Kayakalp from Dharmasthala constituency to Savulu Halla lake - Manjunatha Rathi
ಧರ್ಮಸ್ಥಳ ಕ್ಷೇತ್ರದಿಂದ ಸವುಳು ಹಳ್ಳದ ಕೆರೆಗೆ ಕಾಯಕಲ್ಪ – ಮಂಜುನಾಥ ರಾಟಿ
ಕೊಪ್ಪಳ: ಜಿಲ್ಲೆಯ ಶಹಪುರ ಗ್ರಾಮದ ಸವುಳು ಹಳ್ಳದ ಕೆರೆಗೆ ಕಾಯಕಲ್ಪ ನೀಡಲು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸ್ವಾಮಿಯ ಹೆಸರಿನ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಮುಂದಾಗಿದೆ ಎಂದು ಗ್ರಾಮದ ಯುವ ಧುರೀಣರು, ಸಮಾಜ ಸೇವಕರಾದ ಮಂಜುನಾಥ ರಾಟಿ ಅವರು ತಿಳಿಸಿದ್ದಾರೆ.
ಕಳೆದ ನೂರಾರು ವರ್ಷಗಳಿಂದ ಜನ-ಜಾನುವಾರುಗಳ ಜೀವನಾಡಿಯಾಗಿರುವ ಸವುಳು ಹಳ್ಳದ ಕೆರೆ ನಿರ್ಮಾಣಕ್ಕೆ ಗ್ರಾಮಸ್ಥರು ಚರ್ಚಿಸಿದ್ದೆವು. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹ ಸದಸ್ಯರಾಗಿರುವ ತಾವು ಅಧಿಕಾರಿಗಳೊಂದಿಗೆ ಮಾತನಾಡಿದ್ದು ಸೂಕ್ತ ಸ್ಪಂದನೆ ಲಭಿಸಿದೆ. ರಾಷ್ಟಿçÃಯ ಹೆದ್ದಾರಿ-೫೦ ರ ಬದಿಯಲ್ಲಿರುವ ಈ ಕೆರೆ ಅಭಿವೃದ್ಧಿಪಡಿಸಿದರೆ ಜನ-ಜಾನುವಾರುಗಳಿಗೆ ಅನುಕೂಲವಾಗುತ್ತದೆ. ೧೦ ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿರುವ ಗೋಮಾಳ ಸ್ಥಳವು ಸಂಪೂರ್ಣ ಸರ್ಕಾರದ್ದಾಗಿದೆ. ಕೆರೆಯ ದಡದಲ್ಲಿ ಗ್ರಾಮದ ಕುರಿಗಾಹಿಗಳು ಮತ್ತು ದನಗಾಹಿಗಳು ಕಳೆದ ಹಲವಾರು ದಶಕಗಳಿಂದ ಇಲ್ಲಿ ಬೀಡು ಬಿಟ್ಟಿದ್ದಾರೆ. ಕೆರೆ ಅಭಿವೃದ್ಧಿ ಆದರೆ ವರ್ಷಪೂರ್ತಿ ನೀರು ಲಭಿಸುತ್ತದೆ. ಬೇಸಿಗೆ ಕಾಲದಲ್ಲಿ ನೀರಿನ ಬವಣೆಯಿಂದ ಮುಕ್ತಿ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಈ ಕುರಿತು ಶ್ರೀ ತಿರುಗಲ್ ತಿಮ್ಮಪ್ಪ ಶ್ರೀ ಲಕ್ಷಿö್ಮÃದೇವಿ ಮತ್ತು ಶ್ರೀ ತೇರಿನ ಹನುಮಂತರಾಯ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ವೀರಣ್ಣ ಕೋಮಲಾಪುರ ಅವರೊಡಗೂಡಿ ಕೆರೆ ಸ್ಥಳ ಪರಿಶೀಲನೆ ನಡೆಸಿದ ಅವರು, ಈಗಾಗಲೇ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧಿಕಾರಿಗಳೊಂದಿಗೆ ಕೆರೆ ಅಭಿವೃದ್ಧಿ ಕುರಿತು ಚರ್ಚಿಸಲಾಗಿದೆ. ಕೆರೆಯ ಅಭಿವೃದ್ಧಿಗೆ ಧರ್ಮಸ್ಥಳ ಕ್ಷೇತ್ರವು ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಶೀಘ್ರವೇ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ. ಈ ಕೆರೆ ಅಭಿವೃದ್ಧಿಪಡಿಸುವುದರಿಂದ ನೀರು ಸಂಗ್ರಹಗೊAಡು ಅಡವಿ ಜೀವಿಗಳಿಗೆ ಆಸರೆ ಆಗುತ್ತದೆ. ಕುರಿ, ದನಗಳಿಗೆ ವರ್ಷಪೂರ್ತಿ ನೀರು ಲಭಿಸುತ್ತದೆ. ಸುತ್ತಲೂ ಕೃಷಿ ಚಟುವಟಿಕೆಗಳು ನಡೆಯುತ್ತಿರುವುದರಿಂದ ಜಲಮರುಪೂರಣವಾಗುತ್ತದೆ. ಮೇಲಾಗಿ ರಾಷ್ಟಿçÃಯ ಹೆದ್ದಾರಿ ಪಕ್ಕದಲ್ಲಿಯೇ ಇರುವುದರಿಂದ ದಾರಿ ಹೋಕರಿಗೂ ನೀರಿನ ಅವಶ್ಯಕತೆ ಪೂರೈಸಲು ಸಾಧ್ಯವಾಗುತ್ತದೆ ಎಂದು ಮಂಜುನಾಥ ರಾಟಿ ಅವರು ತಿಳಿಸಿದ್ದಾರೆ.
ದಿನಂಪ್ರತಿ ಈ ಭಾಗದಿಂದ ನೂರಾರು ಕೃಷಿ ಕೂಲಿ ಕಾರ್ಮಿಕರು ತಮ್ಮ ದೈನಂದಿನ ಹೊಲ-ಗದ್ದೆಗಳ ಚಟುವಟಿಕೆಗಳಿಗೆ ತೆರಳುತ್ತಿದ್ದಾರೆ. ಬಂಡಿ, ಎತ್ತುಗಳೊಂದಿಗೆ ರೈತರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಪ್ರಾಣಿ, ಪಕ್ಷಿಗಳು ಈ ಭಾಗದಲ್ಲಿ ಹೇರಳವಾಗಿದ್ದು ಕೆರೆ ಅಭಿವೃದ್ಧಿಯಾದಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ನೆರವಾಗುತ್ತದೆ. ಗ್ರಾಮದ ಬಹುತೇಕ ರೈತರ, ಕುರಿಗಾಹಿ ಮತ್ತು ದನಗಾಹಿಗಳ ಏಕೈಕ ಜೀವನಾಡಿಯಾಗಿರುವುದರಿಂದ ಕೆರೆ ಅಭಿವೃದ್ಧಿ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸವುಳು ಹಳ್ಳದ ಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಈರನಗೌಡ(ಸುರೇಶ್) ಪಾಟೀಲ್, ಮಲ್ಲಿಕಾರ್ಜುನ ಕುರಿ, ಗಿರೀಶ್ ಹಿರೇಮಠ, ನಿಂಗಪ್ಪ ನಾಗಲಾಪುರ, ನಿಂಗಜ್ಜ ಚೌಧರಿ, ಅಮರೇಶ್ ಕಟ್ಟಿ, ಹುಲ್ಲೇಶ್ ಸಿಂದೋಗಿ, ಗ್ರಾಮ ಪಂಚಾಯಿತಿ ಸದಸ್ಯರಾದ ಹಾಲಪ್ಪ ತೋಟದ, ಹನುಮಂತ ಗೊಲ್ಲರ, ನಾಗರಾಜ ದೊಡ್ಡಮನಿ, ಗಂಗಮ್ಮ ಪೂಜಾರ ಸೇರಿದಂತೆ ಗ್ರಾಮದ ಸಮಸ್ತರು ಕೆರೆ ಅಭಿವೃದ್ಧಿಯ ಮಹತ್ವದ ಕುರಿತು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
There should be no negligence in the implementation of the Prime Minister's 15-point program -…
Job fair under DDU-GKY scheme ಡಿಡಿಯು-ಜಿಕೆವೈ ಯೋಜನೆಯಡಿ ಉದ್ಯೋಗ ಮೇಳ ಶಿಕ್ಷಣದ ಜತೆ ತಾಂತ್ರಿಕ ಕೌಶಲ್ಯಕ್ಕೆ ಹೆಚ್ಚು ಆದ್ಯತೆ…
51 fans voluntarily donate blood on Appu's 51st birthday. ಅಪ್ಪು ಅವರ 51ನೇ ಹುಟ್ಟು ಹಬ್ಬಕ್ಕೆ…
ಹನೂರು ಕ್ಷೇತ್ರಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಸುತ್ತುರು ಶ್ರೀಗಳ ಬೇಟಿ : ಡಾ. ದತ್ತೇಶ್ ಕುಮಾರ್ . Dr.…
Enact the 2025 Act in the current session and abolish discriminatory waste management fees: 𝗕𝗔𝗙…
Kanakagiri: Private candidates allowed to apply for ITI admission ಕನಕಗಿರಿ: ಐಟಿಐ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಖಾಸಗಿ…