The folk singing and dancing were spectacular.
ವರದಿ – ಸಂಗಮೇಶ ಎನ್ ಜವಾದಿ.
ಬೀದರ್: ಬೀದರ್ ನಗರವನ್ನು ಮಾದರಿಯಾಗುವ ರೀತಿಯಲ್ಲಿ ಅಭಿವೃದ್ದಿಪಡಿಸಲಾಗುತ್ತದೆ ಎಂದು
ನಗರಸಭೆ ಅದ್ಯಕ್ಷ ಎಂ.ಡಿ. ಗೋಸೊದ್ದಿನ್ ನುಡಿದರು.
ನಗರದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕ, ಕೇಂದ್ರದ ಸಂಸ್ಕೃತಿ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶುಕ್ಲತೀರ್ಥ ಮಡಿವಾಳೇಶ್ವರ ಸಾಮಾಜಿಕ, ಸಾಂಸ್ಕೃತಿಕ ಟ್ರಸ್ಟ್ ಮತ್ತು ಕರುಣಾಮಯ ಯುವಕ ಸಂಘದ ಸಹಯೋಗದಲ್ಲಿ ನಡೆದ ಜಾನಪದ ಸಾಂಸ್ಕೃತಿಕ ಉತ್ಸವ ಮತ್ತು ಜಾನಪದ ಜಾತ್ರೆ ಕಾರ್ಯಕ್ರಮವನ್ನು
ಉದ್ಘಾಟಿಸಿದ ಮಾತನಾಡಿದ ಅವರು ಈಗಷ್ಟೇ ಆಡಳಿತ ಮಂಡಳಿ ರಚನೆಯಾಗಿದೆ. ಮೂಲ ಸೌಲಭ್ಯ ಒದಗಿಸುವ ಮತ್ತು ಅಭಿವೃದ್ಧಿಪರ ಕಾರ್ಯಗಳು ಒಟ್ಟಾಗಿಯೇ ನಡೆಯಲಿವೆ ಎಂದರು.
ಸಾನಿಧ್ಯ ವಹಿಸಿದ ಪೂಜ್ಯರಾದ ತಮಲುರು ಶ್ರೀಗಳು ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತ ಮಂಡಳಿ ಸದಸ್ಯ ಡಾ. ಜಗನ್ನಾಥ ಹೆಬ್ಬಾಳೆ ಅದ್ಯಕ್ಷತೆ ವಹಿಸಿದ್ದರು. ಚಾಂಬೋಳದ ರುದ್ರಮುನಿ ಶಿವಾಚಾರ್ಯರು, ಹಿರಿಯ ಪತ್ರಕರ್ತ ಮಾರುತಿ ಸೋನಾರ್, ನಗರಸಭೆ ಸದಸ್ಯ ಪ್ರಶಾಂತ ದೊಡ್ಡಿ, ಬಿಜೆಪಿ ನಾಯಕ ಈಶ್ವರಸಿಂಗ್ ಠಾಕೂರ್, ಕಾಂಗ್ರೆಸ್ ನಾಯಕ ಧನರಾಜ ಹಂಗರಗಿ, ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪುಂಡಲೀಕಪ್ಪ ಪಾಟೀಲ್ ಗುಮ್ಮಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ವಿವಿಧ ಜಾನಪದ ಕಲಾವಿದ ರಿಂದ ಕಲಾ ನೃತ್ಯಗಳು ಪ್ರದರ್ಶನಗೊಂಡವು ಅವುಗಳಲ್ಲಿ ಪ್ರಮುಖವಾದವು
ಕಾರ್ಯಕ್ರಮದಲ್ಲಿ
ಪ್ರಮುಖರಾದ ಸಂತೋಷ ಕಾಮಣ್ಣನವರ್, ಸಂಗಮೇಶ ಬಿಕ್ಲೆ, ಶಿವರಾಜ ಬೆನಕನಳ್ಳಿಕರ್, ಸಾಗರ್ ಗೌರ, ಮಲ್ಲಿಕಾರ್ಜುನ ಮೇತ್ರೆ, ಜಗದೀಶ ಬಜಾರೆ, ಪವನ್ ಬಿರಾದಾರ್, ಅನೀಲ ರಾಜಗೀರಾ, ನಾಗನಾಥ ಮಾನೆ, ಭಕ್ತರಾಜ ಪಾಟೀಲ್, ಮಡಿವಾಳಯ್ಯ ಸ್ವಾಮಿ, ಗುಣವಂತ ಪಾಟೀಲ್, ಸಾಯಿನಾಥ ಮಡಿವಾಳ, ಶಿವಕುಮಾರ ದಾನಾ, ವೀರೇಶ ಸ್ವಾಮಿ, ರವೀಂದ್ರ‍್ರ ರಡ್ಡಿ, ಶರಣಪ್ಪ ಬಿರಾದಾರ್, ಪಂಢರಿನಾಥ ಹಳೆಂಬರ್, ರಾಜಕುಮಾರ ಡೊಂಗರಗಿ ಮತ್ತಿತರ ಗಣ್ಯರು, ಬಡಾವಣೆಯ ಹಿರಿಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ಮುನ್ನ ನಾವದಗೇರಿ ಹನುಮಾನ ಮಂದಿರದಿಂದ ಶುಕ್ಲತೀರ್ಥ ಮಂದಿರದವರೆಗೆ ಭವ್ಯ ಮೆರವಣಿಗೆ ನಡೆಯಿತು. ಗಾಂಧಿಗಂಜ್ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಗಾದಗಿ ಉದ್ಘಾಟಿಸಿದರು. ಮುಖಂಡರಾದ ಫರ್ನಾಂಡಿಸ್ ಹಿಪ್ಪಳಗಾಂವ್, ವಿಜಯಕುಮಾರ ಸೊನಾರೆ, ಸುನೀಲ ಬಚ್ಚನ್, ಫಿಲೀಸ್ ದೊಡ್ಡಮನಿ, ಸಂಜಯರಾಜ್ ಚಂದನ್, ಅಮರ್ ಭಂಗೆ, ಅಶೋಕ ಹೆಬ್ಬಾಳೆ ಮತ್ತು ಇತರ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…