Tribute to environmental ascetic Meru Jiva during protest sit-in
ಕೊಪ್ಪಳ: ನಗರಸಭೆ ಆವರಣದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಬಲ್ಡೋಟ ಹಾಗೂ ಇತರ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕೆಂದು, ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಬೇಕೆಂದು ನಡೆಸುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹ 16ನೇ ದಿನ ಪೂರ್ಣಗೊಳಿಸಿ ಶತಾಯುಷಿ ಸಾಲುಮರದ ತಿಮ್ಮಕ್ಕ ಅವರ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಧಾರವಾಡ ಜನ ಜಾಗೃತಿ ಅಭಿಯಾನದ ರಾಮಾಂಜನಪ್ಪ ಆಲ್ದಳ್ಳಿ ಅವರು ಬೆಳಿಗ್ಗೆಯಿಂದ ಕಾರ್ಖಾನೆ ದೂಳು ಬಾಧಿತ ಗಿಣಿಗೇರಿ, ಕನಕಾಪುರ, ಹಿರೇಬಗನಾಳ, ಚಿಕ್ಕಬಗನಾಳ, ಕುಣಿಕೇರಿ, ತಾಂಡಾ ಮುಂತಾದ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿರುವ ನೈಜ ಸ್ಥಿತಿಯನ್ನು ಅರಿಯಲು ಆ ಜನರನ್ನು ಸಂದರ್ಶನ ಮಾಡಿ ನೇರವಾಗಿ ಧರಣಿ ಸ್ಥಳಕ್ಕೆ ಬಂದು ಬಲ್ಡೋಟ ವಿಸ್ತರಣೆ ವಿರೋಧಿಸಿದ ಈ ಹೋರಾಟ ಅತ್ಯಂತ ನ್ಯಾಯಸಮ್ಮತವಾದ. ಜನಪರ ಚಹವಳಿಯಾಗಿದೆ. ಜನಗಳ ಆರೋಗ್ದ ಮೆಲೆ ತೀವ್ರ ದುಷ್ಪರಿಣಾಮವಾಗುವುದು ಗೊತ್ತಿದ್ದೂ ಕೊಪ್ಪಳ ಸುತ್ತ ಹತ್ತಾರು ಬೃಹತ್ ಕಾರ್ಖಾನೆ ಗಳಿಗೆ ಅನುಮತಿ ಕೊಟ್ಟಿರುವ ಷರ್ಕಾರದ ನಿರ್ಧಾರ ಖಂಡನಾರ್ಹವಾಗಿದೆ. ಜನಬೆಂಬಲದೊಂದಿಗೆ ಬಲಿಷ್ಠ ಚಳವಳಿಯಾಗಿ ಬೆಳೆಯುವಂತಿಗಲೀ, ನಾವೂ ನಿಮ್ಮ ಬೆಂಬಲಕ್ಕೆ ಇದ್ಧೇವೆ ಎಂದರು. ಧರಣಿ ಸ್ಥಳದ ಇಂದಿನ ನಿರ್ಣಯ: 114ರ ದೀರ್ಘಾಯುಷಿ ತನ್ನ ಬದುಕಿದ ಎಲ್ಲಾ ದಿನಗಳನ್ನು ಮರಗಳನ್ನು ಬೆಳೆಸಿ ಪ್ರಕೃತಿಗೆ ಅಪರಮಿತ ಕಾಣಿಕೆಯನ್ನು ಕೊಟ್ಟು ಚಿರಸ್ಥಾಯಿಯಾದರು. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅವರ ಪರಿಸರ ಕಾಳಜಿಯ ಪ್ರಜ್ಞೆ, ತಪಸ್ಸಿನ ಜೀವನ ತೆಗೆದ ಸಾಲುಮರದ ತಿಮ್ಮಕ್ಕ ನಮ್ಮ ಹೋರಾಟಕ್ಕೆ ಪ್ರೇರಣೆಯಾಗಿದೆ. ಈ ಹೋರಾಟ ಜಯ ಸಾಧಿಸುವ ಕೊನೆಯ ದಿನದವರೆಗೆ ಇವರ ಭಾವಚಿತ್ರ ಧರಣಿ ಟೆಂಟ್ ಸ್ಥಳದಲ್ಲಿ ಇಡಬೇಕೆಂದು ನಿರ್ಣಯ ತೆಗೆದುಕೊಳ್ಳಲಾಯಿತು.
ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ.ಗೋನಾಳ, ಬಸವರಾಜ ಶೀಲವಂತರ, ಎಸ್.ಎ.ಗಫಾರ್, ನಿಂಗಜ್ಜ ಬಿ.ಬಂಡಿಹರ್ಲಾಪುರ, ಡಿ.ರಾಜರತ್ನಂ, ಎಸ್.ಬಿ. ರಾಜೂರ, ಶಂಭುಲಿಂಗಪ್ಪ ಹರಗೇರಿ, ಮಂಗಳೇಶ ರಾಠೋಡ್ ಎಸ್ ಮಹಾದೇವಪ್ಪ ಮಾವಿನಮಡು, ಡಿ.ರತ್ನಾ, ರಜಾಕ್ ಪೇಂಟರ್, ಬಸವರಾಜ್ ಪೆಂಟರ್, ಆಸೀಫ್ ಕಿಲ್ಲೆದಾರ ಹಾಗೂ ಕಾಲೆಜು ವಿದ್ಯಾರ್ಥಿಗಳು ಇದ್ದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…