Celebrating Siddu Savadi's birthday by planting saplings

ಸಾವಳಗಿ: ಗ್ರಾಮದ ಚನ್ನಪಣ್ಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೇರದಾಳ ಮತಕ್ಷೇತ್ರ ಶಾಸಕ ಸಿದ್ದು ಸವದಿ ಇವರ ಅಭಿಮಾನಿಗಳು 64 ಸಸಿ ನೆಡುವ ಮೂಲಕ ಸವದಿ ಇವರ ಜನ್ಮದಿನವನ್ನು ಆಚರಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ಸರ್ಕಾರದ ಮಾಜಿ ಭೂ ನ್ಯಾಯ ಮಂಡಳಿ ನಾಮ ನಿರ್ದೇಶಿತ ಸದಸ್ಯ ಉಮೇಶ ಜಾಧವ ಮಾತನಾಡಿ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎನ್ನುವ ಕಲ್ಪನೆ ಮತ್ತು ದೇಶ ಭಕ್ತಿ ಮತ್ತು ಶಿಸ್ತು ಎಲ್ಲದಕ್ಕೂ ಸೈ ಎನ್ನುವರು ಕಾರ್ಯಕರ್ತರ ನಿಜವಾದ ನಾಯಕರು ಎನ್ನುವ ಕಾರಣಕ್ಕೆ ಅವರನ್ನು ನಾವು ಗೌರವಿಸುತೇವೆ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಪಾರ್ಶ್ವನಾಥ ಉಪಾಧ್ಯಾಯ, ಅಪ್ಪುಗೌಡಾ ಪಾಟೀಲ, ಕಿರ್ತಕುಮಾರ್ ನಾಂದ್ರೇಕರ್, ಉಮೇಶ ಮೋಹಿತೆ, ರಾಜು ಶೇಗುಣಸಿ, ಇನೋಬಾ ನ್ಯಾಮಗೌಡ, ರಾಜು ಕರಾಬೆ, ಮಹಾದೇವ ಮಾಳಿ, ನಂದಕುಮಾರ್ ಕನೇರಿ, ಸಂಜು ಮಾಳಿ, ಶಂಕರ ಮಾಳಿ, ಅಶೋಕ್ ಮಾದರ, ಮಹಾದೇವ ಸಂತಿವೂರ, ಜಗದೀಶ್ ವಜ್ರವಾಡ, ಸಿದ್ದು ಪೊಲೀಸ್ ಪಾಟೀಲ, ಬಿಮಪ್ಪ ಹರಕರ, ಬೀಮು ಜಾಧವ, ಸಿದ್ದು ತಳಕೇರಿ, ಲಕ್ಷ್ಮಣ್ ಕುಂಬಾರ, ರಾವಸಾಹೇಬ ಹರಿಶಿಂದೆ, ರಾಮಚಂದ್ರ ಜಮಖಂಡಿ, ಬಸವರಾಜ ಕೋಷ್ಠಿ, ಗಣೇಶ್ ಮಾಳಿ, ರವಿ ಶೇಟರ್, ಸೇರಿದಂತೆ ಹಲವರು ನಾಯಕರು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
