Material display for children at Anganwadi
ಗಂಗಾವತಿ: 18 ನಗರದ ಹಿರೇಜಂತಕಲ್ ಕಂಬಳಿ ಮಠ ಹಿಂದುಗಡೆ ಇರುವ ಅಂಗನವಾಡಿ ಕೇಂದ್ರದಲ್ಲಿ ಇಂದು ಚಿಕ್ಕಪುಟ್ಟ ಮಕ್ಕಳಿಗಾಗಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಪ್ರವೀಣ ಹೇರೂರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರೈಮ್ ಇಯರ್ ಮತ್ತು ಹೈಸ್ಕೂಲ್ ಗಳಲ್ಲಿ ನಡೆಯುವ ಈ ವಸ್ತು ಪ್ರದರ್ಶನ ವನ್ನು ನಮ್ಮ ಅಂಗನವಾಡಿ ಮಕ್ಕಳು ಸಹ ವಸ್ತು ಪ್ರದರ್ಶನವನ್ನು ಇಷ್ಟೊಂದು ಅಚ್ಚುಕಟ್ಟಾಗಿ, ಅದ್ಭುತವಾಗಿ ಮಾಡಿದ್ದಾರೆ ಎಂದರೆ ನನಗೆ ತುಂಬಾ ಖುಷಿಯಾಗುತ್ತದೆ. ಮತ್ತು ಪ್ರೈವೇಟ್ ಶಾಲೆಯ ಎಲ್.ಕೆ.ಜಿ.ಯು.ಕೆ.ಜಿ.ಮಕ್ಕಳಿಗಿಂತ ನಮ್ಮ ಅಂಗನವಾಡಿ ಮಕ್ಕಳು ಸಹ ಹಿಂದೆ ಬಿದ್ದಿಲ್ಲ, ಅವರಿಗಿಂತ ನಾವು ಕಡಿಮೆ ಇಲ್ಲ, ಅವರಿಗೆ ಸರಿಸಮಾನ ರೀತಿಯಲ್ಲಿ ನಮ್ಮ ಪುಟ್ಟ ಮಕ್ಕಳು ತಮ್ಮ ತಮ್ಮ ಪಾಲಕರೊಂದಿಗೆ ಸೇರಿಕೊಂಡು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಅತ್ಯಂತ ಜವಾಬ್ದಾರಿತನದಿಂದ ಮತ್ತು ಉತ್ಸಾಹದಿಂದ ಮಕ್ಕಳಿಗೆ ಹೊಸದಾಗಿ, ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಸಿರುವುದು ತುಂಬಾ ಸಂತಸದ ಕ್ಷಣ ಎಂದು ಅಧಿಕಾರಿಗಳು ಬಣ್ಣಿಸಿದರು. ಹಾಗೂ ಮುಂದಿನ ಪೀಳಿಗೆಗೆ ಸಹ ಅಂಗನವಾಡಿ ಉಳಿಸಿ ಮತ್ತು ಬೆಳೆಸಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಶರಣಮ್ಮ ನಾಲಿವಾಡ ಹಿರಿಯ
ಮೇಲ್ವಿಚಾರಕರು, ವಿದ್ಯವತಿ ಹಿರಿಯ,ಮೇಲ್ವಿಚಾರಕರು,ಅಂಗನವಾಡಿ ಶಿಕ್ಷಕರಾದ ಸುನೀತಾ ಅರುಣಕಮಾರ,ನೀಲಮ್ಮ, ರೇಣುಕಾ,ಹಾಗೂ ಅಂಗನವಾಡಿ ಸಹಾಯಕರು,ಪಾಲಕರು ಸೇರಿದಂತೆ ಇತರರು ಇದ್ದರು
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…