Construction of a money shed by adding an 11 KV electricity pole in Ward 31 of Goragodanahalli. The wise silence of BESCOM officials.
ಗೊರಗೋಡನಹಳ್ಳಿ 31ನೇ ವಾರ್ಡ್ ನಲ್ಲಿ 11 ಕೆ ವಿ ವಿದ್ಯುತ್ ಕಂಬ ಸೇರಿಸಿಕೊಂಡು ಧನದ ಶೆಡ್ ನಿರ್ಮಾಣ.ಬೆಸ್ಕಾಂ ಅಧಿಕಾರಿಗಳ ಜಾಣ ಮೌನ.ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ ಕ್ರಮವಹಿಸಿಲ್ಲ.
ತಿಪಟೂರು.ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ್ ಅವರ ತವರಿನ ಕ್ಷೇತ್ರದಲ್ಲೇ ದಿನೇ ದಿನೇ ದಲಿತ ಕುಟುಂಬಗಳು ಅನ್ಯಾಯಕ್ಕೆ ಒಳಗಾಗುತ್ತಿರುವ ಘಟನೆ ಬೆಳಕಿಗೆ ಬರುತ್ತಲೇ ಇವೆ .
ತಿಪಟೂರು ನಗರದ 31ನೇ ವಾರ್ಡ್‌ನ ಗೊರಗೊಂಡನಹಳ್ಳಿ ಗ್ರಾಮದ ದಲಿತ ಕುಟುಂಬಗಳು ಸವರ್ಣೀಯರ ದೌರ್ಜನ್ಯ ಹಾಗೂ ದಬ್ಬಾಳಿಕೆಯಿಂದ ಭಯಭೀತದ ಜೀವನ ಸಾಗಿಸುವಂತಾಗಿದೆ ಎಂದು ದಲಿತ ಕುಟುಂಬಗಳು ಆರೋಪಿಸಿದ್ದಾರೆ.
ಸ್ವಾತಂತ್ರ್ಯ ಬಂದು ಸುಮಾರು ದಶಕಗಳೇ ಕಳೆದರೂ ದಲಿತರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬ ತಮ್ಮ ಅಳಲನ್ನ ಗ್ರಾಮಸ್ಥರು ಮಾಧ್ಯಮದ ಮುಂದೆ ತೊಡಿಕೊಂಡರು.
ಗೊರಗೊಂಡನಹಳ್ಳಿ ಗ್ರಾಮದ ಸರ್ವೆ ನಂ. 90/4ಎ2ರಲ್ಲಿ ರಸ್ತೆಗೆ ಅಡ್ಡವಾಗಿ ದನದ ಸಾಕಾಣಿಕೆ ಶೆಡ್ ಸಂಪೂರ್ಣವಾಗಿ ಕಬ್ಬಿಣದ ದಿಂದ ಮಾಡಲಾಗಿದ್ದು 11 ಕೆ.ವಿ. ವಿದ್ಯುತ್ ಲೈನ್ ಕಂಬ ಶೆಡ್ ಒಳಗೆ ಸೇರಿಸಿಕೊಂಡು ನಿರ್ಮಾಣ ಮಾಡಿರುವುದರಿಂದ ಯಾವಾಗ ಬೇಕಾದರೂ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರ ಆತಂಕವಾಗಿದೆ
ಗ್ರಾಮದ ಸವರ್ಣೀಯರಾದ ಚೇರ್ಮನ್ ಶಿವನಂಜಪ್ಪ ಅವರ ಕುಟುಂಬದವರು ಈ ಶೆಡ್ ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಶೆಡ್‌ನಲ್ಲಿ ಸುಮಾರು 7-9 ಸೀಮೆ ಹಸುಗಳನ್ನು ಸಾಕಲಾಗುತ್ತಿದೆ. ಆದರೆ ವಿದ್ಯುತ್ ಕಂಬದ ಪಕ್ಕದಲ್ಲೇ ಈ ಶೆಡ್ ನಿರ್ಮಾಣವಾದರೂ, ಒಂದು ವರ್ಷದ ಹಿಂದೆ ತೆರವುಗೊಳಿಸಲು ಅರ್ಜಿ ಸಲ್ಲಿಸಿದರು ಕೆ.ಇ.ಬಿ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಲಿತ ಕುಟುಂಬಗಳು ಆರೋಪಿಸುತ್ತಿವೆ.
ಈ ಬಗ್ಗೆ ಮಾತನಾಡಿದ ದಲಿತ ಸಮುದಾಯದ ಕಾಂತರಾಜ್, “ಒಂದು ವರ್ಷದ ಹಿಂದೆ ಕೆ.ಇ.ಬಿ. ಇಲಾಖೆಗೆ ದೂರು ನೀಡಿದ್ದೇವೆ. ಆದರೆ ಇಂದಿಗೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ರಾಜಕೀಯ ಒತ್ತಡವೋ ಅಥವಾ ಬೇರೆ ಕಾರಣವೋ ಗೊತ್ತಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಲ್ಲದೆ, ಈ ವಿಷಯವನ್ನು ಪ್ರಶ್ನಿಸಲು ಹೋದಾಗ ನಮ್ಮ ಮೇಲೆ ಹಲ್ಲೆ ಮಾಡಲು ಮಚ್ಚು ಹಾರೆಗಳನ್ನು ತಂದು ದೌರ್ಜನ್ಯ ಹಲ್ಲೇ ಮಾಡಲು ಬರುತ್ತಾರೆ ಎಂದು ಅವರ ಆರೋಪವಾಗಿದೆ
ಇದರಿಂದ ದಲಿತ ಕುಟುಂಬಗಳು ನಿರಂತರ ಮಾನಸಿಕ ಒತ್ತಡದಲ್ಲಿ ಬದುಕುವ ದುಸ್ಥಿತಿ ನಿರ್ಮಾಣವಾಗಿದೆ
ಅದೇ ರೀತಿ, ಶೆಡ್‌ನಿಂದ ಬರುವ ಗಂಜಲು ಮತ್ತು ತ್ಯಾಜ್ಯವನ್ನು ನೇರವಾಗಿ ಚರಂಡಿ ಹಾಗೂ ರಸ್ತೆಗೆ ಬಿಡಲಾಗುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಮಲೇರಿಯಾ ಡೆಂಗ್ಯೂ ಅಂತಹ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ
ಈ ಹಿನ್ನೆಲೆಯಲ್ಲಿ ತಕ್ಷಣವೇ ಅಪಾಯಕಾರಿಯಾದ 11 ಕೆ.ವಿ. ವಿದ್ಯುತ್ ಕಂಬವನ್ನು ತೆರವುಗೊಳಿಸಿ, ಅಕ್ರಮವಾಗಿ ನಿರ್ಮಿಸಿರುವ ಶೆಡ್ ಮತ್ತು ಬೇಲಿಗಳನ್ನು ತೆರವುಗೊಳಿಸಬೇಕು. ಇಲ್ಲವಾದರೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ದಲಿತ ಕುಟುಂಬಗಳು ಎಚ್ಚರಿಕೆ ನೀಡಿದ್ದಾರೆ.
ಈ ವಿಷಯವನ್ನು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಎಸ್. ಪರಮೇಶ್ವರ್ ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಗ್ರಾಮಸ್ಥರ ದಲಿತ ಕುಟುಂಬಗಳ ಆಗ್ರಹವಾಗಿದೆ
ಸಂಬಂಧಪಟ್ಟವರ ಮೇಲೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಈಗಾದರೂ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುತ್ತಾರ ಎಂದು ಕಾದುನೋಡಬೇಕಾಗಿದೆ.
ವರದಿ ಮಂಜು ಗುರುಗದಹಳ್ಳಿ
Legal action if domestic gas is used for commercial purposes ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ…
Municipal Council budget pre-meeting on March 16thPublic invited to participate by civic commissioner ಮಾ.16ರಂದು ನಗರಸಭೆ…
Let's have a plastic-free lifestyle: Nagaraj S. Guttedar ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್…
Women need legal knowledge: Lawyer Nandini's advice on Women's Day ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ…
Government warns Samar International Islamic School for starting school enrollment in violation of court order…
Karnataka Provincial Farmers' Association demands justice for Kudathini land victims. ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು…