Breaking News

ಗ್ರಾಮಗಳನಿರ್ವಹಣೆಯ ಜವಾಬ್ದಾರಿ ನೂತನ ಅಧ್ಯಕ್ಷರ ಮೇಲಿದೆ : ಜ್ಯೋತಿ

The responsibility of managing the villages lies with the new president: Jyoti


ಕೊಪ್ಪಳ : ಗ್ರಾಮಗಳ ನಿರ್ವಹಣೆ, ಅಭಿವೃದ್ಧಿ ಮತ್ತು ಹಸಿರೀಕರಣದ ಜವಾಬ್ದಾರಿ ಪ್ರತಿಯೊಂದು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ಉಪಾಧ್ಯಕ್ಷರ ಮೇಲಿದ್ದು ಅದನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಸಲಹೆ ನೀಡಿದರು.
ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ನೂತನ ಗ್ರಾ. ಪಂ. ಅಧ್ಯಕ್ಷ-ಉಪಾಧ್ಯಕ್ಷರಿಗೆ ಸನ್ಮಾನ ಮಾಡಿ ಸಲಹೆ ನೀಡುತ್ತಿದ್ದಾರೆ. ಕುಕನೂರನ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಕುದರಿಮೋತಿ ಅಧ್ಯಕ್ಷರಾಗಿ ಆಯ್ಕೆಯಾದ ಫರಿದಾ ತಂಬಾಕದರ, ಕೋಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಗಾಳೆಪ್ಪ ಪೂಜಾರ, ಬಂಡಿಹರ್ಲಾಪೂರ ಗ್ರ್ರಾಮ ಪಂಚಾಯತಿ ಅಧ್ಯಕ್ಷೆ ಉಪಾಧ್ಯಕ್ಷ ಅಗಳಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಂಕವ್ವ ಕನಕರಾಜ ಪೂಜಾರ್, ಉಪಾಧ್ಯಕ್ಷರಾದ ಪ್ರಭಾವತಿ ಜಂಬಣ್ಣ ಹೂಗಾರ ಹಾಗೂ ಹಿಟ್ನಾಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಜಾತಾ ಮಾರುತಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಪ್ರತಿ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಮನೆಗೆ ತೆರಳಿ ಸನ್ಮಾನಿಸುತ್ತಿದ್ದಾರೆ. ಇರುವ ಸಮಯವನ್ನು ಬಹಳ ಉತ್ತಮವಾಗಿ ಉಪಯೋಗಿಸಿಕೊಳ್ಳಬೇಕು, ಪಂಚಾಯತಿಯಲ್ಲಿ ಆಗಬೇಕಿರುವ ಕೆಲಸಗಳ ಪಟ್ಟಿ ಮಾಡಿಕೊಂಡು, ಅಲ್ಲಿನ ಆರ್ಥಿಕ ಸಂಪನ್ಮೂಲಗಳನ್ನು ನೋಡಿಕೊಂಡು ಅಭಿವೃದ್ಧಿ ಮಾಡುವದರ ಜೊತೆಗೆ ಜನಜಾಗೃತಿಗೆ ಹೆಚ್ಚು ಹೆಚ್ಚು ಕೆಲಸ ಮಾಡಬೇಕು ಎಂದು ತಿಳಿ ಹೇಳಿದ್ದಾರೆ.
ಗ್ರಾಮ ಪಂಚಾಯತಿಗಳು ತಮ್ಮ ಗ್ರಂಥಾಲಯವನ್ನು ಸರಿಯಾಗಿ ನಿರ್ವಹಿಸಬೇಕು, ವಿಶೇಷ ಚೇತನರಿಗೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ಇಟ್ಟಿರುವ ವಿಶೇಷ ನಿಧಿಯ ಬಳಕೆಯನ್ನು ವಿವೇಚನೆಯಿಂದ ಬಳಸುವದು ಹಾಗೂ ಕ್ರೀಡೆಗೆ ಇಟ್ಟಿರುವ ಹಣವನ್ನು ಉತ್ತಮವಾಗಿ ಕ್ರೀಡಾ ಚಟುವಟಿಕೆಗಳನ್ನು ನಡೆಸುವ ಕೆಲಸ ಆಗಬೇಕಿದೆ ಎಂದು ಹೇಳಿದ್ದಾರೆ.
ಒಂದು ದಶಕದ ಕಾಲ ಅಬ್ದುಲ್ ಮಜೀರ್ ಸಾಬ್ ತರಬೇತಿ ಸಂಸ್ಥೆಯ ಮೂಲಕ ಪಂಚಾಯತ್‌ರಾಜ್ ಕುರಿತ ತರಬೇತಿ ನೀಡಿದ ಅನುಭವವನ್ನು ಎಲ್ಲಾ ನೂತನ ಗ್ರಾ. ಪಂ. ಅಧ್ಯಕ್ಷ-ಉಪಾಧ್ಯಕ್ಷರ ಜೊತೆಗೆ ಹಂಚಿಕೊಳ್ಳಲು ಶೀಘ್ರ ಕಾರ್ಯಕ್ರಮ ರೂಪಿಸಲಾಗುವದು ಅಲ್ಲಿ ಎಲ್ಲರನ್ನೂ ಸನ್ಮಾನಿಸುವದರೊಂದಿಗೆ ಉಪಯುಕ್ತ ಮಾಹಿತಿ ನೀಡಲಾಗುವದು, ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ, ಕ್ರೀಡಾ ಇಲಾಖೆಯ ಸಚಿವರಾದ ಬಿ. ನಾಗೇಂದ್ರ ಅವರನ್ನು ಕರೆಸಿ ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಮತ್ತು ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ ಅವರ ನೇತೃತ್ವದಲ್ಲಿ ಪಕ್ಷದ ಮಾಜಿ ಶಾಸಕರು ಮತ್ತು ಮುಖಂಡರನ್ನು ಸಹ ಆಹ್ವಾನಿಸಿ ಅದ್ಧೂರಿ ಕಾರ್ಯಕ್ರಮ ಮಾಡಲಾಗುವದು ಎಂದು ಜ್ಯೋತಿ ಎಂ. ಗೊಂಡಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.