ವಿದ್ಯಾರ್ಥಿಗಳು ಹೊಸತನವನ್ನು ಕಲಿಯಬೇಕುಸದಾಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರಬೇಕು: ಎಸ್.ವಿ ಪಾಟೀಲ್ ಗುಂಡೂರು

 
Students should learn new things and always be active in activities: S.V. Patil Gundur

ವಿದ್ಯಾರ್ಥಿಗಳು ಹೊಸತನವನ್ನು ಕಲಿಯಬೇಕು ಸದಾ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರಬೇಕು: ಎಸ್.ವಿ ಪಾಟೀಲ್ ಗುಂಡೂರು

ಜಾಹೀರಾತು

ಗಂಗಾವತಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಕವಿಗಳು, ರಂಗ ನಿರ್ದೇಶಕರು, ಚಲನಚಿತ್ರ ನಿರ್ದೇಶಕರು

ಆದ ಶ್ರೀ ಎಸ್.ವಿ. ಪಾಟೀಲ್ ಗುಂಡೂರು ರವರು ಮಾರ್ಚ್-6 ರಂದು ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿರುವ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಶ್ರೀ ರಾಜರಾಜೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬಸಾಪಟ್ಟಣ ಶಾಲೆಯಲ್ಲಿ ಏಳನೇ ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾ ಡಿದ ಅವರು ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯು 2002 ರಲ್ಲಿ ಸರ್ವ ಶಿಕ್ಷಣ ಅಭಿಯಾನದ ಸಹಾಯ ಅನುದಾನದ ಅಡಿಯಲ್ಲಿ ಕುಗ್ರಾಮದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲು ಕಲಿಕಾ ಕೇಂದ್ರಗಳನ್ನು ಆರಂಭಿಸಿದ ಶ್ರೇಯಸ್ಸು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿ.ಸಣ್ಣೆಪ್ಪರವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು. ಎಸ್.ವಿ. ಪಾಟೀಲ್ ಗುಂಡೂರು ರವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಹೊಸತನ್ನು ಕಲಿಯಬೇಕು ಎನ್ನುವ ದೆಸೆಯಲ್ಲಿ ತಾವು ಪ್ರೌಢ ಶಿಕ್ಷಣವನ್ನು ಪಡೆಯುತ್ತಿರುವಾಗ ‘ಯಕ್ಷ ಪ್ರಶ್ನೆ” ಎನ್ನುವ ಪಾಠವನ್ನು ನಾಟಕವನ್ನಾಗಿ ಬರೆದು ನಿರ್ದೇಶಿಸಿ, ಅಭಿನಯಿಸಿದ ಪ್ರಸಂಗವನ್ನು ಮಕ್ಕಳ ಮುಂದೆ ಸ್ಮರಿಸಿಕೊಂಡರು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಹೊಸತನವನ್ನು ಕಲಿಯಬೇಕು, ಸದಾ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರಬೇಕು, ಗುರು ಹಿರಿಯರಿಗೆ, ಗೌರವ ನೀಡಬೇಕು, ಹೆತ್ತ ತಂದೆ ತಾಯಿಗಳಿಗೆ ಗೌರವ ಕೊಡುವುದಷ್ಟೇ ಅಲ್ಲ ಅವರನ್ನು ಗೌರವದಿಂದ ನೋಡಿಕೊಳ್ಳುವುದು ಆಗಿದೆ. ಇಂದಿನ ದೃಶ್ಯ ಮಾಧ್ಯಮ ಡಿಜಿಟಲ್ ಮಾಧ್ಯಮದಿಂದ ಅವಶ್ಯವಾದುದನ್ನು ಬಳಸಿಕೊಂಡು ಪ್ರಗತಿಯಡೆಗೆ ಮುನ್ನಡೆಯಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಈ ಸಮಾರಂಭದಲ್ಲಿ ಎಸ್.ವಿ. ಪಾಟೀ ಲ್ ಗುಂಡೂರು ಇವರನ್ನು ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು

ಈ ಶುಭ ಸಮಾರಂಭದಲ್ಲಿ ಅಧ್ಯಕ್ಷರಾದ ಸಣ್ಣೆಪ್ಪ ವಿಠಲಾಪುರ, ಕಾರ್ಯದರ್ಶಿಗಳಾದ ರುದ್ರೇಶ್ ಡ್ಯಾಗಿ, ಶಾಲೆಯ ಮುಖ್ಯಗುರು ಗಳಾದ ನಿಂಗಪ್ಪ ಗುಂಡೂರು, ಹಿರಿಯ ಶಿಕ್ಷಕರಾದ ಪ್ರವೀಣ್ ಕುಮಾರ್, ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು

ಶಿಕ್ಷಕರಾದ ಮಹಮ್ಮದ್ ಹನೀಫ್ ಸ್ವಾಗತಿಸಿದರು, ನಾಗಭೂಷಣ ನಿರೂಪಿಸಿದರು, ಪ್ರವೀಣಕುಮಾರ್ ವಂದಿಸಿದರು.

Mallikarjun

Share
Published by
Mallikarjun

Recent Posts

ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ ಬಳಸಿದರೆ ಕಾನೂನು ಕ್ರಮ

Legal action if domestic gas is used for commercial purposes ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ…

11 hours ago

ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್

Let's have a plastic-free lifestyle: Nagaraj S. Guttedar ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್…

13 hours ago

ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ ದಿನಾಚರಣೆ ನ್ಯಾಯವಾದಿ ನಂದಿನಿ ಸಲಹೆ

Women need legal knowledge: Lawyer Nandini's advice on Women's Day ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ…

14 hours ago

ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯ.

Karnataka Provincial Farmers' Association demands justice for Kudathini land victims. ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು…

14 hours ago