ಹೊಸಕೇರಾ ಡಗ್ಗಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಮಟ್ಕಾ ದಂಧೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗ್ರಾಮಸ್ಥರ ದೂರು.

Villagers have filed a complaint demanding action against illegal liquor sales and matka racket in Hosakera Daggi village.

ಹೊಸಕೇರಾ ಡಗ್ಗಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಮಟ್ಕಾ ದಂಧೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗ್ರಾಮಸ್ಥರ ದೂರು.

ಗಂಗಾವತಿ: ತಾಲ್ಲೂಕಿನ ಹೊಸಕೇರಾ ಡಗ್ಗಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಮಟ್ಕಾ (ಓ.ಸಿ) ದಂಧೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಗ್ರಾಮದ ಹಿರಿಯರು, ಮಹಿಳೆಯರು ಹಾಗೂ ಯುವಕರು ಸೇರಿ ನೀಡಿದ ಮನವಿಯಲ್ಲಿ, ಗ್ರಾಮದಲ್ಲಿ ಸುಮಾರು ಆರಕ್ಕೂ ಹೆಚ್ಚು ಕಡೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದರಿಂದ ಬಡ ಕುಟುಂಬಗಳ ಯುವಕರು ಮತ್ತು ಮಹಿಳೆಯರು ಕುಡಿತದ ಚಟಕ್ಕೆ ಒಳಗಾಗಿ ಆರೋಗ್ಯ ಹಾನಿಗೊಳಗಾಗುತ್ತಿದ್ದಾರೆ. ಕುಟುಂಬಗಳಲ್ಲಿ ಗಲಾಟೆಯಿಂದ ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ ಹಾನಿ ಹಾಗೂ ಆರ್ಥಿಕ ಸಂಕಷ್ಟಗಳು ಹೆಚ್ಚುತ್ತಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಗ್ರಾಮದಲ್ಲಿ ಹಲವಾರು ಕಡೆಗಳಲ್ಲಿ ಮಟ್ಕಾ (ಓ.ಸಿ) ಜೂಜಾಟ ದಂಧೆ ನಡೆಯುತ್ತಿದ್ದು, “ಬಾಂಬೆ”, “ಕಲ್ಯಾಣಿ” ಮೊದಲಾದ ಹೆಸರಿನಲ್ಲಿ ದಿನಕ್ಕೆ ಮೂರು-ನಾಲ್ಕು ಬಾರಿ ಆಟಗಳನ್ನು ಆಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಇದರಿಂದ ಬಡವರು ತಮ್ಮ ಹಣವನ್ನು ಕಳೆದುಕೊಂಡು ಮನೆ ಸಾಮಗ್ರಿಗಳನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಅಕ್ರಮ ಮದ್ಯ ಮಾರಾಟ ಮತ್ತು ಮಟ್ಕಾ ದಂಧೆ ನಡೆಸುತ್ತಿರುವವರ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಂಡು, ಈ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸಂಬಂಧ ದೂರು ಪ್ರತಿಗಳನ್ನು
ಡಿವೈಎಸ್‌ಪಿ, ಗಂಗಾವತಿ
ಆರಕ್ಷಕ ನಿರೀಕ್ಷಕರು, ಗ್ರಾಮೀಣ ಪೊಲೀಸ್ ಠಾಣೆ, ಗಂಗಾವತಿ
ಅಬಕಾರಿ ನಿರೀಕ್ಷಕರು, ಅಬಕಾರಿ ಇಲಾಖೆ, ಗಂಗಾವತಿ ಇವರಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹನುಮೇಶ ನಾಯಕ್ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು), ದುರ್ಗೇಶ್ ರೆಡ್ಡಿ, ಮಂಜುನಾಥ್ ಡಗ್ಗಿ, ಅಯ್ಯಪ್ಪ ಹೆಬ್ಬಡ್, ನಿಂಗಪ್ಪ, ಅಲ್ಲಸಾಬ್, ಬಾಬು ಸಾಬ್, ಪ್ರವೀಣ್, ಹುಸೇನಪ್ಪ ಹೆಬ್ಬಡ್, ಭೀಮಪ್ಪ ಪೂಜಾರಿ, ಪುರುಷೋತ್ತಮ, ಕಂಠಪ್ಪ, ರಾಘವೇಂದ್ರ, ಕೆಂಚಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Mallikarjun

Share
Published by
Mallikarjun

Recent Posts

ಲಿಂಗದಹಳ್ಳಿ ಸಡಗರ ಸಂಭ್ರಮದಿಂದ ಜರಗಿದ ಅಮರೇಶ್ವರ ರಥೋತ್ಸವ

Amareshwara Chariot Festival celebrated with great enthusiasm by the people of Lingadahalli ಲಿಂಗದಹಳ್ಳಿ ಸಡಗರ ಸಂಭ್ರಮದಿಂದ…

20 minutes ago

ತುಂಗಭದ್ರಾ ನದಿಯಲ್ಲಿ ಕಾಲುಜಾರಿ ಇಬ್ಬರು ಯುವಕರು ಸಾವು,

Two youths die after falling into Tungabhadra river ತುಂಗಭದ್ರಾ ನದಿಯಲ್ಲಿ ಕಾಲುಜಾರಿ ಇಬ್ಬರು ಯುವಕರು ಸಾವು, ಗಂಗಾವತಿ…

43 minutes ago

ಹನೂರು ಬೆಟ್ಟಳ್ಳಿ ಮಾರಮ್ಮನ ಕಂಬ ಪ್ರತಿಷ್ಟಾಪನೆ ಒಂದು ವಾರ ಮಾಂಸ ಮಾರಾಟ ನಿಷೇಧ

Hanur Bettalli Maramma pillar installation, meat sale banned for one week ಹನೂರು ಬೆಟ್ಟಳ್ಳಿ ಮಾರಮ್ಮನ ಕಂಬ…

2 hours ago

ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಯಾವ ರೋಗಗಳನ್ನು ತಪ್ಪಿಸಬಹುದು?

What diseases can be prevented by eating garlic? ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಯಾವ ರೋಗಗಳನ್ನು ತಪ್ಪಿಸಬಹುದು? ವಿಶ್ವವಿಡೀ ಆರಾಧಿಸುತ್ತಿರುವ…

2 hours ago

ಹೂವಿನಾಳ್ ಸೀಮಾದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ಪ್ರಕರಣ ದಾಖಲು

Body of unidentified person found in Huvinal Seema: Case registered ಹೂವಿನಾಳ್ ಸೀಮಾದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ…

3 hours ago