What kind of diet should people with diabetes follow?
ಶುಗರ್ ಇದ್ದವರು ಯಾವ ರೀತಿಯ ಆಹಾರ ರೂಢಿಮಾಡಬೇಕು?
ಸಕ್ಕರೆ ಕಾಯಿಲೆ ಎನ್ನುವುದು ಭಾರತದಲ್ಲಿ 60%ಗೂ ಹೆಚ್ಚು ಜನರನ್ನು ಭಾದಿಸುತ್ತಿದೆ.ಇದು ಯಾವತ್ತು ಸಂಪೂರ್ಣ ಗುಣವಾಗುವ ಕಾಯಿಲೆಯಂತು ಅಲ್ಲ ಖಾಯಿಲೆಯನ್ನು ಒಂದಷ್ಟು ನಿಯಂತ್ರಿಸಬಹುದು.ಖಾಯಿಲೆ ಬರುವುದಕ್ಕಿಂತ ಮುನ್ನವೆ ಹಿತಮಿತವಾದ ಆಹಾರ ಹಾಗೂ ದೈಹಿಕ ದಂಡನೆಯ ಕೆಲಸಮಾಡುತ್ತಿದ್ದರೆ ಒಳ್ಳೆಯದು. ಹಳ್ಳಿಗರಿಗಿಂತ ಪಟ್ಟಣದಲ್ಲಿ ವಾಸಿಸುವವರು ಈ ಖಾಯಿಲೆಯಿಂದ ಬಳತ್ತಿದ್ದಾರೆ ಕಾರಣ ಅಹಾರದಲ್ಲಿ ನಿಯಂತ್ರಣ ಇಲ್ಲದಿರುವುದು ಮತ್ತು ಬೆವರು ಸುರಿಸಿ ದುಡಿಮೆ ಇಲ್ಲದಿರುವುದು ಕುಳಿತು ಉಂಡರೆ ದೇಹ ರೋಗಗ್ರಸ್ತವಾಗುತ್ತದೆ. ಈಗಿನ ಜನ ಹೆಚ್ಚಾಗಿ ಕಂಪ್ಯೂಟರ್ ಆಪೀಸು ಗಳಲ್ಲಿ ಕೆಲಸಮಾಡುವವರಿಗೆ ದೇಹದ ಶ್ರಮಕ್ಕಿಂತ ಮಾನಸಿಕ ಶ್ರಮ ಹೆಚ್ಚು ಸಕ್ಕರೆ ಖಾಯಿಲೆ ಬರಲು ಟೆನ್ಷನ್ ಎನ್ನುವುದು ಒಂದು ಕಾರಣ ಮಾನಸಿಕ ಒತ್ತಡ ಆಹಾರದ ಪಚನ ಕ್ರಿಯೆಯನ್ನು ವ್ಯತ್ಯಾಸ ಮಾಡುತ್ತದೆ ಇದರಿಂದ ದೇಹದಲ್ಲಿಕೊಬ್ಬು ಜಾಸ್ತಿಯಾಗುತ್ತದೆ. ಸಕ್ಕರೆ ಖಾಯಿಲೆಯು ಕೆಲವರಿಗೆ ಅನುವಂಶಿಕ ಕೊಡುಗೆಯಾದರೆ ಮತ್ತೆ ಕೆಲವರಿಗೆ ತಾವಾಗಿಯೆ ತಂದುಕೊಳ್ಳುವುದು.ಹಾಗಾಗಿ ಸಕ್ಕರೆ ಖಾಯಿಲೆ ಇದ್ದವರಿಗೆ ಕೆಲವು ಸಲ ಏನು ತಿನ್ನಬೇಕು ಏನು ತಿನ್ನಬಾರದು ಎನ್ನುವುದೆ ಗೊತ್ತಾಗದು. ಒಬ್ಬೊಬ್ಬರು ಒಂದೋಂದು ಸಜೆಶನ್ನ ಕೊಡುತ್ತಾರೆ. ಅನ್ನ ಮುಟ್ಟಬಾರದು ಸಿಹಿತಿಂಡಿತಿನ್ನಬಾರದು, ಕರಿದ ಪದಾರ್ಥ ಮುಟ್ಟಬಾರದು ಕೆಲವು ಹಣ್ಣು ಹಂಪಲು ತಿನ್ನಬಾರದು ಅಂತ ಹಾಗಿದ್ದರೆ ಹಸಿವಾದಾಗ ಏನು ತಿನ್ನುವುದು ಎನ್ನುವುದೆ ದೊಡ್ಡ ಸಮಸ್ಯೆಯಾಗಿದೆ ಯಾವುದೇ ತಿಂದರು ಊಟಮಾಡಿದಷ್ಟು ಬೇರೆ ಏನೇ ತಿಂದರು ಹೊಟ್ಟೆ ತುಂಬುವುದಿಲ್ಲ ಮೈದಾ ಅಕ್ಕಿಹಿಟ್ಟು ಕಡಲೆ ಹಿಟ್ಟು ಕೆಲವು ಧಾನ್ಯಗಳು ಸಕ್ಕರೆಖಾಯಿಲೆಗೆ ಆಗುವುದಿಲ್ಲ .ಅನ್ನವನ್ನು ಕುಕ್ಕರಿನಲ್ಲಿ ಬೇಯಿಸಬೇಡಿ ಬೇರೆ ಪಾತ್ರೆಯಲ್ಲಿ ಅನ್ನಮಾಡಿ ಬಸಿದು ಉಣ್ಣುವುದರಿಂದ ತೊಂದರೆ ಆಗದು. ಇದು ಹಳೇಕಾಲದ ಪದ್ದತಿಯಾದರು ಇದರಲ್ಲಿ ಅಕ್ಕಿಯಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆಮಾಡುತ್ತದೆ ಬೆಳಿಗ್ಗೆ ಎದ್ದತಕ್ಕಷಣ ಹತ್ತು ಮೆಂತೆಕಾಳುಗಳನ್ನು ನುಂಗಿ ನೀರು ಕುಡಿಯುವುದರಿಂದ ಸಕ್ಕರೆಯ ಅಂಶವು ಕಡಿಮೆಯಾಗುತ್ತದೆ. ಪ್ರಿಡ್ಜನಲ್ಲಿರುವ ವಸ್ತುಗಳನ್ನು ಬಳಸಬಾರದು. ಇದರಲ್ಲಿ ಯಾವುದೆ ಜೀವಸತ್ವ ಇರುವುದಿಲ್ಲ. ರೆಡಿ ಮೇಡ್ ಜ್ಯೂಸ್ ಕುಡಿಯುವುದನ್ನು ನಿಲ್ಲಿಸಿ.ಇದು ತತ್ತಕ್ಷಣ ಸಕ್ಕರೆ ಅಂಶವನ್ನು ಜಾಸ್ತಿಮಾಡುತ್ತದೆ. ಹೆಸರುಕಾಳು ನೆನಸಿ ರುಬ್ಬಿ ಜ್ಯೂಸಮಾಡಿ ಬೇಕಾದರೆ (ಸ್ವಲ್ಪ ಬೆಲ್ ಸೇರಿಸಿ)ಕುಡಿಯಬಹುದು.ನೆಲನೆಲ್ಲಿ ಗಿಡದ ಕಷಾಯ ದಿನವೂ ಮಾಡಿ ಕುಡಿಯುವುದರಿಂದ ಒಳ್ಳೆಯದು ಸಕ್ಕರೆಖಾಯಿಲೆ ಇದ್ದವರಿಗೆ ಹಸಿವು ಭಾಯಾರಿಕೆ ಜಾಸ್ತಿ ಹಾಗಾಗಿ ಹಸಿವಾದಾಗ ಅಲ್ಪಸ್ವಲ್ಪ ಹಸಿತರಕಾರಿ ತಿನ್ನಿ. ಬೆಂಡೆಕಾಯಿಯನ್ನು ಉದ್ದ ಹೆಚ್ಚಿ ಸ್ವಲ್ಪ ಉಪ್ಪುಹುಳಿಕಾರ ಹಾಕಿ ಬೇಯಿಸಿ ತಿನ್ನಬಹುದು. ಸೌತೆಕಾಯಿ ಗಡ್ಡೆಕೋಸು ಗೌರಿಕಾಯಿ ಸಕ್ಕರೆ ಖಾಯಿಲೆಗಳಿಗೆ ಉತ್ತಮ. ತರಕಾರಿ. ಬಾಳೆಹಣ್ಣು ಮಾವಿನಹಣ್ಣು ,ಹಲಸು , ಚಿಕ್ಕುಹಣ್ಣುಗಳನ್ನು ತಿನ್ನಬಾರದು. ಸೀಬೇ ಮೋಸುಂಬಿ ಕಿತ್ತಳೆ ನೇರಳೆ, ಪಪ್ಪಾಯಿ ಒಳ್ಳೆಯದು.ವಾರಕ್ಕೆ ಒಂದುಬಾರಿ ಹಗಲಕಾಯಿ ಚಟ್ಣೆ ಗೊಜ್ಜು ಸಾಂಬಾರು ಮಾಡುವುದರಿಂದ ಒಳ್ಳೆಯದು. ಜಾಸ್ತಿ ಸೇವಿಸಿದರೆ ಚರ್ಮ ಶುಕ್ಕವಾಗುತ್ತದೆ ಬಹಳ ಉಷ್ಣವಾದ್ದರಿಂದ ಪಿತ್ತ ಜಾಸ್ತಿಯಾಗಿ ಮೈ ತುರಿಕೆ ,ಸ್ನಾಯುಸೆಳೆತ ,ಎದೆನೋವು ಬರಬಹುದು.ನುಗ್ಗೆ ಸೊಪ್ಪು ಪಾಲಾಕ್ ಸೊಪ್ಪು ಮೆಂತೆ ಸಬ್ಬ್ಬಸಿಗೆ ಕಾಕೆಸೊಪ್ಪು ಒಳ್ಳೆಯದು.ದಂಟಿನ ಸೊಪ್ಪು ಹರಿವೆ ಸೊಪ್ಪುಗಳು ಒಳ್ಳೆಯದಾದರು ಕೆಲವರಿಗೆ ಇದು ಬೇದಿಶುರುವಾಗುತ್ತದೆ. ಮತ್ತು ಹೊಟ್ಟೆಯುಬ್ಬರವೂ ಆಗುತ್ತದೆ.ಕಾಡುನೆಲ್ಲಿಕಾಯಿಯನ್ನು ಬಿಡಿಸಿ ಒಣಗಿಸಿ ಆಗಾಗ ಬಾಯಲ್ಲಿಟ್ಟು ಚಪ್ಪರಿಸಿದರೆ ಸಕ್ಕೆರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಇದರ ತಂಬುಳಿ ಗೊಜ್ಜು ಆರೋಗ್ಯಕ್ಕೆ ಬಹಳ ಉತ್ತಮ. ಸಕ್ಕರೆ ನಿಯಂತ್ರಣದಲ್ಲಿ ಇಡಬಹುದು.ಕಾಫಿ ಟೀ ನಿಯಮಿತವಾಗಿ ಸೇವಿಸಬಹುದು. ಅಲೋವೆರಾ ಜ್ಯೂಸ ಒಳ್ಳೆಯದು.ಯಾವುದೆ ತರಕಾರಿಗಳನ್ನು ಸ್ವಲ್ಪ ಬೇಯಿಸಿ ತಿನ್ನಬಹುದು.ಸೂಪ್ಮಾಡಿ ಕುಡಿಯಬಹುದು.ಮಾವಿನ ಚಿಗುರು ನೇರಲೆ ಕುಡಿ ಸೀಬೆಕುಡಿ ಒಂದೆಲಗದ ಕಷಾಯಗಳು ಸಕ್ಕರೆಖಾಯಿಲೆ ಯನ್ನು ನಿಯಂತ್ರಣ ಮಾಡುತ್ತದೆ ದಿನಕ್ಕೆ ಎರಡುಬಾರಿ ಎಲೆ ಅಡಿಕೆ ಹಾಕುವುದರಿಂದ ಜೀರ್ಣಕ್ಕು ಒಳ್ಳೆಯದು ಅಡಿಕೆಯಲ್ಲಿನ ಚೊಗರು ಅಂಶ ಸಕ್ಕರೆಯನ್ನು ನಿಯಂತ್ರಿಸುತ್ತದೆ ಸ್ವೀಟ್ ಅಡಿಕೆ ಉಪಯೋಗಿಸಬಾರದು ಮಲೆನಾಡಿನಲ್ಲಿ ಸಿಗುವ ಬೇಯಿಸಿದ ಸರಕು ಅಥವಾ ಕೆಂಪು ಅಡಿಕೆ ಒಳ್ಳೆಯದು.ಸಕ್ಕರೆ ಖಾಯಿಲೆಗೆ ದಿನಕ್ಕೊಂದು ಡಾಕ್ಟರ್ನ್ನು ಬೇಟಿಮಾಡುವುದಕ್ಕಿಂತ ನಾವೇ ವೈದ್ಯರಾಗುವುದು ಒಳ್ಳೆಯದು . ಯಾವುದನ್ನು ತಿಂದಾಗ ಸಕ್ಕರೆ ಅಂಶ ಜಾಸ್ತಿಯಾಗುತ್ತದೆ ಯಾವುದನ್ನು ಸೇವಿಸಿದಾಗ ಕಡಿಮೆಯಾಗುತ್ತದೆ ಎಂದು ಪ್ರತಿದಿನವೂ ಗಮನದಲ್ಲಿ ಇಟ್ಟುಕೊಳ್ಳಬೇಕು ಈಗ ಸಕ್ರೆ ಖಾಯಿಲೆ ಪರೀಕ್ಷಿಸಲು ಹಲವು ಉಪಕರಣಗಳಿವೆ ಪ್ರತಿದಿನ ಆಹಾರ ಸೇವಿಸುವ ಮೊದಲು ಮತ್ತು ನಂತರ ಪರೀಕ್ಷಿಸಿ ಚಾಟ್ನಲ್ಲಿ ಬರೆದಿಟ್ಟು ಕೊಳ್ಳಿ ಏನೇನು ಆಹಾರ ಸೇವಿಸಿದ್ದೀರಿ ಎಂದು ತಿಳಿದುಕೊಂಡರೆ ಅಲ್ಲೆ ಉತ್ತರ ಸಿಗುತ್ತದೆ.ಹಸಿವಾದಾಗ ಇಡ್ಲಿ ದೋಸೆ ಉಪ್ಪಿಟ್ಟು ಅನಿವಾರ್ಯ. ಉಳಿದ ಕರಿದ ಪದಾರ್ಥಗಳನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.ಆದರೂ ದಿನವೂ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಲೇಬೇಕಾಗುತ್ತದೆ.
Legal action if domestic gas is used for commercial purposes ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ…
Municipal Council budget pre-meeting on March 16thPublic invited to participate by civic commissioner ಮಾ.16ರಂದು ನಗರಸಭೆ…
Let's have a plastic-free lifestyle: Nagaraj S. Guttedar ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್…
Women need legal knowledge: Lawyer Nandini's advice on Women's Day ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ…
Government warns Samar International Islamic School for starting school enrollment in violation of court order…
Karnataka Provincial Farmers' Association demands justice for Kudathini land victims. ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು…