Breaking News

ಮಣಿಪುರದಲ್ಲಿ ಕುಕಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡನಿಯ

Sexual assault on Kuki women in Manipur condemned

ಗಂಗಾವತಿ: ಮಣಿಪುರದ ಜನಾಂಗೀಯ ದಂಗೆಯನ್ನು ವಿರೋದಿಸಿ ನಗರದ ಕೃಷ್ಣ ದೇವರಾಯ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು
ಈ ಸಂದರ್ಭದಲ್ಲಿ CPIML ಲಿಬರೇಶನ್ ರಾಜ್ಯ ಸಮಿತಿ ಸದಸ್ಯರಾದ ಕಾಮ್ರೇಡ್ ಲೇಖಾ ಮಾತನಾಡಿ ಮಣಿಪುರ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು!
ಮಣಿಪುರದಲ್ಲಿ ಕುಕಿ ಮಹಿಳೆಯರನ್ನು ಮೆರವಣಿಗೆ ಮಾಡುವ ವೀಡಿಯೊ ಬಿಜೆಪಿಯ ‘ಡಬಲ್ ಎಂಜಿನ್ ಆಡಳಿತ’ದ ನಿಜವಾದ ಮುಖವನ್ನು ಬಹಿರಂಗಪಡಿಸುತ್ತದೆ ಮತ್ತು ಸಂಘ ಪರಿವಾರದ ಸಾಮೂಹಿಕ ಹಿಂಸಾಚಾರ ಸಂಸ್ಕೃತಿಯ ಭಯಾನಕ ವಾಸ್ತವತೆಯನ್ನು ನೆನಪಿಸುತ್ತದೆ. ಪ್ರಧಾನಿಯವರು ಇಂದಿಗೂ ಕಾಯ್ದುಕೊಂಡಿರುವ ಮೌನವು ಈ ಅಪರಾಧವನ್ನು ಹೆಚ್ಚಿಸಲು ಕಾರಣವಾಗಿದೆಎಂದರು \.

ಜಾಹೀರಾತು

ಕಾಮ್ರೇಡ್ ವಿಜಯ್ D ಮಾತನಾಡಿಮಣಿಪುರದ ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ಇಬ್ಬರು ಕುಕಿ ಮಹಿಳೆಯರ ಮೇಲೆ ಗುಂಪೊಂದು ಲೈಂಗಿಕ ದೌರ್ಜನ್ಯ ಎಸಗಿದ ಭಯಾನಕ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮಹಿಳೆಯರು ಮತ್ತು ಅವರ ಕುಟುಂಬದವರು ಗುಂಪಿನಿಂದ ಪಾರಾಗಲು ಯತ್ನಿಸಿದ್ದರಿಂದ ಗುಂಪು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದೆ. ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಪುರುಷರನ್ನು ಗುಂಪು ಕೊಲೆ ಮಾಡಿದೆ ಎಂದು ವರದಿಗಳು ನಮಗೆ ತಿಳಿಸಿವೆ.

ಈ ಭಯಾನಕ ಘಟನೆ ನಡೆದು ಎರಡು ತಿಂಗಳು ಕಳೆದರೂ ಪೊಲೀಸರು ಅಥವಾ ಮಣಿಪುರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಖಂಡನಿಯಾ ಎಂದರು
ಕಾಮ್ರೇಡ್ ಸಣ್ಣ ಹನುಮಂತಪ್ಪ ಹುಲಿಹೈದರ ಮಾತನಾಡಿ ಮಣಿಪುರವನ್ನು ಆವರಿಸಿರುವ ಜನಾಂಗೀಯ ಘರ್ಷಣೆಯಲ್ಲಿ ಸುಮಾರು 150 ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಬಹುಸಂಖ್ಯಾತ ಮೈತಿ ಸಮುದಾಯದ ಎಸ್‌ಟಿ ಸ್ಥಾನಮಾನದ ಬೇಡಿಕೆಗೆ ಸಂಬಂಧಿಸಿದಂತೆ ಮಣಿಪುರ ಹೈಕೋರ್ಟ್ ಆದೇಶ ತಕ್ಷಣದ ಪ್ರಚೋದನೆಯಾಗಿದೆ.ಈ ಘಟನೆಗೆ ನೈತಿಕ ಹೊಣೆ ಹೊತ್ತು ಮಣಿಪುರದ ಮುಖ್ಯಮಂತ್ರಿ ಎನ್ ಬೀರೆನ್ ಸಿಂಗ್ ಮತ್ತು ಕೇಂದ್ರ ಗೃಹ ಮಂತ್ರಿ ಅಮೀತ್ ಶಾ ರಾಜೀನಾಮೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಬಾಬರ್,ರಮೇಶ,ಚಾಂದ್ ಪಾಷಾ,ಶಿವಮ್ಮ,ಪಾರ್ವತಮ್ಮ,ಲಿಂಗಮ್ಮ,ಇಂದ್ರಮ್ಮ ಇತರರು ಇದ್ದರೂ

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.