ಕಲ್ಯಾಣಸಿರಿ

ವಿಜಯಪುರ: ಸಣ್ಣ ನೀರಾವರಿ ಚೀಫ್ ಎಂಜಿನಿಯರ್ಕಚೇರಿಯಲ್ಲಿಸಮಯದಪರಿಪಾಲನೆ ಆಗ್ತಾಇಲ್ಲಾ:ಪತ್ರಕರ್ತ ಹಾಗೂ ಹೋರಾಟ ಗಾರ ಬಸವರಾಜು ಆರೋಪ…


ವಿಜಯಪುರ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತನ್ನ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಗಳ ಕಾರ್ಯಕ್ಷಮತೆ ಹಾಗೂ ಸಮಯ ಪರಿಪಾಲನೆಯ ಶಿಷ್ಟಾಚಾರದ ಪಾಲನೆಯ ಬಗ್ಗೆ ಆದೇಶಗಳನ್ನು ಹೊರಡಿಸಿದ್ದು ಇವು ನೆಪ ಮಾತ್ರಕ್ಕೆ ಇವೆ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿವೆ. ಸರ್ಕಾರದ ಹಲವಾರು ಇಲಾಖೆಗಳಲ್ಲಿ ಮದ್ಯಾಹ್ನದ ಊಟದ ನಂತರ ಸಿಬ್ಬಂದಿಗಳು 2.30 ಕ್ಕೆ ಕಛೇರಿಯಲ್ಲಿರಬೇಕು ಎಂಬ ಆದೇಶ ಇದೆ. ಆದರೇ 3.30 ಆದರೂ ಕೆಲವರು ಕಚೇರಿಗೆ ಬರೋದಿಲ್ಲವಂತೆ. ಇದಕ್ಕೆ ಉದಾಹರಣೆ ಎಂಬಂತೆ ಇಂದು ನಮ್ಮ ನ್ಯೂಸ್ ಸಮೂಹದ ರಾಜ್ಯ ವಿಶೇಷ ಪ್ರತಿನಿಧಿ ಹಾಗೂ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ವಿಜಯಪುರ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರ ಕಚೇರಿಗೆ ಮದ್ಯಾಹ್ನ 3.15 ಕ್ಕೆ ಭೇಟಿ ಕೊಟ್ಟಾಗ ಕಚೇರಿಯ ಒಟ್ಟು 70 ಸಿಬ್ಬಂದಿಗಳಲ್ಲಿ ಕೇವಲ 5 ಜನ ಸಿಬ್ಬಂದಿಗಳು ಬಿಟ್ಟರೇ ಬಹುತೇಕ ಸಿಬ್ಬಂದಿಗಳು ಸಮಯಕ್ಕೆ ತಕ್ಕಂತೆ ಬಾರದೇ ಸಮಯ ಪರಿಪಾಲನೆಯ ಶಿಷ್ಟಾಚಾರ ಉಲ್ಲಂಘಿಸಿದ್ರಾ ಎಂಬ ಸಂಶಯ ಕಾಡ್ತಾ ಇದೆ. ಗುತ್ತಿಗೆದಾರರು ಹಾಗೂ ಸಾರ್ವಜನಿಕರ ಪ್ರಕಾರ ಮದ್ಯಾಹ್ನದ ನಂತರ ಈ ಕಚೇರಿಯಲ್ಲಿ ಸಿಬ್ಬಂದಿಗಳು 4 ಘಂಟೆಗೆ ಬರುತ್ತಾರಂತೆ. ಈ ಕಛೇರಿಯ ವ್ಯಾಪ್ತಿಗೆ ಒಟ್ಟು 8 ಜಿಲ್ಲೆಗಳು ಬರುತ್ತಿದ್ದು,

ಕೆಲಸ ಕಾರ್ಯದ ನಿಮಿತ್ಯ ಇಲ್ಲಿಗೆ ಬರಬೇಕಾದ್ರೆ ಮದ್ಯಾಹ್ನ ವಾಗುತ್ತದೆ. ಆದರೇ ಇಲ್ಲಿ ಸಿಬ್ಬಂದಿಗಳೋ 3.30 ಆದ್ರೂ ಕಚೇರಿಗೆ ಬರದೇ ಇರುವ ಕಾರಣ ಸಾಕಷ್ಟು ತೊಂದರೆ ಆಗ್ತಾ ಇದೆ. ಆದ್ದರಿಂದ ಇಂದು ನಮ್ಮ ಪತ್ರಿಕಾ ಸಮೂಹದ ರಾಜ್ಯ ವಿಶೇಷ ಪ್ರತಿನಿಧಿ ಹಾಗೂ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಸಣ್ಣ ನೀರಾವರಿ ಇಲಾಖೆ ಸಚಿವರ ಆಪ್ತ ಕಾರ್ಯ ದರ್ಶಿಯವರ ಗಮನಕ್ಕೆ ತೆಗೆದುಕೊಂಡು ಬಂದರು. ಇನ್ನಾದ್ರೂ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಹಲವರು ಇಲಾಖೆಗಳಲ್ಲಿ ಮದ್ಯಾಹ್ನದ ನಂತರ ಸಮಯದ ಪರಿಪಾಲನೆಯ ಶಿಷ್ಟಾಚಾರ ಪಾಲನೆ ಯಾಗಲಿದೆಯೇ ಎಂಬುದನ್ನು ಕಾಡುನೋಡಬೇಕಿದೆ *💐👏

ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ