ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ

Appeal to locate heirs of unknown deceased person
 

ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ


ಕೊಪ್ಪಳ ಮಾರ್ಚ್ 04 (ಕರ್ನಾಟಕ ವಾರ್ತೆ): ಕೊಪ್ಪಳದಿಂದ ಮಂಗಳಾಪುರಕ್ಕೆ ಹೋಗುವ ಗುಮ್ಮಣ್ಣೀಶ್ವರ ಗುಡಿಯ ಮುಂಭಾಗದ ಹೊಲದಲ್ಲಿ  ಮೃತಪಟ್ಟ ಸುಮಾರು 30 ರಿಂದ 35  ವಯಸ್ಸಿನ ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಸಹಕರಿಸಲು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಸೈಯದ್ ತಾಜುದ್ಧಿನ್ ಸಿಪಿಸಿ 222 ಅವರು 2026ರ ಫೆಬ್ರವರಿ 24 ರಂದು ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದು, ಸುಮಾರು 30 ರಿಂದ 35 ವಯಸ್ಸಿನ ಅಪರಿಚಿತ ಗಂಡಸಿನ ಮೃತ ದೇಹವಿದ್ದು, ಎಡಗೈ ಮೇಲಿನ ಮಾಂಸಖಂಡ ಸಂಪೂರ್ಣ ವಾಗಿ ಕಳಚಿ ಕೇವಲ ಎಲಬು ಮಾತ್ರ ಇದ್ದು, ಹೊಟ್ಟೆಯ ಭಾಗದ ಮೇಲಿನ ಚರ್ಮ ಕಳಚಿ ಕರಳುಗಳು ಹೊರ ಬಂದು ದೇಹವು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿತ್ತು. ಮೃತ ದೇಹದ ಬಗ್ಗೆ ಅಲ್ಲಿದ್ದ ಸಾರ್ವಜನಿಕರನ್ನು ವಿಚಾರಿಸಲಾಗಿ ಮೃತ ದೇಹದ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿರುವುದಿಲ್ಲ ಎಂದು ದೂರು ನೀಡಿದ್ದು, ಈ ಬಗ್ಗೆ ಕೊಪ್ಪಳ ಗ್ರಾಮೀಣ  ಠಾಣೆಯ ಯು.ಡಿ ಆರ್ ನಂ 03/2026 ಕಲಂ: 194 194 (IV) ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೃತ ವ್ಯಕ್ತಿಯ ಚಹರೆ ವಿವರ: ಸುಮಾರು 5.6 ಅಡಿ ‎ಎತ್ತರ, ಸಾದಾರಣ ಮೈಕಟ್ಟು, ಕೋಲು ಮುಖ, ಗೋದಿ ಮೈಬಣ್ಣ ಹಾಗೂ ದೇಹದ ಮೇಲೆ ಒಂದು ಹಸಿರು ಬಣ್ಣದ ಲಾಂಗ್ ಚಡ್ಡಿ ಇರುತ್ತದೆ. ವ್ಯಕ್ತಿಯು ಸುಮಾರು 30 ರಿಂದ 35 ವರ್ಷದವನಾಗಿದ್ದು, ಎಡಗೈ ಮೇಲಿನ ಮಾಂಸಖಂಡ ಸಂಪೂರ್ಣವಾಗಿ ಕಳಚಿ ಕೇವಲ ಎಲಬು ಮಾತ್ರ ಇದೆ. ಹೊಟ್ಟೆಯ ಭಾಗದ ಮೇಲಿನ ಚರ್ಮ ಕಳಚಿ ಕರಳುಗಳು ಹೊರ ಬಂದು ದೇಹವು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿರುತ್ತದೆ. ಈ ಮೃತ ವ್ಯಕ್ತಿಯ ವಾರಸುದಾರರಿದ್ದಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಹಾಗೂ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿ ಅಥವಾ ಕೊಪ್ಪಳ ಕಂಟ್ರೋಲ್ ರೂಂ.ನಂ: 08539-230100 & 230222, ಕೊಪ್ಪಳ ಗ್ರಾಮೀಣ ಪೊಲೀಸ ಠಾಣೆ ಪಿ.ಎಸ್.ಐ ಮೊ.ಸಂ: 9480803746, ಗ್ರಾಮೀಣ ಪೊಲೀಸ್ ಠಾಣೆ ದೂ.ಸಂ: 08539-221333 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Mallikarjun

Share
Published by
Mallikarjun

Recent Posts

ಹನೂರು ಬೆಟ್ಟಳ್ಳಿ ಮಾರಮ್ಮನ ಕಂಬ ಪ್ರತಿಷ್ಟಾಪನೆ ಒಂದು ವಾರ ಮಾಂಸ ಮಾರಾಟ ನಿಷೇಧ

Hanur Bettalli Maramma pillar installation, meat sale banned for one week ಹನೂರು ಬೆಟ್ಟಳ್ಳಿ ಮಾರಮ್ಮನ ಕಂಬ…

1 hour ago

ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಯಾವ ರೋಗಗಳನ್ನು ತಪ್ಪಿಸಬಹುದು?

What diseases can be prevented by eating garlic? ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಯಾವ ರೋಗಗಳನ್ನು ತಪ್ಪಿಸಬಹುದು? ವಿಶ್ವವಿಡೀ ಆರಾಧಿಸುತ್ತಿರುವ…

2 hours ago

ಹೂವಿನಾಳ್ ಸೀಮಾದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ಪ್ರಕರಣ ದಾಖಲು

Body of unidentified person found in Huvinal Seema: Case registered ಹೂವಿನಾಳ್ ಸೀಮಾದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ…

2 hours ago

ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ

Applications invited for working in Village-1 centers ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ ಕೊಪ್ಪಳ ಮಾರ್ಚ್ 04…

2 hours ago

ಯುವಕರಿಗೆ ಉದ್ಯೋಗ ಕೊಡದಿದ್ದರೆ ಹೋರಾಟ ಅನಿವಾರ್ಯ!  ದಲಿತ ಸೇನೆ ಸರ್ಕಾರಕ್ಕೆ ಎಚ್ಚರಿ

ಯುವಕರಿಗೆ ಉದ್ಯೋಗ ಕೊಡದಿದ್ದರೆ ಹೋರಾಟ ಅನಿವಾರ್ಯ!  ದಲಿತ ಸೇನೆ ಸರ್ಕಾರಕ್ಕೆ ಎಚ್ಚರಿಕೆ If youth are not given jobs,…

2 hours ago