There are no minds that cannot be defeated by music - Hemanthakumar Doddamani.
ಕೊಪ್ಪಳ : ಸಂಗೀತಕ್ಷೇತ್ರ ಪೂಜ್ಯನೀಯವಾದದ್ದು. ಉತ್ತಮ ಸಂಗೀತ ಕಲಾವಿದರಾಗ ಬಯಸುವವರು ಮೊದಲು ಉತ್ತಮ ಕೇಳುಗರಾಗಬೇಕು. ಅಂದಾಗ ಮಾತ್ರ ಒಳ್ಳೆಯ ಹಾಡುಗಾರರಾಗಲು ಸಾಧ್ಯವಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಹಲವಾರು ಅದ್ಭುತ ಸಂಗೀತ ಕಲಾವಿದರಿದ್ದಾರೆ. ಅವರೆಲ್ಲರಿಗೆ ಪ್ರೋತ್ಸಾಹ ಸಿಗಬೇಕಾಗಿದೆ. ಸಂಗೀತಕ್ಕೆ ಸೋಲದ ಮನಸುಗಳೇ ಇಲ್ಲ ಎಂದು ಜೂನಿಯರ್ ಎಸ್ .ಪಿ. ಬಾಲಸುಬ್ರಹ್ಮಣ್ಯಂ ಎಂದೇ ಖ್ಯಾತಿ ಪಡೆದ ಹೊಸಪೇಟೆಯ ತಹಶೀಲ್ದಾರರಾದ ಹೇಮಂತಕುಮಾರ ಎನ್. ದೊಡ್ಡಮನಿ ಹೇಳಿದರು.
ಅವರು ಕೊಪ್ಪಳದ ಸಾಹಿತ್ಯ ಭವನದಲ್ಲಿ ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ವಾದ್ಯಗೋಷ್ಠಿ ಕಲಾವಿದರ ಮಹಾಸಂಘದ ಕೊಪ್ಪಳ ಜಿಲ್ಲಾ ಘಟಕದ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಗಜೇಂದ್ರಗಡ ತಹಶೀಲ್ದಾರರಾದ ರಜನಿಕಾಂತ ಕೆಂಗೇರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ನನಗೆ ಮೈಕ್ ಹಿಡಿದು ಹಾಡಲು ಕಲಿಸಿದವರೇ ಹೇಮಂತಕುಮಾರ ಅವರು. ಅವರು ನನ್ನಂಥ ಬಹಳಷ್ಟು ಕಲಾವಿದರನ್ನು ಬಯಲಿಗೆ ತಂದಿದ್ದಾರೆ ಎಂದರು. ಹಿರಿಯ ಪತ್ರಕರ್ತರಾದ ಎಂ. ಸಾಧಿಕ್ ಅಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಕೊಪ್ಪಳದಲ್ಲಿ ಕಲಾವಿದ ಭಾಷಾ ಹಿರೇಮನಿ ಅವರ ನೇತೃತ್ವದಲ್ಲಿ ಸಂಘವು ಸಂಗೀತದ ಒಳ್ಳೆಯ ರಸದೌತಣ ಕೊಡುತ್ತಾ ಬಂದಿದೆ. ನಮ್ಮ ನಾಡಿನ ಕಲೆ, ಪರಂಪರೆ, ಉಳಿಸಿ ಬೆಳೆಸಿ ನಮ್ಮೆಲ್ಲರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಸಂಘದ ಮೂಲಕ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುವ ಮೂಲಕ ಹೊಸ ಕಲಾವಿದರಿಗೆ ಗರಡಿ ಮನೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಹಿರಿಯ ಪತ್ರಕರ್ತರರಾದ ಜಿ.ಎಸ್. ಗೋನಾಳ ಅವರು ಮಾತನಾಡುತ್ತಾ, ಕಲೆ, ಸಂಗೀತ, ನೃತ್ಯಕ್ಕೆ ಭವ್ಯ ಸಂಗೀತದ ಮೂಲಕ ಮನುಷ್ಯನ ಹಲವಾರು ಮಾನಸಿಕ ಕಾಯಿಲೆಗಳು ವಾಸಿಯಾಗುತ್ತವೆ ಎಂದರು. ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಮಾತನಾಡುತ್ತಾ, ಕಲಾವಿದರಾದ ಭಾಷಾ ಹಿರೇಮನಿಯವರು ಮಾಜಿ ಮುಖ್ಯಮಂತ್ರಿ ಎಸ್. ಆರ್ .ಬಂಗಾರಪ್ಪನವರಿAದ ಮೆಚ್ಚುಗೆ ಪಡೆದ ಕಲಾವಿದರಾಗಿದ್ದಾರೆ. ಅವರ ನೇತೃತ್ವದಲ್ಲಿ ಉತ್ತಮ ಕಾರ್ಯಕ್ರಮಗಳಾಗುತ್ತಿವೆ. ಮುಂದಿನ ದಿನಮಾನಗಳಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಪ್ರಕಾರದ ಕಲಾವಿದರ ಗ್ರಂಥವನ್ನು ಹೊರತರಲಾಗುವುದು ಎಂದು ಹೇಳಿ, ಕರೋಕೆ ಜೊತೆಗೆ ಒಂದು ಹಾಡನ್ನು ಹಾಡುವುದರ ಮೂಲಕ ಸಭಿಕರನ್ನು ರಂಜಿಸಿದರು.
ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ವಾದ್ಯಗೋಷ್ಠಿ ಕಲಾವಿದರ ಸಂಘದ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರಾದ ಭಾಷಾ ಹಿರೇಮನಿ ಅವರು ಮಾತನಾಡುತ್ತಾ, ಕೊಪ್ಪಳ ಜಿಲ್ಲೆಯಲ್ಲಿ ಇರುವ ಎಲ್ಲಾ ಕಲಾವಿದರಿಗೆ ವೇದಿಕೆ ಕಲ್ಪಿಸಿ ಕೊಡುವುದೇ ನಮ್ಮ ಸಂಘದ ಮುಖ್ಯವಾದ ಉದ್ದೇಶವಾಗಿದೆ. ಮುಂದಿನ ದಿನಮಾನಗಳಲ್ಲಿ ಕೂಡ ಬೇರೆ ತಾಲೂಕುಗಳಲ್ಲಿ ಸಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.
ವೇದಿಕೆಯ ಮೇಲೆ ಗಿರೀಶ ಜಿ .ಹಿರೇಮಠ, ದಾವೂದ್ ಹುನುಗುಂದ, ಪ್ರದೀಪ್ ಹೆಚ್, ಜಗದೀಶ ಚಲವಾದಿ, ಕೃಷ್ಣಾ ಬಿ. ವಿದ್ಯಾವತಿ, ಎಂ. ಡಿ .ರಫಿ, ಮಂಜುನಾಥ ನೀರಲಗಿ, ಕಳಕಪ್ಪ ತಳವಾರ, ಮಲ್ಲಿಕಾರ್ಜುನ ಶಾಸ್ತಿçಮಠ, ಶಿವಪ್ರಸಾದ ಮಠಪತಿ, ಮಂಜುನಾಥ ಚಿಲವಾಡಗಿ, ಅಲ್ಲಾಭಕ್ಷಿ ಎಂ. ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು. ಶಿವಪ್ಪ ಹುಳ್ಳಿ ಪ್ರಾರ್ಥಿಸಿದರು. ವೀರೇಶ ಬಡಿಗೇರ ನಿರೂಪಿಸಿದರು. ಸೋಮು ಕಂಬಳಿ ವಂದಿಸಿದರು.
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…