ಅರೋಗ್ಯಕಲ್ಯಾಣಸಿರಿನಮ್ಮ ಕೃಷಿಮನೋರಂಜನರಾಜಕೀಯ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿಸಿರಿ ವಿಶೇಷಹಳ್ಳಿ ಸುದ್ದಿಹೊಸ ತಾಂತ್ರಿಕತೆ

ಭಾರಿ ಮಳೆ ಸೂಚನೆ ಕೊಟ್ಟ ಹವಾಮಾನ ಇಲಾಖೆ

     ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಝಳ ಈಗಾಗಲೇ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಈ ವಾರದಲ್ಲಿ ನಾಲ್ಕು ದಿನ ಮಳೆ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಮಾತ್ರ ಎರಡು ದಿನ ಮಳೆಯಾಗಲಿದೆ ಎಂದು ವರದಿಯಾಗಿತ್ತು. ಈಗ ನಾಲ್ಕು ದಿನ ಎಂದು ಐಎಂಡಿ ವರದಿ ಹೇಳಿದೆ.

  ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ. ಎರಡು ದಿನಗಳ ನಂತರ ತಾಪಮಾನ ಏರಿಕೆಯಾಗಲಿದೆ. ರಾಜ್ಯದೆಲ್ಲೆಡೆ ಮೇ ಅಂತ್ಯದವರೆಗೂ ಒಣ ಹವೆ, ಬಿಸಿಲಿನ ಝಳ ಮುಂದುವರೆಯುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೇಲ್ಮೈ ಸುಳಿಗಾಳಿ ತೀವ್ರತೆಯಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಮಾರ್ಚ್ 18ರಿಂದಲೇ ಹಲವೆಡೆ ಮಳೆ ಮುನ್ಸೂಚನೆ ಸಿಗಲಿದೆ. ಮಾರ್ಚ್ 20 ರಿಂದ 22ರ ವರೆಗೆ ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆಯಾಗಲಿದೆ.

ಉತ್ತರ ಒಳನಾಡಿನ ಮಳೆಯಾಗಲಿದೆ :ಉತ್ತರ ಒಳನಾಡಿನ ಬೀದರ್,ಧಾರವಾಡ, ಗದಗ, ಕೊಪ್ಪಳ ಕಲ್ಯಾಣ ಕರ್ನಾಟಕದ ಕಲಬುರಗಿ, ರಾಯಚೂರು ಮುಂತಾದೆಡೆ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಂಭವವಿದೆ.

ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ