Central drought study team arrived in Koppal district today; Crop Damage Check
ಕೊಪ್ಪಳ ಅಕ್ಟೋಬರ್ 05 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ಕೈಗೊಳ್ಳಲು ಕೇಂದ್ರ ಬರ ಅಧ್ಯಯನ (ಐಎಂಟಿಸಿ) ತಂಡ ಅಕ್ಟೋಬರ್ 06ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಲಿದೆ.
ಕೇಂದ್ರ ಕುಡಿಯುವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರರಾದ ಡಿ. ರಾಜಶೇಖರ್ ಐ.ಎ.ಎಸ್ ನೇತೃತ್ವ, ಪಶುಸಂಗೋಪನೆ ಇಲಾಖೆಯ ನಿರ್ದೇಶಕರಾದ ಆರ್ ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತರಾದ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಕರೀಗೌಡ ಐ.ಎ.ಎಸ್ ಅವರನ್ನು ಒಳಗೊಂಡ ತಂಡವು ಅ.06ರಂದು ಜಿಲ್ಲೆಗೆ ಭೇಟಿ ನೀಡಲಿದೆ.
ಅಂದು ಗದಗ ಜಿಲ್ಲೆಯ ಗಜೇಂದ್ರಗಡದಿಂದ ಮಧ್ಯಾಹ್ನ 3 ಗಂಟೆಗೆ ನಿರ್ಗಮಿಸಿ 3.20ಕ್ಕೆ ಬಂಡಿ ಕ್ರಾಸ್ ಗೆ ಆಗಮಿಸಿ 3.20ರಿಂದ 3.30ರವರೆಗೆ ಯಲಬುರ್ಗಾ ತಾಲೂಕಿನ ಯಲಬುರ್ಗಾ ಹೋಬಳಿ ವ್ಯಾಪ್ತಿಯ ರೈತರಾದ ಶಶಿಕಲಾ ಶರಣಪ್ಪ ರೊಟ್ಟಿ ಹಾಗೂ ಚಂದ್ರಪ್ಪ ಬಡಿಗೇರ ಅವರ ಹೊಲಗಳಿಗೆ ಭೇಟಿ ನೀಡಿ ಕೃಷಿ ಬೆಳೆಗಳ ಅಧ್ಯಯನ ಮಾಡಲಿದ್ದಾರೆ. ಬಳಿಕ 3.35 ರಿಂದ 3.50 ರವೆರೆಗೆ ಕುಷ್ಟಗಿ ತಾಲೂಕಿನ ಹನುಮಸಾಗರ ಹೋಬಳಿ ವ್ಯಾಪ್ತಿಯ
ಡೊಣ್ಣೆಗುಡ್ಡಾ ಗ್ರಾಮದ ಕಳಕಪ್ಪ ಬಸಪ್ಪ ಹಡಪದ ಮತ್ತು ಮಹಾದೇವಪ್ಪ ಪಕೀರಪ್ಪ ಹಿರೇಮನಿ, ಹೊನ್ನಪ್ಪ ದುರ್ಗಪ್ಪ ದೊಣ್ಣೆಗುಡ್ಡಾ ಎಂಬ ರೈತರ ಜಮೀನುಗಳಿಗೆ ಭೇಟಿ ಪರಿಶೀಲಿಸುವರು.
ಬಳಿಕ ಕುಷ್ಟಗಿ ತಾಲೂಕಿನ ಯಲಬುಣಚಿ ಗ್ರಾಮಕ್ಕೆ ತೆರಳಿ ಹನುಮನಾಳ ಹೋಬಳಿಯ ಪವಾಡೆಪ್ಪ ಈಳಗೇರ ಅವರ ಜಮೀನಿನಲ್ಲಿ 3.55 ರಿಂದ 04 ಗಂಟೆವರೆಗೆ ಬೆಳೆ ಹಾನಿ ವೀಕ್ಷಣೆ ನಡೆಸುವರು. ಬಳಿಕ ಸಂಜೆ 4.05 ರಿಂದ 4.15 ರವರೆಗೆ ಬೆನಕನಾಳ ಗ್ರಾಮದ ಮಲ್ಲಯ್ಯ ಮಾಂತಗೇರಿ ಅವರ ಹೊಲದಲ್ಲಿ, ಸಂಜೆ 4.20 ರಿಂದ 4.30ರವರೆಗೆ ಮದ್ನಾಳ ಗ್ರಾಮದಲ್ಲಿ ಬೆಳೆ ಹಾನಿ ವೀಕ್ಷಣೆ ನಡೆಸುವರು.
ಬಳಿಕ 4.40 ರಿಂದ 4.55ರವರೆಗೆ ಬಾದಿಮನಾಳ ಗ್ರಾಮದ ಕೆರೆಯ ಹತ್ತಿರ ಬೆಳೆ ಹಾನಿ ಮತ್ತು ನರೇಗಾ ಕಾಮಗಾರಿಯ ಬಗ್ಗೆ ಪರಿಶೀಲಿಸುವರು.
ಬಳಿಕ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮಕ್ಕೆ ತೆರಳಿ
5.10 ರಿಂದ 5.30 ರವರೆಗೆ ಚಳಗೇರಾ ಗ್ರಾಮದ ರೈತರಾದ ಬಸಮ್ಮ ವೀರಭದ್ರಪ್ಪ ಗಾಣಿಗೇರ ಹಾಗೂ ಓಂಪ್ರಕಾಶ ದೊಡ್ಡಯ್ಯ ಮರದ ಅವರ ಕೃಷಿ ಜಮೀನಿಗೆ ಭೇಟಿ ಮತ್ತು ಅದೇ ಗ್ರಾಮದ ರೈತರಾದ ಶರಣಪ್ಪ ಸೋಮಪ್ಪ ಬಾರಕೇರ ಅವರ ತೋಟಗಾರಿಕೆ ಬೆಳೆಯ ವೀಕ್ಷಣೆ ಹಾಗೂ ಆರ್.ಕೆ.ವಿ.ವೈ & ವರ್ಮಿ ಕಾಂಪೋಸ್ಟ್ ಘಟಕಕ್ಕೆ ಭೇಟಿ ನೀಡುವರು. ಬಳಿಕ 5.45ಕ್ಕೆ ಕುಷ್ಟಗಿ ಮಾರ್ಗವಾಗಿ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮಕ್ಕೆ ತೆರಳಿ ಸಂಜೆ 5.50 ರಿಂದ 6.05 ರವರೆಗೆ ಕೃಷಿ ಬೆಳೆಗಳು ಮತ್ತು ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುವರು. ಅಲ್ಲಿಂದ ನಿರ್ಗಮಿಸಿ ಕೊಪ್ಪಳ ತಾಲೂಕಿನ ಹೊಸೂರ ಕ್ರಾಸ್ ಬಳಿಗೆ ಬಂದು
ಸಂಜೆ 6.15 ರಿಂದ 6.25 ರವರೆಗೆ ಇರಕಲಗಡ ಹೋಬಳಿಯ ಮೆತಗಲ್ ಕ್ರಾಸ್ ಹತ್ತಿರ ಹನುಮಪ್ಪ ಶಂಕ್ರಪ್ಪ ಅವರ ಹೊಲದಲ್ಲಿ ಅದೇ ರೀತಿ ಬಿ.ಹೊಸಳ್ಳಿ ಗ್ರಾಮದ ಕೃಷ್ಣಪ್ಪ
ರಾಥೋಡ ಅವರ ಕೃಷಿ ಬೆಳೆ ವೀಕ್ಷಣೆ ಮಾಡುವರು. ಅಲ್ಲಿಂದ 6.45ಕ್ಕೆ ನಿರ್ಗಮಿಸಿ ಹಿಟ್ನಾಳ ಟೋಲ್‌ಗೇಟ್ ಮಾರ್ಗವಾಗಿ ವಿಜಯನಗರ ಜಿಲ್ಲೆಯ ಕಡೆಗೆ ಬರ ಅಧ್ಯಯನ ತಂಡವು ತೆರಳಲಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…