ಗಂಗಾವತಿ: ಪ್ರಸ್ತುತ ಜಾಗತೀಕ ಆನ್‌ಲೈನ್ ಮಾರುಕಟ್ಟೆಯಲ್ಲಿ ಖ್ಯಾತಿ ಪಡೆದಿರುವ ಅಮೇಜಾನ್ ಪ್ಲಿಪ್ ಕಾರ್ಡ್ ಕಂಪನಿಗಳ ಪಟ್ಟಿಯಲ್ಲಿ ಗಂಗಾವತಿ ನಗರಸಭೆಯಿಂದ ಪ್ರೋತ್ಸಾಹಿಸಿದ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ತಯಾರಿಸಿದ ಕರಕುಶಲ ವಸ್ತುಗಳು ಮತ್ತು ಪದಾರ್ಥಗಳು ಸೇರ್ಪಡೆಯಾಗಿವೆ ಎಂದು ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಕಲಬುರ್ಗಿಯಲ್ಲಿ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಶಗೂ ಡೇ ನಲ್ಮ್ ಯೋಜನೆಯಲ್ಲಿ ಮಹಿಳಾ ಸ್ವಸಹಾಯ ಗುಂಪಿನಲ್ಲಿ ತಯಾರಿಸಿದ ವಸ್ತಗಳು ಮತ್ತುನಪದಾರ್ಥಗಳ ಪೊಟೋನ ಪ್ರದರ್ಶನ ಮತ್ತು ಆಯ್ಕೆ ಕಾರ್ಯಕ್ರಮದಲ್ಲಿ ನಗರದ ಮಹಿಳಾ ಸ್ವಸಹಯ ಗುಂಪುಗಳಾದ ಶ್ರೀಮೂಕಾಂಭಿಕಾ ಸ್ವ-ಸಹಾಯ ಸಂಘ ಆಶ್ರಯ ಕಾಲೋನಿ, ಇವರ ಉತ್ಪನ್ನ ತ್ರಾಮದ ಬಿಂದಿಗೆ ಮೇಲೆ ಚಿತ್ತಾರ ಬಿಡುಸುವುದು, ಶ್ರೀನಿಮಿಷಾಂಭ ಸ್ವ-ಸಹಾಯ ಸಂಘ ಹಿರೇಜಂತಕಲ್, – ಇವರ ಉತ್ಪನ್ನ ಜೂಟ್ ಬ್ಯಾಗ್ ತಯಾರಕೆ, ಶ್ರೀದುರುಗೇಶ್ವರಿ ಸ್ವ-ಸಹಾಯ ಸಂಘ ಬಂಬೂಬಜಾರ್ ಗಂಗಾವತಿ – ಇವರ ಉತ್ಪನ್ನ ಬಿದಿರಿನ ಸಾಮಾಗ್ರಿಗಳ ತಯಾರಕೆ, ಶ್ರೀ ದುರ್ಗಾಶಕ್ತಿ ಸ್ವ-ಸಹಾಯ ಸಂಘ ಕಿಲ್ಲಾ ಏರಿಯಾ, ಗಂಗಾವತಿ – ಇವರ ಉತ್ಪನ್ನ ಗೊಂಭೆಗಳÀ ತಯಾರಕೆ ಈ ಎಲ್ಲಾ ಸ್ವ-ಸಹಾಯ ಸಂಘಗಳು ಭಾಗವಹಿಸಿ ಪ್ರಶಂಸನೆಗೆ ಒಳಗಾಗಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಇನ್ನೂ ಮುಂದೆ ಮಾರಾಟವಾಗಲಿವೆ ಎಂದು ತಿಳಿಸಿದ್ದಾರೆ.