಂಜನಾದ್ರಿ ಸಾಂಸ್ಕೃತಿಕ ಉತ್ಸವ ಸಮಿತಿ ಹಮ್ಮಿಕೊಂಡ ಅಂಜನಾದ್ರಿ ಸಾಂಸ್ಕೃತಿಕ ಉತ್ಸವದಲ್ಲಿ “ಅಂಜನಾದ್ರಿ ಸದ್ಭಾವನ ಪ್ರಶಸ್ತಿ “ನೀಡಿ ಗೌರವಿಸಲಾಯಿತು. ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಇಲ್ಲಿಯವರೆಗೆ ಗವಿಸಿರಿ, ಗವಿಬೆಳಕು, ವಿಶ್ವಗಿರಿ, ಬಂಡಾಯಗಾರ ಬರಗೂರು, ಕುಂಬಾರರಿಗೆ ಜ್ಞಾನಪೀಠ ಅಭಿನಂದನೆ, ಸೇವಾಸಿರಿ ಸೇರಿದಂತೆ ಒಟ್ಟು 35 ಗ್ರಂಥಗಳನ್ನು ಒಟ್ಟಾರೆ ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಅಂಜನಾದ್ರಿ ಉತ್ಸವ ಸಮಿತಿಯ ಸಂಚಾಲಕರಾದ ಮಹೇಶಬಾಬು ಸರ್ವೆ, ಟ್ರಸ್ಟಿಗಳಾದ ಉಮೇಶ ಪೂಜಾರ, ಶಿವಕುಮಾರ ಹಿರೇಮಠ, ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಗೌರವಾಧ್ಯಕ್ಷರಾದ ಎಂ.ಬಿ. ಅಳವಂಡಿ ಪತ್ರಕರ್ತರಾದ ಎಂ.ಸಾಧಿಕಲಿ, ಜಿ.ಎಸ್. ಗೋನಾಳ, ಮಂಜುನಾಥ ಕೋಳೂರು, ಶರಣಪ್ಪ ಹಾದಿ, ರಾಮನಗೌಡ ಮಾನ್ವಿ, ರಥಶಿಲ್ಪಿಗಳಾದ ಯಲ್ಲಪ್ಪ ಬಡಿಗೇರ, ಲಕ್ಷ್ಮೀದೇವಿ ಬಡಿಗೇರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.