Women need legal knowledge: Lawyer Nandini's advice on Women's Day
ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ ದಿನಾಚರಣೆ ನ್ಯಾಯವಾದಿ ನಂದಿನಿ ಸಲಹೆ
ಗಂಗಾವತಿ : 14 ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಸಾಧನೆ ಮಾಡಿದ್ದಾರೆ ಎಂದು ನ್ಯಾಯವಾದಿ ನಂದಿನಿ ಶ್ಲಾಘಿಸಿದರು.
ನಗರದ ಬಿಜೆಪಿ ಕಛೇರಿಯಲ್ಲಿ ನಗರ ಘಟಕ ಮಹಿಳಾ ಅಧ್ಯಕ್ಷರ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳೆ ತಾಯಿ , ಮಗಳು, ಅಕ್ಕ-ತಂಗಿ, ಗೆಳತಿ, ಹೆಂಡತಿಯಾಗಿ ಸರ್ವರಿಗೂ ಒಳಿತು ಬಯಸುತ್ತ ಸಂಸಾರ ನೌಕೆಯನ್ನು ಉತ್ತಮವಾಗಿ ಸಾಗಿತ್ತಿದ್ದಾರೆ. ಮಹಿಳೆಯನ್ನು ದೇವತೆಗಳಿಗೆ ಹೋಲಿಕೆ ಮಾಡಲಾಗುತ್ತದೆ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಕೊಡಬೇಕು ಎಂಬ ಉದ್ಧೇಶದಿಂದ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಮಹಿಳೆಯರಿಗೆ ಕಾನೂನಿನಲ್ಲಿ ಸಿಗುವ ಸ್ಥಾನಮಾನ, ಮಹಿಳೆಯರ ಶೋಷಣೆ ತಡೆಗಟ್ಟುವ ಕ್ರಮಗಳ ಬಗ್ಗೆ ಚರ್ಚೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಪುರುಷರಂತೆ ಮಹಿಳೆಯರೂ ಇರಬೇಕು ಎಂಬ ಉದ್ದೇಶ ಸಂವಿಧಾನ ವಿಶೇಷ ಸ್ಥಾನಮಾನ ಕೊಟ್ಟಿದೆ. ಎಲ್ಲಾ ರಂಗದಲ್ಲಿಯೂ ಇಂದು ತಮ್ಮ ಛಾಪು ಮೂಡಿಸಿದ್ದಾರೆ. ಮಹಿಳೆಯರಿಗೆ ಕಾನೂನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
‘ಮಹಿಳೆ ತಾಯಿ , ಮಗಳು, ಅಕ್ಕ-ತಂಗಿ, ಗೆಳತಿ, ಹೆಂಡತಿಯಾಗಿ ಸರ್ವರಿಗೂ ಒಳಿತು ಬಯಸುತ್ತ ಸಂಸಾರ ನೌಕೆಯನ್ನು ಉತ್ತಮವಾಗಿ ಸಾಗಿತ್ತಿದ್ದಾರೆ. ಮಹಿಳೆಯನ್ನು ದೇವತೆಗಳಿಗೆ ಹೋಲಿಕೆ ಮಾಡಲಾಗುತ್ತದೆ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಕೊಡಬೇಕು ಎಂಬ ಉದ್ಧೇಶದಿಂದ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಮಹಿಳೆಯರಿಗೆ ಕಾನೂನಿನಲ್ಲಿ ಸಿಗುವ ಸ್ಥಾನಮಾನ, ಮಹಿಳೆಯರ ಶೋಷಣೆ ತಡೆಗಟ್ಟುವ ಕ್ರಮಗಳ ಬಗ್ಗೆ ಚರ್ಚೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ನಂತರ ಮಾತನಾಡಿದ ಬಿಜೆಪಿ ಮಹಿಳಾ ನಗರ ಘಟಕ ಅಧ್ಯಕ್ಷ ಭಾರತಿ ಕೃಷ್ಣ ಆಗಲೂರು ಪ್ರಥಮ ಬಾರಿಗೆ ಬಿಜೆಪಿ ಕಚೇರಿಯಲ್ಲಿ ಮಹಿಳಾ ದಿನಾಚರಣೆ ಆಚರಣೆ ಮಾಡಿದಕ್ಕೆ ನನಗೆ ಸಂತೋಷವಾಗಿ ಅದೆ ರೀತಿ ನಮಗೆ ಸಹಾಯ ಮತ್ತು ಸಹಕಾರ ನೀಡಿದ ಜನಪ್ರಿಯ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಹಾಗೂ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಹಾಗೂ ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷರು ನಗರ ಘಟಕ ಅಧ್ಯಕ್ಷರು ಮತ್ತು ಬಿಜೆಪಿ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷರು ಕಾರ್ಯದರ್ಶಿ ಅದರ ಜೊತೆಗೆ ಗಂಗಾವತಿ ಎಲ್ಲಾ ಸಹೋದರಿಯರು ನನಗೆ ಪ್ರೋತ್ಸಾಹ ನೀಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡಕ್ಕೆ ಕೈ ಜೋಡಿಸಿದ್ದಾರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಪ್ರಮಾಣದ ಮಹಿಳೆಯರನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತೇವೆ ಎಂದು ಭರವಸೆ ನೀಡಿದರು.
ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಮಹಿಳೆಯರಿಗೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಿದರು..
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಜಿಲ್ಲಾಧ್ಯಕ್ಷರಾದ ರತ್ನಕುಮಾರಿ,ಪ್ರಧಾನ ಕಾರ್ಯದರ್ಶಿ ಶೈಲಜಾ,ಕೀರ್ತಿ ಪಾಟೀಲ್, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಮಾಲಾ ನಾಯಕ, ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ಡಿ.ಕೆ.ಆಗೋಲಿ, ನಗರ ಘಟಕ ಅಧ್ಯಕ್ಷರಾದ ಚಂದ್ರಶೇಖರ ಹಿರೂರು,ಮಹಿಳೆಯರಾದ ಕಮಲಮ್ಮ,ಲಲಿತಾ,ಹುಲಿಗೆಮ್ಮ ನಾಯಕ,ವಿಜಯಲಕ್ಷ್ಮಿ ಹಿರೇಮಠ, ಕಲ್ಲಮ್ಮ,ಸೌಭಾಗ್ಯ, ರಾಜೇಶ್ವರಿ,ರಾಧಾ ಉಮೇಶ,ಸೇರಿದಂತೆ ಇತರರು ಇದ್ದರು
Legal action if domestic gas is used for commercial purposes ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ…
Municipal Council budget pre-meeting on March 16thPublic invited to participate by civic commissioner ಮಾ.16ರಂದು ನಗರಸಭೆ…
Let's have a plastic-free lifestyle: Nagaraj S. Guttedar ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್…
Government warns Samar International Islamic School for starting school enrollment in violation of court order…
Karnataka Provincial Farmers' Association demands justice for Kudathini land victims. ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು…
Construction of a money shed by adding an 11 KV electricity pole in Ward 31…