C.C.B. Raid: Expiry drugs detected, drugs seized by Drug Control Department.
ಬೆಂಗಳೂರು:ಅಧಿಕೃತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬೆಂಗಳೂರು ಸಿ.ಸಿ.ಬಿ.ಬ್ರ್ಯಾಂಚ್ ನ ಪೋಲೀಸ್ ಅಧಿಕಾರಿಗಳು, ಹೋಲ್ ಸೇಲ್ ಔಷಧ ಮಾರಾಟ ಪರವಾನಿಗೆ ಪಡೆದ ಮಳಿಗೆಯೊಂದರ ಮೇಲೆ ದಾಳಿ ಮಾಡಿ ಎಕ್ಸಪೈರಿ ಮತ್ತು ಎಕ್ಸಪೈರಿ ದಿನಾಂಕದ ಮೇಲೆ ಅಂಟಿಸುವ ಲೇಬಲ್ ಗಳನ್ನು ಪತ್ತೆ ಹಚ್ಚಿದ್ದಾರೆ.ತಂದೆ ಮತ್ತು ಮಗನನ್ನು ಅರೆಸ್ಟ ಮಾಡಿರುವ ಪೋಲಿಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇತ್ತ ಈ ದಾಳಿಯ ಬಗ್ಗೆ ಸಿ.ಸಿ.ಬಿ.ಪೋಲಿಸರಿಂದ ಮಾಹಿತಿ ಪಡೆದ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳಾದ ಎ.ಡಿ.ಸಿ.ಚಂದ್ರಕಲಾ ಶಿಲ್ಪಾ ಮತ್ತು ಎಸ್.ಐ.ಬಿ.ತಂಡದ ಡ್ರಗ್ಸ ಇನ್ಸಪೆಕ್ಷರ್ ಗಳಾದ ಸವಿತಾ ಮತ್ತು ಪ್ರಸನ್ನ ಕುಮಾರ್ ಔಷಧಗಳನ್ನು ತಮ್ಮ ವಶಕ್ಕೆ ಪಡೆದು,ನ್ಯಾಯಾಲಯದ ಪರವಾನಿಗೆ ಪಡೆದು ಸದ್ರಿ ಔಷಧಗಳನ್ನು ಇಲಾಖೆಯ ವಶದಲ್ಲಿರಿಸಿಕೊಂಡಿದ್ದಾರೆ.
ರಾಜ್ಯ ಔಷಧ ನಿಯಂತ್ರಕರಾದ ಬಿ.ಟಿ.ಖಾನಾಪುರೆ ಔಷಧ ಮತ್ತು ಕಾಂತಿ ವರ್ಧಕ ಕಾಯ್ದೆ ಹಾಗೂ ನಿಯಮಗಳ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.
ಪೋಲೀಸರಿಂದ ಮಾಹಿತಿ ಸಿಕ್ಕ ಕೂಡಲೇ ಧಾವಿಸಿ,
ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು
ಸೂಕ್ತ ಕ್ರಮ ಕೈಗೊಂಡಿದ್ದಾರೆ.ಪೋಲೀಸರಿಂದ ದೂರು ಬಂದ ಕೂಡಲೇ ಕಾರ್ಯ ಪ್ರವೃತ್ತರಾದಂತೆ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರಿಂದ ದೂರು ಬಂದಾಗಲೂ ಇದೇ ಸ್ಪೀಡ್ ನಲ್ಲಿ ಧಾವಿಸಿ,ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ತುಂಬಾ ಇದೆ.
ಅವರಿವರು ಪತ್ತೆ ಹಚ್ಚಿದ ಪ್ರಕರಣಗಳ ಹಿಂದೆ ಹೋಗುವುದಕ್ಕಿಂತ, ಸ್ವಯಂ ಪ್ರೇರಿತರಾಗಿ ಇಂತಹ ಪ್ರಕರಣಗಳನ್ನು ದಾಖಲಿಸುವ ಪ್ರವೃತ್ತಿ ಔಷಧ ನಿಯಂತ್ರಣ ಇಲಾಖೆಯಲ್ಲಿ ಹೆಚ್ಚಾಗಲಿ ಎಂದಷ್ಟೇ ಇಲ್ಲಿ ಬಯಸಬೇಕಾಗುತ್ತದೆ.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…