Enact the 2025 Act in the current session and abolish discriminatory waste management fees: 𝗕𝗔𝗙 demands the government
ಪ್ರಸ್ತುತ ಅಧಿವೇಶನದಲ್ಲೇ 𝗞𝗔𝗢𝗠𝗔 𝟮𝟬𝟮𝟱 ಕಾಯ್ದೆ ಜಾರಿಗೊಳಿಸಿ ಹಾಗೂ ತಾರತಮ್ಯದ ತ್ಯಾಜ್ಯ ನಿರ್ವಹಣಾ ಶುಲ್ಕ ರದ್ದುಗೊಳಿಸಿ: ಸರ್ಕಾರಕ್ಕೆ 𝗕𝗔𝗙 ಆಗ್ರಹ
ಬೆಂಗಳೂರು, ಮಾರ್ಚ್ 𝟭𝟳: ಬಹುನಿರೀಕ್ಷಿತ ‘ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ’ಯನ್ನು (𝗞𝗔𝗢𝗠𝗔 𝟮𝟬𝟮𝟱) ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲೇ ಅಂಗೀಕರಿಸಬೇಕು ಹಾಗೂ ಅಪಾರ್ಟ್‌ಮೆಂಟ್ ಸಮುದಾಯಗಳ ಮೇಲೆ ವಿಧಿಸಲಾಗಿರುವ ತಾರತಮ್ಯದಿಂದ ಕೂಡಿದ ಘನತ್ಯಾಜ್ಯ ನಿರ್ವಹಣಾ ಶುಲ್ಕವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡೆರೇಷನ್ (𝗕𝗔𝗙) ಸರ್ಕಾರವನ್ನು ಮನವಿ ಮಾಡಿದೆ.
ಇಂದು ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಫೆಡರೇಷನ್ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು, ಹಳೆಯ 𝟭𝟵𝟳𝟮 ರ ಕಾಯ್ದೆಯ ಬದಲಿಗೆ ಹೊಸ ಕಾನೂನನ್ನು ತರಲಾಗುವುದು ಎಂದು ಮಾನ್ಯ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಭರವಸೆ ನೀಡಿ ಎರಡು ವರ್ಷಗಳು ಕಳೆದಿದೆ. ಜುಲೈ 𝟮𝟬𝟮𝟱 ರಿಂದಲೇ 𝗞𝗔𝗢𝗠𝗔 𝟮𝟬𝟮𝟱 ಕರಡು ಸಿದ್ಧವಾಗಿದೆ. ಕಳೆದ ವರ್ಷ ಡಿಸೆಂಬರ್ 2 ರಂದು ಪತ್ರಿಕಾಗೋಷ್ಠಿಯನ್ನು ನಡೆಸಿ ಬೆಳಗಾವಿ ಅಧಿವೇಶನದಲ್ಲಿ 𝗞𝗔𝗢𝗠𝗔 𝟮𝟬𝟮𝟱 ಕಾಯ್ದೆಯನ್ನು ಅಂಗೀಕರಿಸುವಂತೆ ಒತ್ತಾಯಿಸಲಾಗಿತ್ತು. ಆ ನಂತರ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಬೆಂಗಳೂರು ನಗರದ ಅಪಾರ್ಟ್‌ಮೆಂಟ್ ಫೆಡರೇಷನ್ ಸದಸ್ಯರನ್ನು ಆಹ್ವಾನಿಸಿ ಸಾರ್ವಜನಿಕವಾಗಿ ನಮ್ಮ ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಸಲಹೆಗಳನ್ನು ನೀಡುವ ಮತ್ತು ಅದನ್ನು ಪರಿಶೀಲಿಸುವ ಕಾರ್ಯ ಮುಗಿದಿದ್ದರೂ ಕೂಡಾ ಈ ಮಸೂದೆಯನ್ನು ಇನ್ನೂ ಮಂಡಿಸುವ ತಯಾರಿ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
“ಲಕ್ಷಾಂತರ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ನೀಡಿದ್ದ ಭರವಸೆಗಳ ಬಗ್ಗೆ ಸರ್ಕಾರವನ್ನ ನೆನಪಿಸಲು ನಾವು ಇಂದು ಈ ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದೇವೆ. 𝗞𝗔𝗢𝗠𝗔 𝟮𝟬𝟮𝟱 ಕಾಯ್ದೆ ಅಂಗೀಕಾರದಲ್ಲಿನ ವಿಳಂಬದಿಂದಾಗಿ, ನಾಗರಿಕರು ತಮ್ಮ ಅಪಾರ್ಟ್‌ಮೆಂಟ್‌ಗಳನ್ನು ನಿರ್ವಹಿಸಲು, ವಿವಾದಗಳನ್ನು ಪರಿಹರಿಸಿಕೊಳ್ಳಲು ಮತ್ತು ಮಾಲೀಕತ್ವದ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಕಾನೂನು ಚೌಕಟ್ಟಿಲ್ಲದೆ ಪರದಾಡುವಂತಾಗಿದೆ. ಕರ್ನಾಟಕದಾದ್ಯಂತ ಲಕ್ಷಾಂತರ ಅಪಾರ್ಟ್‌ಮೆಂಟ್ ಮಾಲೀಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಪ್ರಸ್ತುತ ಬಜೆಟ್ ಅಧಿವೇಶನದಲ್ಲೇ ಈ ಕಾಯ್ದೆಯನ್ನು ಅಂಗೀಕರಿಸುವಂತೆ ನಾವು ಸನ್ಮಾನ್ಯ ಉಪಮುಖ್ಯಮಂತ್ರಿಗಳು ಮತ್ತು ಎಲ್ಲಾ ಶಾಸಕರಲ್ಲಿ ಕಳಕಳಿಯಿಂದ ವಿನಂತಿಸುತ್ತೇವೆ,” ಎಂದು 𝗕𝗔𝗙 ಅಧ್ಯಕ್ಷರಾದ ಸತೀಶ್ ಮಲ್ಯ ತಿಳಿಸಿದರು.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (𝗕𝗦𝗪𝗠𝗟) ಇತ್ತೀಚೆಗೆ ನೀಡಿರುವ ನೋಟಿಸ್‌ಗಳ ಬಗ್ಗೆಯೂ ಫೆಡೆರೇಷನ್ ತೀವ್ರ ಕಳವಳ ವ್ಯಕ್ತಪಡಿಸಿತು. ಜನವರಿ 𝟮𝟬𝟮𝟲 ರ ಮಧ್ಯಭಾಗದಿಂದ, ಹೊಸ ನಿಯಮಗಳ ಅಡಿಯಲ್ಲಿ 𝟭𝟬𝟬 ಕ್ಕೂ ಹೆಚ್ಚು ಘಟಕಗಳಿರುವ (𝘂𝗻𝗶𝘁𝘀) ಅಪಾರ್ಟ್‌ಮೆಂಟ್‌ಗಳಲ್ಲಿನ ಘನತ್ಯಾಜ್ಯದ ಮೇಲಿನ ಬಳಕೆದಾರರ ಶುಲ್ಕವನ್ನು ವಿಧಿಸಲು ಅವುಗಳನ್ನು ‘ಬೃಹತ್ ತ್ಯಾಜ್ಯ ಉತ್ಪಾದಕರು’ (𝗕𝘂𝗹𝗸 𝗪𝗮𝘀𝘁𝗲 𝗚𝗲𝗻𝗲𝗿𝗮𝘁𝗼𝗿𝘀) ಎಂದು ಅನ್ಯಾಯವಾಗಿ ವರ್ಗೀಕರಿಸಲಾಗಿದೆ.
𝟮𝟬𝟬𝟬 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಸ್ವತಂತ್ರ ಮನೆಯೊಂದು ಆಸ್ತಿ ತೆರಿಗೆಯ ಮೂಲಕ ತಿಂಗಳಿಗೆ ಕೇವಲ 𝟭𝟬𝟬 ರೂಪಾಯಿಗಳ ನಾಮಮಾತ್ರ ಶುಲ್ಕವನ್ನು ಪಾವತಿಸುತ್ತಿದ್ದರೆ, ಅಪಾರ್ಟ್‌ಮೆಂಟ್ ನಿವಾಸಿಗಳ ಮೇಲೆ ಪ್ರತಿ ಕೆಜಿಗೆ 𝟭𝟮 ರೂಪಾಯಿಗಳ ಶುಲ್ಕವನ್ನು ವಿಧಿಸಲಾಗುತ್ತಿದೆ. ಇದರ ಜೊತೆಗೆ ಶೇ. 𝟭𝟴 ರಷ್ಟು 𝗚𝗦𝗧 (𝟭𝟴% 𝗚𝗦𝗧) ಹೊರೆಯೂ ಸೇರಿ, ಪ್ರತಿ ಫ್ಲಾಟ್‌ಗೆ ತಿಂಗಳಿಗೆ ಸರಿಸುಮಾರು 𝟯𝟲𝟬 ರೂಪಾಯಿಗಳಷ್ಟು ಶುಲ್ಕ ಬೀಳುತ್ತಿದೆ. ಇದರಿಂದ ತ್ಯಾಜ್ಯ ವಿಲೇವಾರಿ ವೆಚ್ಚದಲ್ಲಿ ಬರೋಬ್ಬರಿ ಶೇ. 𝟲𝟬𝟬 (𝟲𝟬𝟬%) ರಷ್ಟು ಹೆಚ್ಚಳವಾದಂತಾಗಿದೆ. 𝟱𝟬𝟬-ಘಟಕಗಳಿರುವ ಅಪಾರ್ಟ್‌ಮೆಂಟ್‌ಗೆ ಇದು ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಗಳ ಹೆಚ್ಚುವರಿ ಹೊರೆಯಾಗಲಿದೆ.
“ನಮ್ಮ ಸಮುದಾಯಗಳು ಸುಸ್ಥಿರ ಕಸನಿರ್ವಹಣೆಗೆ ಬದ್ಧವಾಗಿವೆ ಮತ್ತು 𝟮𝟬𝟭𝟲 ರಿಂದಲೂ ಹಸಿ ಕಸದ ನಿರ್ವಹಣೆ ಮತ್ತು ಮೂಲದಲ್ಲೇ ಕಸ ವಿಂಗಡಣೆಯನ್ನು ಪಾಲಿಸುತ್ತಿವೆ. ಆದಾಗ್ಯೂ, ಅತಿರೇಕದ ಶುಲ್ಕಗಳೊಂದಿಗೆ ನಮಗೆ ದಂಡ ವಿಧಿಸುವುದು ಮತ್ತು ಫ್ಲಾಟ್‌ಗಳಲ್ಲಿ ವಾಸಿಸುವ ಕುಟುಂಬಗಳನ್ನು ಇಂಡಿಪೆಂಡೆಂಟ್ ಮನೆಗಳಲ್ಲಿ ವಾಸಿಸುವವರಿಗಿಂತ ಭಿನ್ನವಾಗಿ ಪರಿಗಣಿಸುವುದು ತೀವ್ರ ತಾರತಮ್ಯವಾಗಿದೆ. ಸಂಘಗಳೇ ತ್ಯಾಜ್ಯ ಸಂಸ್ಕರಣಾ ಘಟಕಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಒತ್ತಾಯಿಸುವ ಬದಲು, 𝗕𝗦𝗪𝗠𝗟 ನೇರವಾಗಿ ಅಪಾರ್ಟ್‌ಮೆಂಟ್‌ಗಳಿಂದ ಯಾವುದೇ 𝗚𝗦𝗧 ಇಲ್ಲದೆ ಸಮಾನತೆಯ ಆಧಾರದ ಮೇಲೆ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಬೇಕು ಮತ್ತು ತ್ಯಾಜ್ಯ ಸಂಸ್ಕರಣುದಾರರನ್ನು ನೇರವಾಗಿ ನೇಮಿಸಬೇಕು. ನಮ್ಮ ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆಗಾಗಿ ನಮಗೆ ಗ್ರೀನ್ ಕ್ರೆಡಿಟ್‌ಗಳು (𝗚𝗿𝗲𝗲𝗻 𝗖𝗿𝗲𝗱𝗶𝘁𝘀) ಬೇಕೇ ಹೊರತು ಆರ್ಥಿಕ ದಂಡನೆಗಳಲ್ಲ,” ಎಂದು 𝗕𝗔𝗙 ಪದಾಧಿಕಾರಿಗಳು ಆಗ್ರಹಿಸಿದರು.
ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಸರ್ಕ್ಯುಲರ್ ಎಕಾನಮಿಯನ್ನು (𝗖𝗶𝗿𝗰𝘂𝗹𝗮𝗿 𝗘𝗰𝗼𝗻𝗼𝗺𝘆) ಉತ್ತೇಜಿಸಲು 𝗕𝗔𝗙 ಈ ಕೆಳಗಿನ ತುರ್ತು ಕ್ರಮಗಳನ್ನು ಪ್ರಸ್ತಾಪಿಸಿದೆ:
ಪತ್ರಿಕಾಗೋಷ್ಠಿಯಲ್ಲಿ 𝗕𝗔𝗙 ಅಧ್ಯಕ್ಷರಾದ ಶ್ರೀ ಸತೀಶ್ ಮಲ್ಯ, ಉಪಾಧ್ಯಕ್ಷರಾದ ಶ್ರೀ ಪ್ರದೀಪ್ ಪೈ, ಪ್ರಧಾನ ಕಾರ್ಯದರ್ಶಿ ಶ್ರೀ ಕೆ. ಅರುಣ್ ಕುಮಾರ್, ಆಡಳಿತ ಮಂಡಳಿ ಸದಸ್ಯ ಹಾಗೂ ಲೀಡ್ ಕಮ್ಯುನಿಕೇಷನ್ಸ್ ನ ಶ್ರೀ ವಿಶ್ವ ವೆಂಕಟ ರೆಡ್ಡಿ ಉಪಸ್ಥಿತರಿದ್ದರು.
Kayakalp from Dharmasthala constituency to Savulu Halla lake - Manjunatha Rathi ಧರ್ಮಸ್ಥಳ ಕ್ಷೇತ್ರದಿಂದ ಸವುಳು ಹಳ್ಳದ…
There should be no negligence in the implementation of the Prime Minister's 15-point program -…
Job fair under DDU-GKY scheme ಡಿಡಿಯು-ಜಿಕೆವೈ ಯೋಜನೆಯಡಿ ಉದ್ಯೋಗ ಮೇಳ ಶಿಕ್ಷಣದ ಜತೆ ತಾಂತ್ರಿಕ ಕೌಶಲ್ಯಕ್ಕೆ ಹೆಚ್ಚು ಆದ್ಯತೆ…
51 fans voluntarily donate blood on Appu's 51st birthday. ಅಪ್ಪು ಅವರ 51ನೇ ಹುಟ್ಟು ಹಬ್ಬಕ್ಕೆ…
ಹನೂರು ಕ್ಷೇತ್ರಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಸುತ್ತುರು ಶ್ರೀಗಳ ಬೇಟಿ : ಡಾ. ದತ್ತೇಶ್ ಕುಮಾರ್ . Dr.…
Kanakagiri: Private candidates allowed to apply for ITI admission ಕನಕಗಿರಿ: ಐಟಿಐ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಖಾಸಗಿ…