Rotary Club celebrates Women's Day at Hanaval Gram Panchayat
ರೋಟರಿ ಕ್ಲಬ್ ವತಿಯಿಂದ ಹಣವಾಳ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ದಿನಾಚರಣೆ
ಗಂಗಾವತಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ.9 ರಂದು ಹಣವಾಳ ಗ್ರಾಮ ಪಂಚಾಯಿತಿಯಲ್ಲಿ ರೋಟರಿ ಕ್ಲಬ್ ಆಫ್ ರೈಸ್ ಬೌಲ್ ಮಹಿಳಾ ಘಟಕದ ವತಿಯಿಂದ ಪಂಚಾಯಿತಿಯ ಸ್ವಚ್ಛತಾ ಮಹಿಳಾ ಸಿಬ್ಬಂದಿ ಹಾಗೂ NRLM ಸಿಬ್ಬಂದಿಗಳು ಮತ್ತು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮೇಡಂ ಹಾಗೂ ಮಹಿಳಾ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಕೇಕ್ ಕತ್ತರಿಸಿ ವಸ್ತ್ರಗಳನ್ನು ವಿತರಿಸುವ ಮೂಲಕ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಖಜಾಂಚಿಯಾದ ಬಸಮ್ಮ ಅವರು ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲೂ ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಇವರು ಮಹಿಳೆಯರು ಇವರಿಂದ ಏನು ಮಾಡಲು ಸಾಧ್ಯ ಎಂದು ಹೀಯಾಳಿಸುವವರ ಮಧ್ಯೆ, ನಾವುಗಳು ಆದಷ್ಟು ಹೆಲ್ತ್ ಕ್ಯಾಂಪ್ ಗಳನ್ನ ಮತ್ತು ಇತರ ಸೋಶಿಯಲ್ ಆಕ್ಟಿವಿಟೀಸ್ ಗಳನ್ನ ಮಾಡುವ ಮುಖಾಂತರ ಸಣ್ಣ ಸಣ್ಣ ಪ್ರಯತ್ನಗಳನ್ನು ಮಾಡುತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ರೈಸ್ ಬೌಲ್ ಆಫ್ ಗಂಗಾವತಿ ಮಹಿಳಾ ಘಟಕದ ಅಧ್ಯಕ್ಷರಾದ ಗೀತಾ ಚೌದ್ರಿ, ಕಾರ್ಯದರ್ಶಿಯಾದ ಬಿ ಶ್ರೀದೇವಿ ಮತ್ತು ಪದಾಧಿಕಾರಿಗಳಾದ ಸೋಫಿಯಾ ರಾಣಿ, ಶಾಹಿನ್ ಕೌಸರ್, ಲಲಿತ ನಾಗರಾಜ್ ಹಾಜರಿದ್ದರು̤
Legal action if domestic gas is used for commercial purposes ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ…
Municipal Council budget pre-meeting on March 16thPublic invited to participate by civic commissioner ಮಾ.16ರಂದು ನಗರಸಭೆ…
Let's have a plastic-free lifestyle: Nagaraj S. Guttedar ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್…
Women need legal knowledge: Lawyer Nandini's advice on Women's Day ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ…
Government warns Samar International Islamic School for starting school enrollment in violation of court order…
Karnataka Provincial Farmers' Association demands justice for Kudathini land victims. ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು…