ಕಲ್ಯಾಣಸಿರಿತಾಜಾ ಸುದ್ದಿರಾಜಕೀಯ ಸುದ್ದಿ

3 ತಿಂಗಳ ಮಾಸಾಶನ ಸಿಗದೇ ವಿಶೇಷಚೇತನರ ಬದುಕು ಕಂಗಾಲು

ದೇವರಾಜ ವರದಿಗಾರರು ಗಂಗಾವತಿ

3 ತಿಂಗಳ ಮಾಸಾಶನ ಸಿಗದೇ ವಿಶೇಷಚೇತನರ ಬದುಕು ಕಂಗಾಲು
ಕೊಪ್ಪಳ: ದೈಹಿಕ ನ್ಯೂನ್ಯತೆ ಹೊಂದಿರುವ ವಿಕಲಚೇತನರು ಕೆಲಸ‌ ಮಾಡಲು ಆಗದೆ ಸರ್ಕಾರದಿಂದ ಬರುವ ಮಾಶಾಸನವನ್ನೇ ನಂಬಿ ಜೀವನ‌ ನಡೆಸುತ್ತಾರೆ.ಆದರೆ, ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಜಿಲ್ಲೆಯ ವಿಶೇಷಚೇತನರು ಕಳೆದ ಮೂರು ತಿಂಗಳಿಂದ ಮಾಸಾಶನ ಬಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ವಿಕಲಚೇತನರಿದ್ದಾರೆ. ಈ ಪೈಕಿ ಶೇ.50ಕ್ಕಿಂತ ಕಡಿಮೆ ಅಂಗವೈಕಲ್ಯ ಹೊಂದಿದವರಿಗೆ 600 ರುಪಾಯಿ, ಶೇ.75ಕ್ಕಿಂತ ಅಧಿಕ ಅಂಗವಿಕಲತೆ ಹೊಂದಿರುವವರಿಗೆ 1400 ರೂ. ಮಾಸಾಶನವನ್ನು ಸರ್ಕಾರ ನೀಡುತ್ತಿದೆ. ಖಜಾನೆ ಇಲಾಖೆಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 600 ರೂಪಾಯಿ ಮಾಸಾಶನ ಪಡೆಯುವ 11,964 ವಿಕಲಚೇತನರು ಹಾಗೂ 1400 ರೂ. ಮಾಸಾಶನ ಪಡೆಯುವ 16,373 ವಿಕಲಚೇತನರಿದ್ದಾರೆ.

ಇತ್ತೀಚಿಗೆ ಜಿಲ್ಲೆಗೆ ಭೇಟಿ ನೀಡಿದ್ದ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎನ್ನುತ್ತಾರೆ ವಿಕಲಚೇತನರು.ಜಿಲ್ಲೆಯಲ್ಲಿನ ಎಲ್ಲಾ ವಿಶೇಷಚೇತನ ಫಲಾನುಭವಿಗಳಿಗೆ ಬಾಕಿ ಮಾಸಾಶನ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ದೈಹಿಕ ನ್ಯೂನ್ಯತೆ ಹೊಂದಿರುವ ನಮಗೆಲ್ಲ ಮನೆ ಅಥವಾ ಆಯಾ ಗ್ರಾಮಗಳಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

Kalyanasiri News
ದೇವರಾಜ್ Deva

Leave a Reply

ನಕಲು ಬಲ ರಕ್ಷಿಸಲಾಗಿದೆ