ತಾಜಾ ಸುದ್ದಿ

ಸುಳ್ಯ:ಗ್ರಾಮಸಭೆ ಅಜ್ಜಾವರ ಗ್ರಾಮಸ್ಥರ ನಿರ್ಲಕ್ಷ್ಯ

ಸುಳ್ಯ :ದಿನಾಂಕ 26/7/2021ರಂದು ಸೋಮವಾರ ಅಜ್ಜಾವರ ಗ್ರಾಮ ಪಂಚಾಯತ್ನ ವಿಶೇಷ ಗ್ರಾಮ ಸಭೆಯು ಮಧ್ಯಾಹ್ನ 2.30ಕ್ಕೆ ಕರೆದಿದ್ದು ಸಮಯ ಸುಮಾರು 3ಗಂಟೆಯವರೆಗೆ ಸಾಮಾನ್ಯ ಸಭೆಯನ್ನೇ ನಡೆಸಿ ನಂತರ ವಿಶೇಷ ಗ್ರಾಮ ಸಭೆ ಆರಂಭಿಸಿ ಕೇವಲ 30ನಿಮೀಷಗಳಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಅಭಿವೃದ್ಧಿ ಅಧಿಕಾರಿ, ಸದಸ್ಯರು ಇದ್ದು ಗ್ರಾಮಸ್ಥರಿಲ್ಲದೆ ಗ್ರಾಮಸ್ಥರು ಕುಳಿತು ಕೊಳ್ಳುವ ಕಡೆ ಪಂಚಾಯತ್ ಸದಸ್ಯರು ಕುಳಿತು ಸದ್ದಿಲ್ಲದೆ ವಿಶೇಷ ಗ್ರಾಮ ಸಭೆ ನಡೆದಿದ್ದು ಗ್ರಾಮಸ್ಥರನ್ನು ನಿರ್ಲಕ್ಷ್ಯದಿಂದ ಕಂಡಿದ್ದಾರೆ.

ವಿಶೇಷ ಗ್ರಾಮ ಸಭೆಗಳು ಈ ರೀತಿ ನಡೆಯುವುದಾದರೆ ಸಾಮಾನ್ಯ ಸಭೆಗಳು ಯಾವ ರೀತಿ ನಡೆಯುತ್ತಿದೆ ಎಂಬುದು ಪ್ರಶ್ನೆಯಾಗಿದೆ.ಗ್ರಾಮ ಪಂಚಾಯತ್ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳುದರಲ್ಲಿ ವಿಫಲವಾಗಿರುವುದಕ್ಕೆ ಈ ವಿಶೇಷ ಗ್ರಾಮ ಸಭೆ ಸಾಕ್ಷಿಯಾಗಿದೆ.

ಈ ಹಿಂದೆ ಗ್ರಾಮ ಸಭೆಯು ವಾರ್ಡ್ ಸಭೆ ನಡೆಸದೆ ನಡೆಸಿದಾಗ ಆ ಸಂದರ್ಭದಲ್ಲಿಯೂ ಗ್ರಾಮಸ್ಥರ ಬಗ್ಗೆ ಇರುವ ನಿರ್ಲಕ್ಷ್ಯ ಭಾವನೆಯನ್ನು ಸಭೆಯಲ್ಲಿ ಖಂಡಿಸಿಎಚ್ಚರಿಸಿದ್ದೇವೆ ಆದರೂ ಈ ಬಾರಿ ವಿಶೇಷಗ್ರಾಮ ಸಭೆಗೆ ಸಂಬಂಧಿಸಿ ಕರೆಯೋಲೆ ನೀಡದೆ , ಪತ್ರಿಕೆ ಪ್ರಕಟಣೆಯೂ ನೀಡದೆ ಗ್ರಾಮಸ್ಥರಿಗೆ ಮಾಹಿತಿ ನೀಡುವುದರಲ್ಲಿ ಎಡವಿ ನಿರ್ಲಕ್ಷ್ಯ ವಹಿಸಿ ಗ್ರಾಮ ಸಭೆ ನಡೆಸಿದ್ದು .

ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸುಳ್ಯ ತಾಲೂಕು ತಾಹಶೀಲ್ದಾರರಿಗೆ ಅಂಬೇಡ್ಕರ್ ಆದರ್ಶ ಸೇವ ಸಮಿತಿ ಕರ್ನಾಟಕ ಇದರ ಸುಳ್ಯ ತಾಲೂಕು ಹಾಗೂ ಜನಾಭಿವೃದ್ದಿ ವೇದಿಕೆ ಸುಳ್ಯ ತಾಲೂಕು ಇದರ ಅಧ್ಯಕ್ಷರಾದ ಸತೀಶ್ ಬೂಡುಮಕ್ಕಿಯವರು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಆಗ್ರಹಿಸಿ ಮನವಿ ನೀಡಿದರು.

ಈ ಸಂದರ್ಭದಲ್ಲಿ ಅಂಬೇಡ್ಕರ್ ಆದರ್ಶ ಸೇವ ಸಮಿತಿಯ ಉಪಾಧ್ಯಕ್ಷರಾದ ಗೋಪಾಲ ಇರಂತಮಜಲು, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ,ಸುನೀಲ್ ಕಾಂತಮಂಗಲರವರು ಜೋತೆಗಿದ್ದರು.

ಚಂದ್ರಶೇಖರ್ ಕೆ

Leave a Reply

ನಕಲು ಬಲ ರಕ್ಷಿಸಲಾಗಿದೆ