ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಮಾಹಿತಿ ನೀಡುವಲ್ಲಿ ಸ್ವಯಂ ಸೇವಕರ ಪಾತ್ರ ಬಹಳ ಮುಖ್ಯ: ನ್ಯಾ. ಶಶಿಧರ್ ಶೆಟ್ಟಿ

The role of volunteers is very important in informing the public about the law: Justice Shashidhar Shetty

ಕೊಪ್ಪಳ ಸೆಪ್ಟೆಂಬರ್ 23 (ಕರ್ನಾಟಕ ವಾರ್ತೆ): ಜನರ ಸಮಸ್ಯೆಗಳನ್ನು ತಿಳಿಯಲು ಮತ್ತು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ, ಕಾನೂನಿನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವಲ್ಲಿ ಅರೆ ಕಾನೂನು ಸ್ವಯಂ ಸೇವಕರ ಪಾತ್ರ ಬಹಳ ಮುಖ್ಯವಾದದ್ದು, ಹಾಗಾಗಿ ರಾಜ್ಯದ ಎಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಅರೆ ಕಾಲಿಕ ಸ್ವಯಂ ಸೇವಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ನ್ಯಾ. ಶಶಿಧರ್ ಶೆಟ್ಟಿ ಹೇಳಿದರು.
ಅವರು ಮಂಗಳವಾರ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಛೇರಿ, ಬೆಂಗಳೂರಿನಿAದ ರಾಜ್ಯದ ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯ ಸದಸ್ಯ ಕಾರ್ಯದರ್ಶಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಆನ್ ಲೈನ್ ಸಭೆ ನಡೆಸಿ ಮಾತನಾಡಿದರು.
ಹಳ್ಳಿಯಲ್ಲಿ ಇನ್ನೂ ಹಲವಾರು ಜನರಿಗೆ ಜನನ ನೋಂದಣಿ ಹೇಗೆ ಮಾಡಿಸಬೇಕೆಂಬ ಮಾಹಿತಿ ಇಲ್ಲ. ಮಕ್ಕಳು ಕಳೆದು ಹೋದಾಗ ತಕ್ಷಣ ಮಾಹಿತಿ ಬಂದರೆ ಮಕ್ಕಳ ಕಲ್ಯಾಣ ಇಲಾಖೆಗೆ ಹಾಗೂ ಪೊಲೀಸ್ ಇಲಾಖೆಗಳಿಂದ ಸಹಾಯವನ್ನು ಪಡೆದು ಮಕ್ಕಳನ್ನು ಪತ್ತೆ ಹಚ್ಚಲು ಅನುಕೂಲವಾಗುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಮಾನಸಿಕ ಅಸ್ವಸ್ಥರನ್ನು ಮನೆಯಲ್ಲಿ ಕೂಡಿ ಹಾಕಿರುತ್ತಾರೆ. ಅಂತಹವರನ್ನು ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ಅರೆ ಕಾನೂನು ಸ್ವಯಂ ಸೇವಕರ ಮೂಲಕ ಮಾಹಿತಿ ಪಡೆದು ಅವರನ್ನು ರಕ್ಷಣೆ ಮಾಡಲಾಗುತ್ತದೆ.
ಇನ್ನೂ ಬಹಳಷ್ಟು ಹಳ್ಳಿಯ ಜನರಿಗೆ ಅವರು ಎಲ್ಲಿ ಹೋಗಿ ಮಾಹಿತಿ ಪಡೆಯಬೇಕು ಎನ್ನುವ ಅರಿವು ಇರುವುದಿಲ್ಲ. ಈ ಕೆಲಸವನ್ನು ಅರೆ ಕಾನೂನು ಸ್ವಯಂ ಸೇವಕರು ಮಾಡಬೇಕು. ಸರ್ಕಾರದ ವಿವಿಧ ಯೋಜನೆಗಳ ಜೊತೆಗೆ ಕಾನೂನು ಅರಿವು ನೆರವಿನ ಮಾಹಿತಿ ಜನರಿಗೆ ತಿಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ಹಳ್ಳಿಯಲ್ಲಿ ಇನ್ನೂ ಕೆಲವು ಕಡೆ ಅಲ್ಲಲ್ಲಿ ಬಾಲ್ಯ ವಿವಾಹಗಳು ನಡೆಯುತ್ತವೆ. ಅವುಗಳ ಮಾಹಿತಿಯನ್ನು ನಮ್ಮ ಸ್ವಯಂ ಸೇವಕರಿಂದ ಪಡೆದು ಅವುಗಳನ್ನು ನಿಲ್ಲಿಸಬಹುದು ಎಂದರು.
ಕೌಟುAಬಿಕ ಕಲಹ, ಸಣ್ಣಪುಟ್ಟ ವಿಚಾರದ ಕಲಹಗಳನ್ನು ಕೋರ್ಟ್ ಮೆಟ್ಟಿಲು ಏರದೆ ಇಬ್ಬರು ಪಕ್ಷಗಾರರ ಸಮ್ಮುಖದಲ್ಲಿ ಪರಿಹಾರ ಆಗುವಂತಾಗಬೇಕು. ಬಾಲ ಕಾರ್ಮಿಕರು ಇಟ್ಟಂಗಿ ಭಟ್ಟಿ, ಅಗರಬತ್ತಿ ಕಾರ್ಖಾನೆ, ಹೋಟೆಲ್ ಸೇರಿದಂತೆ ಇತರೆ ಕಡೆಗಳಲ್ಲಿ ಕಂಡುಬರುತ್ತಾರೆ. ಅವರನ್ನು ಪತ್ತೆಹಚ್ಚಿ ಮುಖ್ಯ ವಾಹಿನಿಗೆ ತಂದು ಅವರಿಗೆ ಸಹಾಯ ಮಾಡಬೇಕು. ಇಂತಹ ಸೇವಾ ಮನೋಭಾವವುಳ್ಳ ಕಾರ್ಯಗಳ ಬಗ್ಗೆ ಆಸಕ್ತಿ ಹೊಂದಿದವರು ಸ್ವಯಂ ಇಚ್ಚೆಯಿಂದ ಅರೆ ಕಾನೂನು ಸ್ವಯಂ ಸೇವಕರ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಇದಕ್ಕೆ ಯಾವುದೇ ಸಂಬಳ ಇರುವುದಿಲ್ಲ. ಅಕ್ಟೋಬರ್ 20 ರವರೆಗೆ ರಾಜ್ಯದಲ್ಲಿ ಅರ್ಜಿಗಳನ್ನು ಸಲ್ಲಿಸಲು ಕಾಲಾವಕಾಶವಿದೆ ಎಂದರು.
ನಿವೃತ್ತ ಶಿಕ್ಷಕರು, ಮಾಜಿ ಪಂಚಾಯತ ಸದಸ್ಯರು, ನಿವೃತ್ತ ಸರಕಾರಿ ನೌಕರರು, ತೃತೀಯ ಲಿಂಗಿಗಳು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಕಾನೂನು ವಿದ್ಯಾರ್ಥಿಗಳು, ಮಹಿಳಾ ಸಂಘಗಳ ಸದಸ್ಯರು, ನಿವೃತ್ತ ಸೈನಿಕರು ಸೇರಿದಂತೆ ಇತರರು ಅರೆ ಕಾನೂನು ಸ್ವಯಂ ಸೇವಕರ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಇದಕ್ಕೆ ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 4 ವರೆಗೆ ಕಾಲಾವಕಾಶವಿದ್ದು ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದ ಕಛೇರಿಯಲ್ಲಿ ಅರ್ಜಿಗಳನ್ನು ಪಡೆದು ಸಲ್ಲಿಸಬಹುದಾಗಿದೆ ಎಂದರು.
ಈ ಆನ್‌ಲೈನ್ ಸಭೆಯಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು ಕಛೇರಿಯ ಶ್ರೀಧರ್ ಬಾಲಸುಬ್ರಹ್ಮಣ್ಯಂ ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
Mallikarjun

Recent Posts

ಮಕ್ಕಳೇಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಘಟ್ಟ.

SSLC is an important milestone in a student's life. ಮಕ್ಕಳೇಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಘಟ್ಟ. ಮೂಡಲಗಿ:…

5 hours ago

ಧರ್ಮಸ್ಥಳ ಕ್ಷೇತ್ರದಿಂದ ಸವುಳು ಹಳ್ಳದ ಕೆರೆಗೆ ಕಾಯಕಲ್ಪ – ಮಂಜುನಾಥ ರಾಟಿ

Kayakalp from Dharmasthala constituency to Savulu Halla lake - Manjunatha Rathi ಧರ್ಮಸ್ಥಳ ಕ್ಷೇತ್ರದಿಂದ ಸವುಳು ಹಳ್ಳದ…

22 hours ago

ಡಿಡಿಯು-ಜಿಕೆವೈ ಯೋಜನೆಯಡಿ ಉದ್ಯೋಗ ಮೇಳ

Job fair under DDU-GKY scheme ಡಿಡಿಯು-ಜಿಕೆವೈ ಯೋಜನೆಯಡಿ ಉದ್ಯೋಗ ಮೇಳ ಶಿಕ್ಷಣದ ಜತೆ ತಾಂತ್ರಿಕ ಕೌಶಲ್ಯಕ್ಕೆ ಹೆಚ್ಚು ಆದ್ಯತೆ…

22 hours ago

ಅಪ್ಪು ಅವರ 51ನೇ ಹುಟ್ಟು ಹಬ್ಬಕ್ಕೆ 51 ಅಭಿಮಾನಿಗಳಿಂದ ಸ್ವಯಂ ಪ್ರೇರಿತ ರಕ್ತದಾನ..

51 fans voluntarily donate blood on Appu's 51st birthday.   ಅಪ್ಪು ಅವರ 51ನೇ ಹುಟ್ಟು ಹಬ್ಬಕ್ಕೆ…

22 hours ago