Body of unidentified person found in Huvinal Seema: Case registered
ಹೂವಿನಾಳ್ ಸೀಮಾದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ಪ್ರಕರಣ ದಾಖಲು
ಕೊಪ್ಪಳ ಮಾರ್ಚ್ 04 (ಕರ್ನಾಟಕ ವಾರ್ತೆ): ಕೊಪ್ಪಳ ತಾಲ್ಲೂಕಿನ ಹೂವಿನಾಳ್ ಸೀಮಾದಲ್ಲಿರುವ ಹೊಸಪೇಟೆ-ಗದಗ ಎನ್ ಹೆಚ್-67 ಮುಖ್ಯ ರಸ್ತೆಯ ಪಕ್ಕದ ಸಿ.ಎನ್.ಜಿ ಪೆಟ್ರೋಲ್ ಬಂಕ್ ಹಿಂದೆ ಇರುವ ಗೃಹ ಮಂಡಳಿ ಲೇಔಟ್ ಪಕ್ಕದ ಗಟಾರ್‌ದಲ್ಲಿ , ಸುಮಾರು 40 ರಿಂದ 45 ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತದೇಹ ಕಂಡು ಬಂದಿದ್ದು, ಈ ಬಗ್ಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣೆ ಯು.ಡಿ.ಆರ್ ನಂ: 04/2026 ಕಲಂ:194 (3)(IV) ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
2026ರ ಮಾರ್ಚ್ 2 ರಂದು ಮಧ್ಯಾಹ್ನ 2.10 (ಪಿ.ಎಂ)ಕ್ಕೆ ವೀರಭದ್ರಯ್ಯ ಹೆಚ್ ಸಿ-109 ಕೊಪ್ಪಳ ಗ್ರಾಮೀಣ ಠಾಣೆರವರು ಠಾಣೆಗೆ ಹಾಜರಾಗಿ ಗಣಿಕೀಕೃತ ದೂರು ನೀಡಿದ ಸಾರಾಂಶದಂತೆ, ವೀರಭದ್ರಯ್ಯ ಅವರು 2026ರ ಮಾರ್ಚ್ 1ರ ಬೆಳಿಗ್ಗೆ 9-30 ಗಂಟೆಯ ಸುಮಾರಿಗೆ ಗ್ರಾಮ ಬೀಟ್ ಕರ್ತವ್ಯ ಕುರಿತು ಹೋಗುತ್ತಿರುವಾಗ ಹೂವಿನಾಳ್ ಸೀಮಾದಲ್ಲಿರುವ ಹೊಸಪೇಟೆ-ಗದಗ ಎನ್ ಹೆಚ್-67 ಮುಖ್ಯ ರಸ್ತೆಯ ಪಕ್ಕದ ಸಿ.ಎನ್.ಜಿ ಪೆಟ್ರೋಲ್ ಬಂಕ್ ಹಿಂದೆ ಇರುವ ಗೃಹ ಮಂಡಳಿ ಲೇಔಟ್ ಪಕ್ಕದ ಗಟಾರ್‌ದಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹ ಇರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದರಿಂದ ಕೂಡಲೇ ಸ್ಥಳಕ್ಕೆ ಹೋಗಿ ನೋಡಿದಾಗ ವಿಷಯ ನಿಜವಿದ್ದು, ಈ ಬಗ್ಗೆ ಅಲ್ಲಿದ್ದ ಸಾರ್ವಜನಿಕರನ್ನು ವಿಚಾರಿಸಿದಾಗ ಈ ಮೃತ ದೇಹದ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿರುವುದಿಲ್ಲ. ಮುಂದಿನ ಕಾನೂನು ಕ್ರಮಕ್ಕೆ ವಿನಂತಿಸಿಕೊAಡಿದ್ದು, ಈ ಬಗ್ಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮೃತ ವ್ಯಕ್ತಿಯ ಚಹರೆ ವಿವರ: ಎತ್ತರ: ಸುಮಾರು 5 ಅಡಿ 4 ಇಂಚು ಎತ್ತರ, ಸಾಧಾ ಕೆಂಪನೇಯ ಮೈಬಣ್ಣ ಹೊಂದಿದ್ದು, ಸುಮಾರು 40 ರಿಂದ 45 ವಯಸ್ಸು, ತಲೆಯಲ್ಲಿ ಸುಮಾರು ಒಂದು ಇಂಚು ಉದ್ದದ ಕಪ್ಪು ಮತ್ತು ಬಿಳಿ ಮಿಶ್ರಿತ ಕೂದಲು ಮತ್ತು ಕೊರಚಲ ಗಡ್ಡವನ್ನು ಬಿಟ್ಟಿದ್ದು ಇದೆ. ಸೊಂಟದಲ್ಲಿ ಬಿಳಿ ಪ್ಲಾಸ್ಟಿಕ್ ದಾರಾ ಕಟ್ಟಿದ್ದು ಹಾಗೂ ಅಲೆಮಾರಿ ಹುಚ್ಚನಂತೆ ಇರುತ್ತಾನೆ. ಮೃತನ ಮೈ ಮೇಲೆ ಹಸಿರು ಬಣ್ಣದ ತುಂಬು ತೋಳಿನ ಅಂಗಿ, ಬಿಳಿ ಬಣ್ಣದ ಫ್ಯಾಂಟ್ ಇದ್ದು, ಈ ಮೃತ ವ್ಯಕ್ತಿಯ ವಾರಸುದಾರರಿದ್ದಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಹಾಗೂ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿ ಅಥವಾ ಕೊಪ್ಪಳ ಕಂಟ್ರೋಲ್ ರೂಂ.ನಂ: 08539-230100 & 230222, ಕೊಪ್ಪಳ ಗ್ರಾಮೀಣ ಪೊಲೀಸ ಠಾಣೆ ಪಿ.ಎಸ್.ಐ ಮೊ.ಸಂ: 9480803746, ಗ್ರಾಮೀಣ ಪೊಲೀಸ್ ಠಾಣೆ ದೂ.ಸಂ: 08539-221333 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Hanur Bettalli Maramma pillar installation, meat sale banned for one week ಹನೂರು ಬೆಟ್ಟಳ್ಳಿ ಮಾರಮ್ಮನ ಕಂಬ…
Former MLA R Narendra will give good news to the farmers of Hanur constituency after…
What diseases can be prevented by eating garlic? ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಯಾವ ರೋಗಗಳನ್ನು ತಪ್ಪಿಸಬಹುದು? ವಿಶ್ವವಿಡೀ ಆರಾಧಿಸುತ್ತಿರುವ…
Appeal to locate heirs of unknown deceased person ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ ಕೊಪ್ಪಳ…
Applications invited for working in Village-1 centers ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ ಕೊಪ್ಪಳ ಮಾರ್ಚ್ 04…
ಯುವಕರಿಗೆ ಉದ್ಯೋಗ ಕೊಡದಿದ್ದರೆ ಹೋರಾಟ ಅನಿವಾರ್ಯ! ದಲಿತ ಸೇನೆ ಸರ್ಕಾರಕ್ಕೆ ಎಚ್ಚರಿಕೆ If youth are not given jobs,…