Five inscriptions were found at Mukkundi
ಈ ಗ್ರಾಮವು ಸಿಂಧನೂರು ತಾಲ್ಲೂಕು ಕೇಂದ್ರದಿಂದ ದಕ್ಷಿಣ ದಿಕ್ಕಿಗೆ ೩೨ ಕಿ.ಮೀ ದೂರದಲ್ಲಿದೆ. ಇಲ್ಲಿ ಈ ಹಿಂದೆ ಅನೇಕ ವಿದ್ವಾಂಸ ರೊಂದಿಗೆ ಡಾ.ಚನ್ನಬಸಪ್ಪ ಮಲ್ಕಂದಿನ್ನಿಯವರು ಕೂಡ ಅಧ್ಯಯನ ಮಾಡಿದ್ದಾರೆ. ಇಲ್ಲಿನ ಸೋಮಲಿಂಗೇಶ್ವರ (ಬಾಚೇಶ್ವರ) ದೇವಾಲಯದ ಸ್ತಂಭಕ್ಕೆ ಇರುವ ಕ್ರಿ.ಶ. ೧೨ನೇ ಶತಮಾನದ ಶಾಸನದಲ್ಲಿ ೩೦೦ ಮಹಾ ಜನರ ಉಲ್ಲೇಖವಿದ್ದು, ಮುಕ್ಕುಂದಿ ಗ್ರಾಮವು ಸರ್ವನಮಸ್ಯದಗ್ರಹಾರವಾಗಿತ್ತೆಂದು ತಿಳಿಸುತ್ತದೆ. ಇದೇ ಗ್ರಾಮದ ಬೈರಪ್ಪನ ಗುಡ್ಡದ ದೊಡ್ಡಗುಂಡಿಗೆ (ಸರ್ವೆ ನಂಬರ-೩೬೦) ಇರುವ ಕಣಶಿಲೆಯ ಕ್ರಿ.ಶ. ೧೧-೧೨ನೇ ಶತಮಾನದ ಶಾಸನದಲ್ಲಿ ಬೈರವೇಶ್ವರ ದೇವರಿಗೆ ಭೋಗೋಜನೆಂಬ ವ್ಯಕ್ತಿ ಹೊಲವನ್ನು ದಾನ ನೀಡುವುದರೊಂದಿಗೆ ಮನೆಗಳ ಮೇಲೆ ಹಾಕುತ್ತಿದ್ದ ಬಿರಾಡ (ತೆರಿಗೆ)ವನ್ನು ವಿನಾಯಿತಿ ನೀಡಿದ ಬಗ್ಗೆ ಪ್ರಸ್ತಾಪಿಸುತ್ತದೆ.
ಈ ಶಾಸನದ ಮುಂಬದಿಯಲ್ಲಿ ಬೈರವ ದೇವರ ನಿಂತ ಬಂಗಿಯ ಗೀರು ಚಿತ್ರವನ್ನು ಮೂಡಿಸಲಾಗಿದೆ. ಸೋಮಲಿಂಗೇಶ್ವರ ದೇವಾಲಯದ ಆವರಣದಲ್ಲಿರುವ ಕ್ರಿ.ಶ. ೧೮-೧೯ನೇ ಶತಮಾನದ ಶಾಸನವು ಹಿಂದಿನ ಕಾಲದಲ್ಲಿ ಸರ್ಪದೋಷ ನಿವಾರಣಾರ್ಥ ಅಂದರೆ ಸರ್ಪಭಯ, ಸ್ವಪ್ನದಲ್ಲಿ ಸರ್ಪಕಾಣುವಿಕೆ, ಸುಮ್ಮಸುಮ್ಮನೆ ಮಕ್ಕಳು ಬೆಚ್ಚಿಬೀಳುವುದು ಮತ್ತು ಪಶುಗಳು (ಆಕಳುಗಳು)ಬೆದರಿದಂತೆ ವರ್ತಿಸುವುದು, ಕುಂದು ಅಂದರೆ ಏಕಾಏಕಿ ಪಶುಗಳು ಮಂದಾಗುವುದು ಹೀಗಾದಾಗ ಈ ಸಿದ್ದಿಯ ಯಂತ್ರ ಲಿಪಿಯ ಬಳಿಗೆ ಬಂದು ತಾವು ತೆಗೆದುಕೊಂಡು ಬಂದ ತುಂಬಿದ ಕೊಡದ ನೀರನ್ನು ಈ ಕಲ್ಲಿನ ಮೇಲೆ ಸುರಿಯುತ್ತಿದ್ದರಂತೆ. ಹಾಗೆಯೇ ಪಶುಗಳನ್ನು ಆ ಯಂತ್ರದ ಕಲ್ಲಿನ ಸುತ್ತ ಪ್ರದಕ್ಷಿಣಿ ಹಾಕಿದರೆ ಗುಣಮುಖವಾಗುತ್ತಿದ್ದವೆಂಬ ನಂಬಿಕೆ ಅಲ್ಲಿನ ಜನರಲ್ಲಿರಬೇಕೆನಿಸುತ್ತದೆ.
ಸೋಮಲಿಂಗೇಶ್ವರ ದೇವಾಲಯದ ವೃತ್ತಿನಲ್ಲಿರುವ ಕಂಚಿನ ಗಂಟೆಯ ಶಾಸನವು ಚಿಕ್ಕಪ್ಪಯ್ಯನ ಕ|| ಭಾಸ್ಕರೇಶ್ವರಗೆ (ಬಾಚೇಶ್ವರ) ಕಟ್ಟಿಸಿದ ಗಂಟೆ ಎಂದು ಉಲ್ಲೇಖಿಸುತ್ತದೆ. ಮತ್ತು ಮುರಹರಿ ದೇವಾಲಯದ ಕಂಚಿನ ಗಂಟೆಯು ಕ್ರಿ.ಶ. ೨೦ನೇ ಶತಮಾನದ ಗಂಟೆಯ ಶಾಸನವು ಭೀಮಪ್ಪ ಹನುಮಂತಪ್ಪ ಸಂಗಾಪೂರ ಚಿಕ್ಕಬೇರಿಗೆ ಇವರು ಕಾಣಿಕೆ ಎಂದು ತಿಳಿಸುತ್ತದೆ.
ಈ ಶಾಸನಗಳ ಕ್ಷೇತ್ರ ಕಾರ್ಯದಲ್ಲಿ ಬಸನಗೌಡ ಹುಡಾ, ವಿರುಪಾಕ್ಷಿ ಪೂಜಾರ ಸೋಮಲಾಪುರ, ಭೀಮೇಶ ಶ್ರೀಪುರಂ ಜಂಕ್ಷನ್ ಮತ್ತು ಸ್ಥಳೀಯರು ನೆರವಾಗಿದ್ದರೆಂದು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿಯವರು ಪತ್ರಿಕೆಗೆ ತಿಳಿಸಿದ್ದಾರೆ.
ವಿದ್ಯಾ ಪೋಷಕದಿಂದ ಭವಿಷ್ಯದ ಕಾರ್ಯಯೋಜನೆಗಳಕುರಿತು ಸಭೆ Meeting on future plans from the educational patron ಧಾರವಾಡ :…
ಕೇಂದ್ರ ಸರ್ಕಾರ ಯೋಜನೆಗಳನ್ನು ಪಡೆಯಲು ರೈತರ ಸೆಂಟ್ರಲ್ ಐಡಿ ಕಡ್ಡಾಯ Farmers' Central ID mandatory to avail central…
Verdict in the murder case at the Taluwagera fair: 15 convicts sentenced to 7 years…
The ceremony of the 2025-26 class 10th students of Aaron Mirajkar School began with the…
2022 State Level Book Selection List Published: Objection Invited 2022ನೇ ಸಾಲಿನ ರಾಜ್ಯ ಮಟ್ಟದ ಪುಸ್ತಕ ಆಯ್ಕೆ…
Awareness program as part of World Hearing Day ವಿಶ್ವ ಶ್ರವಣ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಕೊಪ್ಪಳ…