ಲಿಂಗ ಸಾಮರಸ್ಯದಿಂದ ಮಹಿಳಾ ಸಬಲೀಕರಣ ಸಾಧ್ಯ ಡಾ. ಸುಷ್ಮಾ ಹೂಗಾರ
Women empowerment is possible through gender harmony. Dr. Sushma Hoogara
ವಿಜಯನಗರ(ಹೊಸಪೇಟೆ): ವಿಜಯನಗರ ಮಹಾವಿದ್ಯಾಲಯ, ಹೊಸಪೇಟೆ ಎನ್.ಎಸ್.ಎಸ್ ಘಟಕದಿಂದ ಆಯೋಜಿಸಿದ ವಿಶೇಷ ವಾರ್ಷಿಕ ಶಿಬಿರದ ಮೂರನೇ ದಿನದ ವಿಶೇಷ ಉಪನ್ಯಾಸಕ ಕಾರ್ಯಕ್ರಮದಲ್ಲಿ
ಮಹಿಳೆ ಮತ್ತು ಪುರುಷ ತಮ್ಮ ನ್ಯೂನ್ಯತೆ ಮತ್ತು ಶಕ್ತಿಗಳನ್ನು ಅರಿತುಕೊಂಡು ಇಬ್ಬರೂ ಸಮ ಎಂದು ಸ್ವೀಕಾರ ಮಾಡಿಕೊಂಡು ಹೊಂದಾಣಿಕೆಯನ್ನು ರೂಢಿಸಿಕೊಂಡಲ್ಲಿ ಮಾತ್ರ ಬದುಕು ಅರ್ಥಪೂರ್ಣ ಎಂದು ವಿಜಯನಗರ ಕಾಲೇಜಿನ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸೂಷ್ಮಾಹೂಗಾರ್ ಮಾಹಿತಿ ನೀಡಿದರು.ವಿಜಯನಗರ ಕಾಲೇಜಿನ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸೂಷ್ಮಾಹೂಗಾರ್ ಅವರು ಮಹಿಳಾ ಸಬಲೀಕರಣ ಹಾಗೂ ಲಿಂಗಸಾಮರಸ್ಯದ ಅನಿವಾರ್ಯತೆಯ ಕುರಿತು ಮಾತನಾಡಿದರು.ಇಂದಿನ ಕಾಲದ ಮಹಿಳೆ,ಶಿಕ್ಷಣ ಪಡೆದಿದ್ದಾಳೆ,ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾಳೆ. ಆದರೆ ಇವುಗಳ ಆಧಾರದ ಮೇಲೆ ಮಹಿಳೆ ಸಬಲೆಯಾಗಿದ್ದಾಳೆ ಎಂದರೆ ಅದು ಕೇವಲ ಕಲ್ಪನೆ , ಮೊದಲಿನ ಕಾಲಕ್ಕೂ ಈಗಿನ ಕಾಲಕ್ಕೂ ಹೋಲಿಸಿದರೆ ಕೇವಲ ಶೋಷಣೆ ಆಯಾಮಗಳು ಬದಲಾಗಿವೆ, ಹೊರತು ಕಡಿಮೆಯಾಗಿಲ್ಲ. ಮಹಿಳಾ ಸಬಲೀಕರಣದ ಪ್ರಕ್ರಿಯೆ ನಡೆಯಬೇಕಾಗಿರುವುದು ಸಮಾಜದಲ್ಲಲ್ಲ ಸ್ತ್ರೀ ಹಾಗೂ ಪುರುಷನ ವೈಚಾರಿಕತೆಯಲ್ಲಿ ಮತ್ತು ಅವರ ದೃಷ್ಟಿ ಕೋನದಲ್ಲಿ ಬದಲಾವಣೆ ಅನಿವಾರ್ಯತೆ ಇದೆ. ಆತ್ಮವಿಶ್ವಾಸ ಆತ್ಮ ಗೌರವ ಮನುಷ್ಯನ ಅತಿ ದೊಡ್ಡ ಸಂಪತ್ತು, ಪ್ರತಿ ಮಹಿಳೆ ಆತ್ಮವಿಶ್ವಾಸ ಮತ್ತು ಆತ್ಮ ಗೌರವದಿಂದ ಜೀವನ ನಡೆಸಬೇಕು ಹಾಗೆಯೇ ಪ್ರತಿ ಸವಾಲುಗಳನ್ನು ಅವಕಾಶಗಳನ್ನಾಗಿ ಬದಲಾಯಿಸುವ ಛಲ ಹೊಂದಿರಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರಿಬಸಯ್ಯ ಅವರು ಮಹಿಳೆ ಮತ್ತು ಪುರುಷ ಎಂಬ ಭೇದಭಾವನ್ನು ಮಾಡದೇ ಎಲ್ಲರೂ ಮುನ್ನಡದರೆ ಸಮಸಮಾಜವನ್ನು ಕಾಣಲು ಸಾಧ್ಯ ಎಂದು ಹೇಳಿದರು.
ಈ ವೇಳೆ ಎನ್. ಎಸ್. ಎಸ್ ನ ಕಾರ್ಯಕ್ರಮಾಧಿಕಾರಿ ಡಾ.ಗಾದೆಪ್ಪ ಹಾಗೂ ಡಾ. ವಿರೇಶ್ ಉಪಸ್ಥಿತರಿದ್ದರು ಮತ್ತು ಶಿಬಿರಾರ್ಥಿಗಳು, ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದರು.
Legal action if domestic gas is used for commercial purposes ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ…
Municipal Council budget pre-meeting on March 16thPublic invited to participate by civic commissioner ಮಾ.16ರಂದು ನಗರಸಭೆ…
Let's have a plastic-free lifestyle: Nagaraj S. Guttedar ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್…
Women need legal knowledge: Lawyer Nandini's advice on Women's Day ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ…
Government warns Samar International Islamic School for starting school enrollment in violation of court order…
Karnataka Provincial Farmers' Association demands justice for Kudathini land victims. ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು…