ಕಲ್ಯಾಣಸಿರಿ ವಿಶೇಷ

ಸರಕಾರಿ ಪಡಿತರ ವಿತರಕರ ಸಂಘ ಮತ್ತು ಕಾರ್ಯಲಯ ಹೆಬ್ಬಾಳ ಶ್ರೀ ಉದ್ಘಾಟನೆ

Inauguration of Government Ration Distributors Association and Workshop Hebbala Shri

ಗಂಗಾವತಿ;ದಿ, 9.4.2024 ಮಂಗಳವಾರ ಬೆಳಿಗ್ಗೆ 10. ಗಂಟೆಗೆ ರಾಯಚೂರು ರಸ್ತೆಯಲ್ಲಿ ಇರುವ ಟಿ.ಎ.ಪಿ.ಸಿ.ಎಮ್.ಎಸ್ ಕಾರ್ಯಾಲಯದ ಒಂದನೇ ಮಹಡಿಯಲ್ಲಿ ನೂತನವಾಗಿ ಪ್ರಾರಂಭಗೊಂಡ “ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘ ಮತ್ತು ಕಾರ್ಯಲಯ ಉದ್ಘಾಟನೆಯನ್ನ ಹೆಬ್ಬಾಳದ ಶ್ರೀ ನಾಗಭೂಷಣ್ ಶಿವಾಚಾರ್ಯ ಮಹಾಸ್ವಾಮಿಗಳಿಂದ ನೇರವೆರಿಸಲಾಯಿತು”. ಹಾಗೂ ಸದರಿ ಉದ್ಘಾಟನೆಗೆ ತಾಲೂಕಿನ ಗಣ್ಯಮಾನ್ಯರು ಪಾಲ್ಗೊಂಡು ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರಿಯಾದರು.

ಈ ಸಂಧರ್ಭದಲ್ಲಿ ನೂತನವಾಗಿ ಸಂಘಕ್ಕೆ ಆಯ್ಕೆಗೊಂಡ ಸಂಘದ ಪದಾಧಿಕಾರಿಗಳು ಹಾಗೂ ತಾಲೂಕಿನ ಎಲ್ಲಾ ಪಡಿತರ ವಿತರಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ.ಮಂಜುನಾಥ ಇವರು ಮಾತನಾಡಿ ಸದರಿ “ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘವನ್ನು ನೋಂದಣಿ ಮಾಡಿಸಿರುವುದು ಮತ್ತು ಸಂಘದ ಕಾರ್ಯಾಲಯವನ್ನು ಸ್ಥಾಪಿಸಿರುವುದು ಇದೇ ಮೊದಲನೇಯದ್ದಾಗಿದೆ ಎಂದು ಮಾತನಾಡುತ್ತಾ ಸದರಿ ಸಂಘಕ್ಕೆ ಆಯ್ಕೆ ಎಲ್ಲಾ ಪದಾಧಿಕಾರಿಗಳು ಹಾಗೂ ವಿತರಕರು ಒಗ್ಗಟ್ಟಿನಿಂದ ನಡೆಯಲು ಕೋರಿದರು. ಹಾಗೂ ಸದರಿ ಸಾರ್ವಜನಿಕ ವಲಯದಲ್ಲಿ ಪಡಿತರ ವಿತರಣೆಯನ್ನು ಸರಿಯಾದ ರೀತಿಯಲ್ಲಿ ವಿತರಿಸಿ ಸಂಘಕ್ಕೆ ಮತ್ತು ಸರ್ಕಾರಕ್ಕೆ ಒಳ್ಳೆಯ ಹೆಸರನ್ನು ತರಲು ಶ್ರಮಿಸಬೇಕೆಂದು ತಿಳಿಸಿದರು. ನಂತರ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಟಿ.ಎಮ್.ಚನ್ನಬಸವಶಾಸ್ತ್ರಿಯವರು ಟಿ.ಎ.ಪಿ.ಸಿ.ಎಂ.ಎಸ್ (ರಿ) ಹಾಗೂ ವಿ.ಎಸ್.ಎಸ್.ಎನ್. ಸಂಘಗಳು (ರಿ) ಒಗ್ಗಟ್ಟಾಗಿ ತಾಲೂಕಿನ ಎಲ್ಲಾ ವಿತರಕರು ಸೇರಿಕೊಂಡು ಸರಿಯಾದ ಕ್ರಮದಲ್ಲಿ ಕೆಲಸವನ್ನು ಮಾಡುವ ಮೂಲಕ ಸಂಘಕ್ಕೆ ಒಳ್ಳೆಯ ಹೆಸರನ್ನು ತರುವಂತೆ ಹೇಳಿ ಶುಭಕೋರಿದರು. ಇದೇ ಸಂದರ್ಭದಲ್ಲಿ ಸಂಘದ ನೂತನ ಪದಾಧಿಕಾರಿಗಳಾದ ಉಪಾಧ್ಯಕ್ಷರಾದ ಶ್ರೀ ಎಮ್.ಪಿ.ಪಂಪನಗೌಡ, ಕಾರ್ಯದರ್ಶಿಯಾದ ಶ್ರೀ ಎಮ್.ಡಿ.ಫಯಾಜ್, ಸಹಕಾರ್ಯದರ್ಶಿಯಾದ ಶ್ರೀ ಎಚ್.ವೀರಭದ್ರಪ್ಪ, ಖಜಾಂಚಿಯಾದ ಶ್ರೀ ಬಿ.ರಾಜಶೇಖರ, ನಿರ್ದೇಶಕರಾದ ಶ್ರೀ ವಾಜೆಂದ್ರರಾವ್ ದೇಶಪಾಂಡೆ, ಶ್ರೀ ಎಮ್.ಲಿಂಗಪ್ಪಮಠದ, ಶ್ರೀ ಬಸವರಾಜ, ಶ್ರೀಮತಿ ದೊಡ್ಡಬಸಮ್ಮ, ಶ್ರೀಮತಿ ಜಯಲಕ್ಷ್ಮೀ, ಶ್ರೀಮತಿ ಸರಸ್ವತಿ, ಶ್ರೀಮತಿ ಶ್ವೇತಾ, ಶ್ರೀಮತಿ ಶಿವಬಸಮ್ಮ, ಶ್ರೀ ಶಂಕರ, ಹಾಗೂ ಶ್ರೀ ಚನ್ನಯ್ಯಸ್ವಾಮಿ, ನಾಗರಾಜ ನಾಯಕ, ಸಲೀಂ ಖಾನ್, ವಸಂತಗೌಡ, ಅನ್ವರ ವೆಂಕಟಗಿರಿ ಇನ್ನೂ ಅನೇಕ ಮುಖಂಡರು ಉಪತಿಸ್ಥರಿದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

10 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

10 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

11 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

11 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

11 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

11 hours ago