Village PDO Suresh Chalavadi appeals to join hands for clean village construction ಕಸ ಎಸೆಯುವ ಜಾಗದಲ್ಲಿ ಶ್ರಮದಾನ ಮಾಡಿ ರಂಗೋಲಿ ಬಿಡಿಸಿದ ಗ್ರಾಪಂ ಆಡಳಿತ ಮಂಡಳಿ !
ವಡ್ಡರಹಟ್ಟಿ ಗ್ರಾಪಂನಿಂದ ವಿನೂತನ ಪ್ರಯೋಗ
ಗಂಗಾವತಿ: ಕೊಪ್ಪಳ-ಗಂಗಾವತಿ ರಾಜ್ಯ ಹೆದ್ದಾರಿಯಲ್ಲಿರುವ ವಡ್ಡರಹಟ್ಟಿ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಸ್ಥಳದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನ ಅಂಗವಾಗಿ ಗ್ರಾಮ ಪಂಚಾಯತ್ ಅಂಗವಾಗಿ ಗುರುವಾರ ಒಂದು ದಿನ, ಒಂದು ಗಂಟೆ ಸ್ವಚ್ಛತಾ ಕಾರ್ಯಕೈಗೊಂಡು, ಶ್ರಮದಾನ ಮಾಡಿದ ಸ್ಥಳದಲ್ಲಿ ರಂಗೋಲಿ ಬಿಡಿಸಿ, ಸಸಿ ನೆಟ್ಟು ವಿಭಿನ್ನವಾಗಿ ಮಾಡಿರುವುದು ಎಲ್ಲರ ಗಮನಸೆಳೆದಿದೆ.
ಗ್ರಾಪಂ ಅಧಿಕಾರಿಗಳು, ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಕೈಯಲ್ಲಿ ಪೊರಕೆ ಹಿಡಿದು ವಡ್ಡರಹಟ್ಟಿ ಗ್ರಾಮದ ರಸ್ತೆ ಬದಿ ಎಲ್ಲೆಂದರಲ್ಲಿ ಹಾಕಿದ್ದ ಕಸದ ರಾಶಿ, ಸಾರ್ವಜನಿಕ ಸ್ಥಳ, ವಡ್ಡರಹಟ್ಟಿ ಕ್ಯಾಂಪ್ ನ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯಕೈಗೊಂಡರು. ಸ್ವಚ್ಛತಾ ಕಾರ್ಯದ ನಂತರ ಮಹಿಳೆಯರು ರಂಗೋಲಿ ಬಿಡಿಸಿದರು, ಸದಸ್ಯರು ಸಸಿ ನೆಟ್ಟು ವಿಭಿನ್ನವಾಗಿ ಸ್ವಚ್ಛತಾ ಹೀ ಸೇವಾ ಅಭಿಯಾನ ನಡೆಸಿದರು.
ವಡ್ಡರಹಟ್ಟಿ ಗ್ರಾಪಂ ಉಪಾಧ್ಯಕ್ಷರಾದ ಟಿ.ಗೌಸ್ ಸಾಬ್ , ಸದಸ್ಯರಾದ ಹುಸೇನಪ್ಪ ಬಂಡೇನಾಯಕ, ಸಯ್ಯದ್ ಮೇರಾಜ್, ಭರತ್ ಕುಮಾರ್, ಶಾಂತಮ್ಮ, ಕಾರ್ಯದರ್ಶಿ ಈಶಪ್ಪ, ಸಿಎಚ್ ಓ ಮಂಜುಳಾ, ಗ್ರಾಪಂ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿ ಇತರರಿದ್ದರು.
Legal action if domestic gas is used for commercial purposes ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ…
Municipal Council budget pre-meeting on March 16thPublic invited to participate by civic commissioner ಮಾ.16ರಂದು ನಗರಸಭೆ…
Let's have a plastic-free lifestyle: Nagaraj S. Guttedar ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್…
Women need legal knowledge: Lawyer Nandini's advice on Women's Day ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ…
Government warns Samar International Islamic School for starting school enrollment in violation of court order…
Karnataka Provincial Farmers' Association demands justice for Kudathini land victims. ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು…