ಪ್ರಶಸ್ತಿ ಪ್ರದಾನ ಮಾಡಿದ ಆರ್ಡಿಪಿಆರ್ ಇಲಾಖೆ ಸಚಿವ ಎಸ್.ಈಶ್ವರಪ್ಪ
*ಜಿಪಂ ಸಿಇಒ ರಘುನಂದನ್ ಮೂರ್ತಿ ಸೇರಿ ಐವರಿಗೆ ಪ್ರಶಸ್ತಿ
ಕೊಪ್ಪಳ: 2020-21ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನ ಮಾಡಿದ ಹಿನ್ನೆಲೆಯಲ್ಲಿ ಜಿಪಂ ಸಿಇಒ ರಘುನಂದನ್ ಮೂರ್ತಿ ಸೇರಿ ಜಿಲ್ಲೆಯ ಐವರಿಗೆ ಪ್ರಶಸ್ತಿಗಳು ಬಂದಿವೆ.
ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಲಶಕ್ತಿ ಅಭಿಯಾನ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭsÀದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಎಸ್.ಈಶ್ವರಪ್ಪ, ಸಚಿವ ಜಗದೀಶ ಶೆಟ್ಟರ್ ಅವರಿಂದ ಪ್ರಶಸ್ತಿ ಪಡೆದುಕೊಂಡರು.

‘ಜಿಲ್ಲೆಯಲ್ಲಿ ಮೊದಲ ಹಂತದ ಕೋವಿಡ್ ಸಂದರ್ಭದಲ್ಲಿ ನಗರ ಪ್ರದೇಶದಿಂದ ಸ್ವಗ್ರಾಮಕ್ಕೆ ಬಂದವರಿಗೆ ಜಾಬ್ ಕಾರ್ಡ್ ನೀಡಿರುವುದು, ಹೆಚ್ಚಿನ ಕೂಲಿಕಾರ್ಮಿಕರಿಗೆ ಕೆಲಸ ನೀಡಿ ಸಕಾಲಕ್ಕೆ ಕೂಲಿ ಹಣ ಪಾವತಿಸಿರುವುದು, ವಸತಿ ಶಾಲೆ, ಶಾಲೆ ಮೈದಾನಗಳಲ್ಲಿ ಕೈ ತೋಟ ನಿರ್ಮಾಣ ಹಾಗೂ ವಿಕಲಚೇತರಿಗೂ ನರೇಗಾ ಸೌಲಭ್ಯ ಕಲ್ಪಿಸಿ ಅತ್ಯುತ್ತಮ ಸಾಧನೆ ಮಾಡಿದ್ದರಿಂದ ಜಿಲ್ಲಾ ಪಂಚಾಯತ್ ಸಿಇಒ ರಘುನಂದನ್ ಮೂರ್ತಿ ಅವರಿಗೆ ರಾಜ್ಯ ಮಟ್ಟದ ಲಬಿಸಿದೆ.
ಇನ್ನೂ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ರೋಜಗಾರ್ ದಿವಸ್ ಆಚರಣೆ, ಮಹಿಳಾ ಕಾಯಕೋತ್ಸವಕ್ಕೆ ವ್ಯಾಪಕ ಪ್ರಚಾರ ನೀಡಿ ಹೆಚ್ಚಿನ ಮಹಿಳೆಯರಿಗೆ ಕೆಲಸ ನೀಡಿರುವುದು, ಎಲ್ಲ ಗ್ರಾಪಂಗಳಲ್ಲಿ ವಿಕಲಚೇತನರ ಸರ್ವೇ ಅಚ್ಚುಕಟ್ಟಾಗಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾ ನರೇಗಾ ಸಂಯೋಜಕರಾದ ಶ್ರೀನಿವಾಸ್ ಚಿತ್ರಗಾರ ಅವರು ರಾಜ್ಯ ಮಟ್ಟದ ಪ್ರಶಸ್ತಿ ಸ್ವೀಕಾರ ಮಾಡಿದರು.

ಗ್ರಾಪಂ ಮಟ್ಟದಲ್ಲಿ ನರೇಗಾ ಕುರಿತು ಜನರಿಗೆ ಮಾಹಿತಿ ನೀಡಿ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದ ಹಿನ್ನೆಲೆಯಲ್ಲಿ ತಳುವಗೇರಾ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶರಣಮ್ಮ ಅವರು ‘ಅತ್ಯುತ್ತಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ’ ಎಂಬ ಪ್ರಶಸ್ತಿ ಪಡೆದುಕೊಂಡರು.
ಸಕಾಲಕ್ಕೆ ಎನ್ಎಂಆರ್ ಸೇವ್ ಮಾಡುವುದು, ಜಾಬ್ ಕಾರ್ಡ್ ಗೆ ಆಧಾರ್ ಜೋಡಣೆ ಹೀಗೆ ಹತ್ತಾರು ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಬಾಳಪ್ಪ ಎಚ್.ಗುಮಗೇರಿ ಅವರು ‘ಅತ್ಯುತ್ತಮ ಡೇಟಾ ಎಂಟ್ರಿ ಆಫರೇಟರ್’ ಎಂಬ ಪ್ರಶಸ್ತಿ ಪಡೆದುಕೊಂಡರು.
ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಏಳೆಂಟು ವರ್ಷಗಳಿಂದ ಕೆಲಸಕ್ಕೆ ಬರಲು ಜನರಿಗೆ ಪ್ರೇರೆಪÀಣೆ, ಸಕಾಲಕ್ಕೆ ಕೂಲಿಕಾರ್ಮಿಕರಿಗೆ ಕೆಲಸ ನೀಡಿರುವ ಹಿನ್ನೆಲೆಯಲ್ಲಿ ಕಾಯಕಬಂಧು ಹನುಮಂತಿ ಮಂಟಿಗೇರಿ ಅವರು ‘ಅತ್ಯುತ್ತಮ ಮೇಟ್ಸ್’ (ಕಾಯಕಬಂಧು) ಪ್ರಶಸ್ತಿ ಸ್ವೀಕಾರ ಮಾಡಿದರು.
ಈ ಕುರಿತು ಜಿಪಂ ಸಿಇಒ ರಘುನಂದನ್ ಮೂರ್ತಿ ಮಾತನಾಡಿ, ಜಿಲ್ಲೆಯ ಎಲ್ಲ ಜಿಪಂ, ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ಹಾಗೂ ನರೇಗಾ ಸಿಬ್ಬಂದಿ ಅವರ ಸಹಕಾರದಿಂದ ಈ ಸಾಧನೆ ಮಾಡಲಾಗಿದೆ. ಕರೊನಾ ಸಂಕಷ್ಟದ ಸಂದರ್ಭದಲ್ಲಿ ನಿಯಮ ಪಾಲನೆ ಜೊತೆಗೆ ಸಾವಿರಾರು ಜನರಿಗೆ ಉದ್ಯೋಗ ನೀಡಿರುವುದು ತೃಪ್ತಿ ಜೊತೆಗೆ ಬಹಳ ಖುಷಿ ನೀಡಿದೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿಗಳು ಹಾಗೂ ಬೃಹತ್ ಕೈಗಾರಿಕೆ ಸಚಿವರಾದ ಜಗದೀಶ ಶೆಟ್ಟರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರಾದ ಅನಿರುದ್ಧ ಶ್ರವಣ್, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರದಾನ ಕಾರ್ಯದರ್ಶಿ ಎಲ್.ಕೆ.ಅತಿಕ್, ಕೊಪ್ಪಳ ಜಿಪಂ ಉಪ ಕಾರ್ಯದರ್ಶಿ ಶರಣಬಸವರಾಜ, ಇಒ ಸೋಮಶೇಖರ್, ಕುಷ್ಟಗಿ ತಾಪಂ ಇ ಓಕೆ.ತಿಮ್ಮಪ್ಪ, ಸಹಾಯಕ ನಿರ್ದೇಶಕರಾದ ವೆಂಕಟೇಶ ಸೇರಿ ಇತರರಿದ್ದರು