ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಕೆರೆಗಳನ್ನು ತುಂಬಿಸಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲು ನಿರ್ಧಾರ

Decision to release water to Tungabhadra left bank main canal to fill lakes in Koppal and Raichur districts
 

ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಕೆರೆಗಳನ್ನು ತುಂಬಿಸಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲು ನಿರ್ಧಾರ

ಜಾಹೀರಾತು


ಕೊಪ್ಪಳ ಮಾರ್ಚ್ 12 (ಕರ್ನಾಟಕ ವಾರ್ತೆ): ತುಂಗಭದ್ರಾ ಜಲಾಶಯದಲ್ಲಿ 2025-26ನೇ ಜಲವರ್ಷದಲ್ಲಿ ನೀರಿನ ಲಭ್ಯತೆ ಆಧರಿಸಿ ಪ್ರಾದೇಶಿಕ ಆಯುಕ್ತರು ಕಲಬುರಗಿ ಇವರ ಆದೇಶದ ಮೇರೆಗೆ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು ತುಂಬಿಸಲು ತುಂಗಭದ್ರಾ ಜಲಾಶಯದಿಂದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಪ್ರಾದೇಶಿಕ ಆಯುಕ್ತರು, ಕಲಬುರಗಿ ವಲಯ ಕಲಬುರಗಿ ರವರು ನಿಗದಿ ಪಡಿಸಿದ ವೇಳಾಪಟ್ಟಿಯಂತೆ ನೀರಿನ್ನು ಹರಿಸಲು ನಿರ್ಧಾರಿಸಲಾಗಿದೆ.
ಅದರಂತೆ ಸಂಬಂಧಿಸಿದ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ತಮ್ಮ ವ್ಯಾಪ್ತಿಯಲ್ಲಿನ ತೂಬುಗಳ ಗೇಟ್‌ಗಳ ಮುಖಾಂತರ ಕೆರೆಕಟ್ಟೆಗಳಲ್ಲಿ ಕುಡಿಯುವ ಸಲುವಾಗಿ ನೀರು ಶೇಖರಣೆ ಮಾಡಲು ಹಾಗೂ ನಿಗದಿತ ಪ್ರಮಾಣದ ನೀರನ್ನು 104 ಮೈಲ್ ವರೆಗೆ ಹರಿಸಿ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಾಗೂ ಪೊಲೀಸ್ ಸಿಬ್ಬಂದಿ ಸಹಯೋಗದೊಂದಿಗೆ ಸಮರ್ಪಕ ನೀರು ನಿರ್ವಹಣೆ ಮಾಡಬೇಕು.
*ನಿಗದಿತ ವೇಳಾಪಟ್ಟಿ:* ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ (0 ರಿಂದ 104 ಮೈಲ್ ವರೆಗೆ) ಗೆ ಕುಡಿಯುವ ನೀರಿಗಾಗಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು ತುಂಬಿಸಲು ಮಾರ್ಚ್ 16 (ಸೋಮವಾರ ಬೆಳಗ್ಗೆ 8 ಗಂಟೆ) ರಿಂದ ಮಾರ್ಚ್ 27ರ (ಶುಕ್ರವಾರ ಬೆಳಗ್ಗೆ 8 ಗಂಟೆ) ವರೆಗೆ 2000 ಕ್ಯೂಸೆಕ್ಸ್ ನಂತೆ ಕುಡಿಯುವ ನೀರು ಹರಿಸಲಾಗುವುದು.
ಅದರಂತೆ, ಯರಮರಸ್ ವಿಭಾಗ ಮಾರ್ಚ್ 19,  20 & ಮಾ. 21ರ ವರೆಗೆ, ಸಿರವಾರ ವಿಭಾಗ ಮಾ. 21, 22 & 23 ರವರೆಗೆ, ಸಿಂದನೂರು ವಿಭಾಗ ಮಾ. 24, 25 & ಮಾ. 26ರ ವರೆಗೆ ಹಾಗೂ ವಡ್ಡರಹಟ್ಟಿ ವಿಭಾಗದ ಮಾ. 26 & ಮಾ. 27ರ ವರೆಗೆ ನೀರು ಹರಿಸಲು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
*ರೈತ ಭಾಂದವರಲ್ಲಿ ಮನವಿ:* ತುಂಗಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗುತ್ತಿದ್ದು, ಸಾರ್ವಜನಿಕ ಹಿತ ದೃಷ್ಟಿಯಿಂದ ಎಲ್ಲಾ ಜನಸಾಮಾನ್ಯರಿಗೂ ಹಾಗೂ ರೈತ ಭಾಂದವರಿಗೆ ಈ ಪ್ರಕಟಣೆಯ ಮೂಲಕ ವಿನಂತಿಸುವುದೆನೇಂದರೆ, ಕಾಲುವೆಯಲ್ಲಿ ಮತ್ತು ಕಾಲುವೆಯ ಅಂಚಿನಲ್ಲಿ ಓಡಾಡುವುದು, ಕಾಲುವೆಯಿಂದ ನೀರನ್ನು ಜನಸಾಮಾನ್ಯರು ಅಥವಾ ರೈತರು ಬಳಸುವುದನ್ನು ಮತ್ತು ಎತ್ತಿಕೊಳ್ಳುವುದನ್ನು ನಿಷೇಧಗೊಳಿಸಲಾಗಿರುತ್ತದೆ. ಕಾರಣ ತಾವುಗಳು ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ಸಹಕರಿಸುವಂತೆ ಕನೀನಿನಿ, ತುಂಗಭದ್ರಾ ಯೋಜನಾ ವೃತ್ತ ಮುನಿರಾಬಾದ್ ಅಧೀಕ್ಷಕ ಅಭಿಯಂತರರು ಹಾಗೂ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಎಸ್.ಬಿ ಮಲ್ಲಿಗವಾಡ

Mallikarjun

Share
Published by
Mallikarjun

Recent Posts

ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ ಬಳಸಿದರೆ ಕಾನೂನು ಕ್ರಮ

Legal action if domestic gas is used for commercial purposes ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ…

15 hours ago

ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್

Let's have a plastic-free lifestyle: Nagaraj S. Guttedar ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್…

18 hours ago

ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ ದಿನಾಚರಣೆ ನ್ಯಾಯವಾದಿ ನಂದಿನಿ ಸಲಹೆ

Women need legal knowledge: Lawyer Nandini's advice on Women's Day ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ…

18 hours ago

ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯ.

Karnataka Provincial Farmers' Association demands justice for Kudathini land victims. ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು…

19 hours ago