ಕಲ್ಯಾಣಸಿರಿ

ಮೋದಿ ಓಕೆ, ಯೋಗಿ ಯಾಕೆ ? ಈಶ್ವರಪ್ಪನವರೇ ಜ್ಯೋತಿ ಪ್ರಶ್ನೆ


ಕೊಪ್ಪಳ, ಜು. ೨೯: ಮಾಜಿ ಸಚಿವ ಹಿರಿಯ ರಾಜಕೀಯ ಧುರೀಣರಾದ ಕೆ. ಎಸ್. ಈಶ್ವರಪ್ಪನವರು ತಮ್ಮ ಹೇಳಿಕೆಯಲ್ಲಿ ಇಳಿವಯಸ್ಸಿನಲ್ಲೂ ಮಿತಿ ಕೊಡುತ್ತಿಲ್ಲ ಎನ್ನುವದು ನಿಜವಾಗಿಯೂ ರಾಜ್ಯದ ರಾಜಕೀಯ ಶೋಚನೀಯ ಸಂಗತಿ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ವಿಷಾಧಿಸಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿ, ಮಾಜಿ ಸಚಿವರು ಮಾಧ್ಯಮಕ್ಕೆ ಮಾತನಾಡಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಬುದ್ದಿ ಕಮ್ಮಿ ರಾಜೀನಾಮೆ ಕೊಟ್ಟರೆ ಆ ಸ್ಥಳ ತುಂಬಲು ಬೇರೆಯವರು ಇದ್ದೇ ಇರುತ್ತಾರೆ, ರಾಜೀನಾಮೆಕೊಟ್ಟು ಎಲ್ಲಿಗೆ ಹೋಗುತ್ತೀರಿ ಎಂದಿದ್ದಾರೆ, ಅದನ್ನು ಆ ಪಕ್ಷದ ಯುವಜನರು ಮತ್ತು ಅವರ ಪೋಷಕರು ಬೇಗ ಅರ್ಥ ಮಾಡಿಕೊಳ್ಳಬೇಕು, ಕಾರಣ ಅವರೇ ಮುಂದುವರೆದು ಮಾತನಾಡಿ ತಮ್ಮ ಸಾವನ್ನೂ ಲೆಕ್ಕಿಸದೇ ರಾಮ ಪ್ರಸಾದ್ ಮುಖರ್ಜಿ ಅಂತವರು ಹೇಗೆ ಹಿಂದೆ ಸರಿಯದೇ ಹೋರಾಡಿದರು ಹಾಗೇ ನೀವು ಸತ್ತರೂ ಸಹ ಹಿಂದುತ್ವದಿAದ ಹಿಂದೆ ಸರಿಯಬಾರದು ಎಂದಿದ್ದಾರೆ, ಇದು ನಿಜವಾಗಿಯೂ ಆತ್ಮಹತ್ಯೆಗೆ ಅಥವಾ ಜಿಹಾದಿಗೆ ಕುಮ್ಮಕ್ಕು ನೀಡುವ ಹೇಳಿಕೆಯಾಗಿದ್ದು, ಕೂಡಲೇ ನ್ಯಾಯಾಲಯ ಇವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದು ಮೊಗವೀರ ಯುವಕ ಚುನಾವಣೆ ಹೊತ್ತಲ್ಲಿ ಸತ್ತರೆ ಆತನಿಗೆ ಒಂದು ಕೋಟಿ ಹಣ ಕೊಡುವ ಬಿಜೆಪಿ ಮತ್ತು ಬಿಜೆಪಿ ಸರಕಾರ ಅದೇ ಹರ್ಷ ಶಿವಮೊಗ್ಗ, ಶಿವು ಉಪ್ಪಾರ ಮುಂತಾದವರು ಸತ್ತಾಗ ಏನು ನ್ಯಾಯ ಕೊಟ್ಟಿದೆ, ಹರ್ಷನ ಅಕ್ಕಳಿಗೆ ಬಿಜೆಪಿ ಸರಕಾರ ಸಚಿವರು ಹೇಗೆ ನಡೆದುಕೊಂಡರು ಎಂಬುದನ್ನು ಮಾಧ್ಯಮದವರೇ ತೋರಿಸಿದ್ದಾರೆ. ಇನ್ನು ಪರೇಶ ಮೇಸ್ತಾ ಕೇಸ್ ಸಿಬಿಐ ವಹಸಿಕೊಂಡು ನಾಲ್ಕು ವರ್ಷ ಆದರೂ ಉತ್ತರ ಬಂದಿಲ್ಲ, ಪ್ರವೀಣ್ ಹತ್ಯ ಮತ್ತು ಹಿಂದು ಕಾರ್ಯಕರ್ತರ ಕಣ್ಣೊರೆಸುವ ತಂತ್ರವಾಗಿ ಎನ್.ಐ.ಎಗೆ ಕೇಸ್ ಹಸ್ತಾಂತರಿಸಿ ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ, ಹಿಂದೂ ಕಾರ್ಯಕರ್ತನ ಸಾವಿಗೆ ಕಾರಣ ತಿಳಿಯದೇ ಕಂಗಾಲಾಗಿ ಎನ್.ಐ.ಎಗೆ ಕೇಸ್ ಹಸ್ತಾಂತರಿಸಿದ ಬಿಜೆಪಿ ಸರಕಾರ. ಮುಸ್ಲಿಂ ಯುವಕ ಸತ್ತ ತಕ್ಷಣ ಆತ ಪ್ರೀತಿಯ ವಿಷಯಕ್ಕೆ ಸತ್ತಿದ್ದಾನೆ ಎಂದು ರಾತ್ರೋರಾತ್ರಿ ಕಂಡು ಹಿಡಿಯುವ ಸಂಗತಿ ಸೋಜಿಗವೆನಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಮೋದಿ ಅವರು ದೇಶದ ಪ್ರಧಾನಿಗಳು ಅದಕ್ಕೆ ಅವರ ಮಾಹಿತಿ, ಮಾರ್ಗದರ್ಶನ, ಸಲಹೆ ಸಹಕಾರ ಅಗತ್ಯ ಆದರೆ ಯೋಗಿ ಉತ್ತರಪ್ರದೇಶದ ಸಿಎಂ, ಆತ ಪ್ರಬಲ ಹಿಂದಿ ಹೇರುವ ಉತ್ತರ ಭಾರತೀಯ ಮತ್ತು ಮತೀಯವಾದಿ ರಾಜಕಾರಣಿ, ಆತನಿಗೆ ಭಾರತದ ಪ್ರಜಾಸತೆಯ ಬಗ್ಗೆ ಕಿಂಚಿತ್ತು ನಂಬಿಕೆ ಮತ್ತು ವಿಶ್ವಾಸ ಇಲ್ಲದ ವ್ಯಕ್ತಿಯ ಮಾರ್ಗದರ್ಶನದಲ್ಲಿ ಕರ್ನಾಟಕ ಸರಕಾರವನ್ನು ನಡೆಸುವಷ್ಟು ಮತಿಭ್ರಷ್ಟರಾದರೆ ಕನ್ನಡಿಗರು ಎಂಬುದಕ್ಕೆ ಬಿಜೆಪಿ ಉತ್ತರಿಸಬೇಕು. ದೇಶದಲ್ಲಿ ಶಾಂತಿ ಸೌಹಾರ್ಧಕ್ಕೆ ಹೆಸರಾದ ಕರ್ನಾಟಕ ೨೦೦೮ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿAದ ವಾತಾವರಣ ಕೆಡುತ್ತಲೇ ಬಂದಿದ್ದು, ಈಗ ವಿಪರೀತವಾಗಿದೆ. ಕೂಡಲೇ ಸಂವಿಧಾನದ ಅಂಗಗಳು ಮಧ್ಯಪ್ರವೇಶ ಮಾಡಿ ದೇಶ ಉಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಗುಜರಾತ್ ಮಾಡೆಲ್ ಎಂದು ರಾಜ್ಯವನ್ನೇ ನಿರುದ್ಯೋಗಿಯನ್ನಾಗಿಸಿದ್ದು ಈಗ ಯೋಗಿ ರಾಜ್ ಹೆಸರಲ್ಲಿ ಬಿಜೆಪಿ ವಿರೋಧಿಗಳ ಮನೆ ಧ್ವಂಸ ಮಾಡುವ ನೀಚತನಕ್ಕೆ ಇಳಿಯುತ್ತಿರುವದನ್ನು ಖಂಡಿಸುತ್ತೇವೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ