Keremaruteshwar fair held with devotion
ಸಂತಸದಿಂದ ನೂತನ ಉಚ್ಛಾಯ ಎಳೆದ ಮಹಿಳೆಯರು
ಕನಕಗಿರಿ ತಾಲೂಕಿನ ಚಿಕ್ಕಡಂಕನಕಲ್ ಗ್ರಾಮದ ಹೊರ ಹೊಲದಲ್ಲಿರುವ ಉದ್ಭವ ಮೂರ್ತಿ ಶ್ರೀ ಕೆರೆಮಾರುತೇಶ್ವರ ದೇವರ ಜಾತ್ರೆಯು ಶನಿವಾರದಂದು ದೇವರಿಗೆ ಪೂಜೆ ವಿಧಿ ವಿಧಾನಗಳ ಮಾಡುವ ಮೂಲಕ ವಿಜೃಂಭಣೆಯಿಂದ ಜಾತ್ರೆ ನೆಡೆಯಿತು.
ಪ್ರತಿ ವರ್ಷದಂತೆ ಈ ಬಾರಿಯು ಕಾರ್ತಿಕೋತ್ಸವದ ಅಂಗವಾಗಿ ಗ್ರಾಮದ ಕೆರೆಮಾರುತೇಶ್ವರ ದೇವರ ಜಾತ್ರೆಯು ವಿಶೇಷವಾಗಿ ಧಾರ್ಮಿಕ ಭಕ್ತಿ ಭಾವದಿಂದ ಶನಿವಾರದಂದು ಬೆಳಿಗ್ಗೆ ವಿಗ್ರಹ ಮೂರ್ತಿಗೆ ವಿಶೇಷ ರುದ್ರಾಭೀಷೇಕ ಪೂಜೆ ಹಾಗೂ ಇಷ್ಟಾರ್ಥ ಸಿದ್ಧಿಗೆ ಜನರು ಕುಟುಂಬಸಮೇತ ಬಂದು ದೀರ್ಘ ದಂಡ ನಮಸ್ಕಾರ ಹಾಕಿ ದೇವರ ದರ್ಶನ ಪಡೆದು ಪುನೀತ ಭಾವ ತಳೆದರು.
ನೂತನ ಉಚ್ಛಾಯ ಮೆರವಣಿಗೆ: ಪ್ರತಿ ವರ್ಷದಂತೆ ಕಾರ್ತಿಕೋತ್ಸವ ಅಂಗವಾಗಿ ನೆಡೆಯುವ ಶ್ರೀ ಕೆರೆಮಾರುತೇಶ್ವರ ದೇವರಿಗೆ ಭಕ್ತಾದಿಗಳಿಂದ ತಯಾರಿಸಿದ ನೂತನ ಉಚ್ಛಾಯ ಉತ್ಸವದ ಮೆರವಣಿಗೆ ಶನಿವಾರದಂದು ಸಂಜೆ ಅದ್ದೂರಿಯಾಗಿ ಡೊಳ್ಳು ಬಾರಿಸುವುದರ ಜೊತೆಗೆ ಮೆರವಣಿಗೆಯು ದೇವಾಲಯದಿಂದ ಎದುರು ಬಸವಣ್ಣ ಪಾದುಗಟ್ಟೆಯವೆರೆಗೆ ಮೆರವಣಿಗೆ ನೆಡೆಯಿತು. ವಿಶೇಷವಾಗಿ ಪ್ರಪ್ರಥಮ ಬಾರಿಗೆ ಗ್ರಾಮದ ಮಹಿಳೆಯರು ಪುರುಷರೊಂದಿಗೆ ಜೊತೆಗೂಡಿ ತಾವೇ ಸ್ವತಃ ದೇವರ ಉಚ್ಛಾಯ ಎಳೆಯುವ ಮೂಲಕ ಗಮನ ಸೆಳೆದರು.
ಗ್ರಾಮದ ಕೆರೆ ಮಾರುತೇಶ್ವರ ಸೇವಾ ಟ್ರಸ್ಟ್ ವತಿಯಿಂದ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಸುಗಮ ದರ್ಶನದ ವ್ಯವಸ್ಥೆ ಹಾಗೂ ಮಹಾ ಪ್ರಸಾದ ವ್ಯವಸ್ಥೆಯನ್ನು ಸಹ ಮಾಡಿ ದೇವರ ಕೃಪೆಗೆ ಪಾತ್ರರಾದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…