ಹನೂರು ಬೆಟ್ಟಳ್ಳಿ ಮಾರಮ್ಮನ ಕಂಬ ಪ್ರತಿಷ್ಟಾಪನೆ ಒಂದು ವಾರ ಮಾಂಸ ಮಾರಾಟ ನಿಷೇಧ

Hanur Bettalli Maramma pillar installation, meat sale banned for one week

ಹನೂರು ಬೆಟ್ಟಳ್ಳಿ ಮಾರಮ್ಮನ ಕಂಬ ಪ್ರತಿಷ್ಟಾಪನೆ ಒಂದು ವಾರ ಮಾಂಸ ಮಾರಾಟ ನಿಷೇಧ


ವರದಿ: ಬಂಗಾರಪ್ಪ .ಸಿ .
ಹನೂರು: ಪಟ್ಟಣದ ಕ್ಷೇತ್ರದ ಅಧಿದೇವತೆಯಾದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಸಮಯದಲ್ಲಿ ಮಾರಿ ಕಂಬವನ್ನು ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಮುಂದಿನ ಎಂಟು ದಿನಗಳ ಕಾಲ ಪಟ್ಟಣದಲ್ಲಿರುವ ಸರ್ವ ಧರ್ಮಗಳ ಮಾಂಸದ ಅಂಗಡಿಯವರು ಮಾರಾಟವನ್ನು ಸಂಪೂರ್ಣವಾಗಿ ನಿಷೇಧವನ್ನು ಮಾಡಲಾಗಿದೆ.

ಪ್ರತಿ ವರ್ಷದಂತೆಯೆ ಈ ವರ್ಷವು ಮಾರಮ್ಮನ
ಜಾತ್ರೆಯ ನಿಮಿತ್ತವಾಗಿ ಮಾರಿ ಕಂಬದ ಪ್ರತಿಷ್ಠಾಪನೆಯ ದಿನದಿಂದ ಒಂದು ವಾರದವರೆಗೆ ಮನೆಗಳಲ್ಲಿ ಒಗ್ಗರಣೆ ಇಲ್ಲದೆ ಅಡುಗೆ ಮಾಡುವ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಇದು ಗ್ರಾಮೀಣ ಸಂಸ್ಕೃತಿ ಮತ್ತು ಭಕ್ತಿಭಾವದ ಪ್ರತೀಕವಾಗಿದ್ದು
ಜಾತ್ರಾ ಮಹೋತ್ಸವವನ್ನು ಎಲ್ಲಾ ಸಮುದಾಯದವರು ಸಹಮತದಿಂದ ಒಟ್ಟುಗೂಡಿ ಒಂದಾಗಿ ಆಚರಿಸುವುದು ಹನೂರಿನ ಜನತೆಯ ವಿಶೇಷ ಪರಂಪರೆಯಾಗಿದೆ. ಹಲವು ವರ್ಷಗಳಿಂದ ಹಿಂದು ಸಂಪ್ರದಾಯದ ಜಾತ್ರೆಯಾದರು ಸಹ ಮುಸ್ಲಿಂ ಸಮುದಾಯದವರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಮಾಂಸ ಮಾರಾಟವನ್ನು ನಿಲ್ಲಿಸುತ್ತಿದ್ದು, ಜಾತ್ರೆ ಯಶಸ್ವಿಯಾಗಲು ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ.
ಇದೇ ರೀತಿಯಲ್ಲಿ ಮುಸ್ಲಿಂ ಬಾಂಧವರು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದು ರೂಡಿಯಾಗಿದೆ, ಹಿಂದೂ–ಮುಸ್ಲಿಂ ಸಾಮರಸ್ಯದ ಅಪೂರ್ವ ಉದಾಹರಣೆಯಾಗಿದೆ.
ಹನೂರು ಪಟ್ಟಣದಲ್ಲಿ ಎರಡು ಸಮುದಾಯದವರು ಅಣ್ಣ-ತಮ್ಮಂದಿರಂತೆ ಪ್ರೀತಿ, ವಿಶ್ವಾಸ ಮತ್ತು ಸಹಕಾರದಿಂದ ಪ್ರತಿಯೊಂದು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಜಾತ್ರಾ ಮಹೋತ್ಸವ ಮಾರ್ಚ್ 9 ರಿಂದ 13 ರವರೆಗೆ ಐದು ದಿನಗಳ ಕಾಲ ನಡೆಯಲಿದೆ.

ಮಾರ್ಚ್ 9 ರಂದು ರ ಸೋಮವಾರದಿಂದ ಜಾಗರ ಸಮರ್ಪಣೆ, 10 ರ ಮಂಗಳವಾರ ಮಧ್ಯಾಹ್ನ ರಥೋತ್ಸವ ಹಾಗೂ ತಂಪು ಜ್ಯೋತಿ, 11ರಂದು ದೊಡ್ಡ ಬಾಯಿ ಬೀಗ, 12 ರಂದು ಅಗ್ನಿಕುಂಡ ದರ್ಶನ,13 ರಂದು ಆರ್ ಎಸ್ ದೊಡ್ಡಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯುವುದರ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.

ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಫೆಬ್ರವರಿ 24ರಂದು ಚಾಲನೆ ನೀಡಲಾಗಿದೆ.

ಇದಾದ ಎಂಟು ದಿನಗಳ ನಂತರ ಮಾರ್ಚ್ 3 ರ ಮಂಗಳವಾರ ಬೆಟ್ಟಳ್ಳಿ ಮಾರಮ್ಮನ ಪತಿ ಎಂಬ ಪ್ರತೀತಿ ಇರುವ ಮೂರು ಕವಲಿನ ಕಂಬವನ್ನು ದೇವಸ್ಥಾನದ ಮುಂಭಾಗದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಕಂಬ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಪಟ್ಟಣದ ರಾಘು ಹರೀಶ್, ಪಾರ್ಥ, ಪ್ರದೀಪ್ ಸೇರಿದಂತೆ ಇನ್ನಿತರ ಯುವಕರ ತಂಡ ದೇವಸ್ಥಾನದ ಒಳಾಂಗಣದಲ್ಲಿ ವಿವಿಧ ಬಗೆಯ ಫಲ-ಪುಷ್ಪಗಳು ಹಾಗೂ ತೆಂಗಿನ ಮರದ ಗರಿಗಳಿಂದ ಅಲಂಕಾರ ಮಾಡಿದ್ದರು. ಇದಲ್ಲದೆ ದೇವಾಲಯದ ವತಿಯಿಂದ ದೇವಸ್ಥಾನದ ಹೊರಾಂಗಣದಲ್ಲಿ ವಿಶೇಷವಾದ ಹಸಿರು ಚಪ್ಪರ, ದೇವಸ್ಥಾನದ ಹೊರ ಆವರಣ, ಗೋಪುರಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು.

ಕಂಬ ಪ್ರತಿಷ್ಠಾಪನೆ: ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರೋತ್ಸವಕ್ಕೆ ಚಾಲನೆ ನೀಡಿದ ಎಂಟು ದಿನಗಳ ನಂತರ ಸರಿಯಾಗಿ ಮೂರು ಕವಲಿನ ಕಂಬ ಪ್ರತಿಷ್ಠಾಪನೆ ಮಾಡುವುದು ಸಂಪ್ರದಾಯ. ಅದರಂತೆ ಮಂಗಳವಾರ ವಾದ್ಯ ಮೇಳಗ ಳೊಂದಿಗೆ ಪಟ್ಟಣದ ಆಂಜನೇಯ ದೇವಸ್ಥಾನದ ಸಮೀಪ ಸಿದ್ದಪಡಿಸಿದ್ದ ಕಂಬವನ್ನು ಮೆರವಣಿಗೆಯ ಮೂಲಕ ತಂದು ದೇವ ಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಯಿತು.

ಮಂಗಳವಾರ ಮುಂಜಾನೆಯಿಂದಲೇ ದೇವಿಗೆ ಎಳನೀರು, ಜೇನುತುಪ್ಪ, ಹಾಲು, ಮೊಸರು, ಅರಿಶಿನ ಕುಂಕುಮದಲ್ಲಿ ವಿಶೇಷ ಪೂಜೆಯನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ರಾಜು ರಾವ್, ಶೇಖರ್ ದೀಕ್ಷಿತ್ ನೇತೃತ್ವದಲ್ಲಿ ನೆರವೇರಿಸಲಾಯಿತು.

ಮಂಗಳವಾರ ರಾತ್ರಿ ನಡೆದ ಕಂಬ ಪ್ರತಿಷ್ಠಾನೆ ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ವಾರ್ಡ್ ಗಳ ವಿವಿಧ ಸಮುದಾಯಗಳ ಮಕ್ಕಳು, ಮಹಿಳೆಯರು,ಪುರುಷರು ಸಮುದಾಯದ ಯಜಮಾನರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Mallikarjun

Share
Published by
Mallikarjun

Recent Posts

ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಯಾವ ರೋಗಗಳನ್ನು ತಪ್ಪಿಸಬಹುದು?

What diseases can be prevented by eating garlic? ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಯಾವ ರೋಗಗಳನ್ನು ತಪ್ಪಿಸಬಹುದು? ವಿಶ್ವವಿಡೀ ಆರಾಧಿಸುತ್ತಿರುವ…

2 hours ago

ಹೂವಿನಾಳ್ ಸೀಮಾದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ಪ್ರಕರಣ ದಾಖಲು

Body of unidentified person found in Huvinal Seema: Case registered ಹೂವಿನಾಳ್ ಸೀಮಾದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ…

2 hours ago

ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ

Appeal to locate heirs of unknown deceased person ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ ಕೊಪ್ಪಳ…

2 hours ago

ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ

Applications invited for working in Village-1 centers ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ ಕೊಪ್ಪಳ ಮಾರ್ಚ್ 04…

2 hours ago

ಯುವಕರಿಗೆ ಉದ್ಯೋಗ ಕೊಡದಿದ್ದರೆ ಹೋರಾಟ ಅನಿವಾರ್ಯ!  ದಲಿತ ಸೇನೆ ಸರ್ಕಾರಕ್ಕೆ ಎಚ್ಚರಿ

ಯುವಕರಿಗೆ ಉದ್ಯೋಗ ಕೊಡದಿದ್ದರೆ ಹೋರಾಟ ಅನಿವಾರ್ಯ!  ದಲಿತ ಸೇನೆ ಸರ್ಕಾರಕ್ಕೆ ಎಚ್ಚರಿಕೆ If youth are not given jobs,…

2 hours ago