ಯುವಕರಿಗೆ ಉದ್ಯೋಗ ಕೊಡದಿದ್ದರೆ ಹೋರಾಟ ಅನಿವಾರ್ಯ! ದಲಿತ ಸೇನೆ ಸರ್ಕಾರಕ್ಕೆ ಎಚ್ಚರಿಕೆ
If youth are not given jobs, struggle is inevitable! Dalit Sena warns government
ಗಂಗಾವತಿ: ರಾಜ್ಯ ಸರ್ಕಾರ ಮಂಡಿಸಲಿರುವ ಮಾರ್ಚ್ ಬಜೆಟ್‌ನಲ್ಲಿ ಯುವಜನತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಕ್ಕೆ ಹಾಗೂ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವುದಕ್ಕೆ ಆದ್ಯತೆ ನೀಡಬೇಕು ಎಂದು ದಲಿತ ಸೇನೆ ಜಿಲ್ಲಾ ಹಾಗೂ ತಾಲೂಕು ಸಮಿತಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ದಲಿತ ಸೇನೆಯ ಜಿಲ್ಲಾಧ್ಯಕ್ಷರಾದ ಉಡಚಪ್ಪ (ಶ್ರೀರಾಮನಗರ) ಅವರು ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಗಂಗಾವತಿ ತಹಸೀಲ್ದಾರರ ಮುಖಾಂತರ ಸಲ್ಲಿಸಿ ಮಾತನಾಡಿದರು. ರಾಜ್ಯದಲ್ಲಿ ಲಕ್ಷಾಂತರ ವಿದ್ಯಾವಂತ ನಿರುದ್ಯೋಗಿ ಯುವಕರು ಸರ್ಕಾರಿ ಉದ್ಯೋಗಕ್ಕಾಗಿ ಹಲವು ವರ್ಷಗಳಿಂದ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಂಡು ಹಾಜರಾಗುತ್ತಿದ್ದರೂ ನೇಮಕಾತಿ ಪ್ರಕ್ರಿಯೆಗಳು ವಿಳಂಬವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.
ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ಸಮಯಬದ್ಧವಾಗಿ ಪೂರ್ಣಗೊಳಿಸಿ ಯುವಕರಿಗೆ ನ್ಯಾಯಯುತ ಉದ್ಯೋಗಾವಕಾಶಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಶಿಕ್ಷಣ ಆರೋಗ್ಯ ಪೊಲೀಸ್, ಗ್ರಾಮೀಣಾಭಿವೃದ್ಧಿ ಹಾಗೂ ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿಯಾಗಿರುವುದರಿಂದ ಸಾರ್ವಜನಿಕ ಸೇವೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.
ಆದ್ದರಿಂದ ರಾಜ್ಯ ಬಜೆಟ್‌ನಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವುದರ ಜೊತೆಗೆ ಹೊಸ ಹುದ್ದೆಗಳನ್ನು ಸೃಷ್ಟಿಸಿ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಬೇಕು ಎಂದು ಒತ್ತಾಯಿಸಿ ದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌಲಾಸಾಬ ನದಾಫತಾಲೂಕು ಅಧ್ಯಕ್ಷ ಮೌಲಾಲಿ ಕೆ ತಾಲೂಕು ಉಪಾಧ್ಯಕ್ಷ ರಾಜಸಾಬ್ ನದಾಫ್ ತಾಲೂಕು ಪ್ರಧಾನ ಕಾರ್ಯದರ್ಶಿ ಹಸನ್ ಅಲ್ಲಿ ಕಾರ್ಮಿಕರ ಉಪಾಧ್ಯಕ್ಷ ದುರ್ಗಪ್ಪ ತಾಲೂಕು ಸಂಘಟನಾ ಕಾರ್ಯದರ್ಶಿ ಮರಿಲಿಂಗಪ್ಪ ಕಾರ್ಯಕಾರಿಣಿ ಸದಸ್ಯರಾದ ಸಕ್ರ ಸಾಬ್ ಹಾಗೂ ಹೊನ್ನೂರ್ ಸಾಬ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
:
Amareshwara Chariot Festival celebrated with great enthusiasm by the people of Lingadahalli ಲಿಂಗದಹಳ್ಳಿ ಸಡಗರ ಸಂಭ್ರಮದಿಂದ…
Two youths die after falling into Tungabhadra river ತುಂಗಭದ್ರಾ ನದಿಯಲ್ಲಿ ಕಾಲುಜಾರಿ ಇಬ್ಬರು ಯುವಕರು ಸಾವು, ಗಂಗಾವತಿ…
Hanur Bettalli Maramma pillar installation, meat sale banned for one week ಹನೂರು ಬೆಟ್ಟಳ್ಳಿ ಮಾರಮ್ಮನ ಕಂಬ…
Former MLA R Narendra will give good news to the farmers of Hanur constituency after…
What diseases can be prevented by eating garlic? ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಯಾವ ರೋಗಗಳನ್ನು ತಪ್ಪಿಸಬಹುದು? ವಿಶ್ವವಿಡೀ ಆರಾಧಿಸುತ್ತಿರುವ…
Body of unidentified person found in Huvinal Seema: Case registered ಹೂವಿನಾಳ್ ಸೀಮಾದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ…