Inauguration of Koppal District Building and Other Construction Workers' Association ಗಂಗಾವತಿ: ಕ್ರಾಂತಿಚಕ್ರ ಬಳಗದ ಅಡಿಯಲ್ಲಿ ನೋಂದಣಿಯಾದ ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಉದ್ಘಾಟನೆಯನ್ನು ಸೆಪ್ಟೆಂಬರ್-೨೮ ಭಾನುವಾರ ನಗರದ ಚಲುವಾದಿ ಓಣಿಯ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಗೌರವಾಧ್ಯಕ್ಷರಾದ ಭಾರಧ್ವಾಜ್ ತಿಳಿಸಿದರು.
ಈ ಸಂಘದ ಉದ್ಘಾಟನೆಯನ್ನು ಈ ಮೊದಲು ಆಟೋನಗರದ ಕ್ರಾಂತಿಕೇAದ್ರದಲ್ಲಿ ಮಾಡುವುದಾಗಿ ನಿರ್ಧರಿಸಲಾಗಿತ್ತು. ಆದರೆ ಮಳೆಯ ಕಾರಣದಿಂದಾಗಿ ಉದ್ಘಾಟನಾ ಸಮಾರಂಭವನ್ನು ನಗರದ ಮಧ್ಯಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಈ ಸಮಾರಂಭ ಉದ್ಘಾಟನೆಯನ್ನು ಹಿರಿಯ ಹೈಕೋರ್ಟ್ ವಕೀಲರಾದ ಎಸ್. ಬಾಲನ್ ಅವರು ಮಾಡಲಿದ್ದು, ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಸಿ.ಹೆಚ್. ನಾರಿನಾಳ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿವಿಧ ಕಡೆಗಳಿಂದ ಗಣ್ಯರು, ಪ್ರಗತಿಪರರು ಭಾಗವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಜಿಲ್ಲೆಯ ಎಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಸಂಘ-ಸAಸ್ಥೆಗಳು, ಸಾರ್ವಜಿನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದರು.
Don't listen to false rumors about cooking gas: Dr. Suresh B. Itnal ಅಡುಗೆ ಅನಿಲದ ಬಗೆಗಿನ…
Job fair in Koppal on March 17th ಮಾ.17 ರಂದು ಕೊಪ್ಪಳದಲ್ಲಿ ಉದ್ಯೋಗ ಮೇಳ ಕೊಪ್ಪಳ ಮಾರ್ಚ್ 16,…
All arrangements have been made for the devotees who will be attending the Ugadi fair…
School anniversary celebrated with grandeur in Indaragi ಇಂದರಗಿಯಲ್ಲಿ ಅದ್ದೂರಿಯಾಗಿ ಜರುಗಿದ ಶಾಲಾ ವಾರ್ಷಿಕೋತ್ಸವ ಗಂಗಾವತಿ:ಮಾ.14:ಶಾಲಾ ವಾರ್ಷಿಕೋತ್ಸವವು ಕೇವಲ…
Pushpanjali Gunna elected as district president of Bhovi community women's unit ಭೋವಿ ಸಮುದಾಯದ ಮಹಿಳಾ ಘಟಕದ…
Hudali puja for bridge and CC road work at a cost of four and a…