Uncategorizedಕಲ್ಯಾಣಸಿರಿ

ಮೇ 29ರಂದು ಹಾಲುಮತ ಮಹಾಸಭಾದ ಸಭೆ


ಕೊಪ್ಪಳ : ಮೇ 26 :- ದಿನಾಂಕ ಮೇ 29 ರವಿವಾರದಂದು ಹಾಲುಮತ ಮಹಾಸಭಾದ ಕೊಪ್ಪಳ ತಾಲೂಕ ಘಟಕ ಮತ್ತು ನಗರ ಘಟಕ ರಚನೆ ಸಭೆಯನ್ನು ಭಾಗ್ಯನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕರೆಯಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಕೊಪ್ಪಳ ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಎಮ್ ಕೌದಿ ಅವರು ವಹಿಸಲಿದ್ದಾರೆ. ರಾಜ್ಯ ಸಂಚಾಲಕರಾದ ರಾಜು ಬಿ ಮೌರ್ಯ,ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ದ್ಯಾಮಣ್ಣ ಕರಿಗಾರ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಗ್ಯಾನಪ್ಪ ತಳಕಲ್ , ಜಿಲ್ಲಾ ಉಪಾಧ್ಯಕ್ಷರಾದ ಕುಬೇರ ಮಜ್ಜಿಗಿ, ಗುಂಡಪ್ಪ ನಿಡಶೇಸಿ, ಹಿರಿಯ ಉಪಾಧ್ಯಕ್ಷರಾದ ಹನುಮಂತಪ್ಪ ಹನುಮಪೂರ್, ಹನುಮಗೌಡ ದಳಪತಿ, ಜಿಲ್ಲಾ ಸಂಚಾಲಕರಾದ ಲಿಂಗರಾಜ್ ಚಳಗೇರಿ ಮತ್ತು ಜಿಲ್ಲಾ ಹಾಲುಮತ ಮಹಾಸಭಾದ ಪದಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಕುರುಬ ಸಮಾಜದ ರಾಜಕೀಯ ಮುಖಂಡರು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಹೀಗಾಗಿ ರವಿವಾರ ನಡೆಯುವ ತಾಲೂಕ ಘಟಕ, ನಗರ ಘಟಕ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ತಾಲೂಕಿನ ಹಾಲುಮತ ಸಮಾಜದ ಹಿರಿಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಹಾಲುಮತ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಮುದ್ದಪ್ಪ ಗೊಂದಿಹೊಸಳ್ಳಿ ಸಾ. ಬೇವಿನಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವ ನಂ -9844333919, 9964461710, 9980239351…

ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ